ಹೂವಿನಹಡಗಲಿ :
ಪಟ್ಟಣದ ಮಡಿವಾಳ ಮಾಚಯ್ಯ ದೇವಸ್ಥಾನ ನಿರ್ಮಾಣಕ್ಕೆ 5 ಲಕ್ಷ ರೂ ಅನುದಾನ ನೀಡುವುದಾಗಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.
ಅವರು ಪಟ್ಟಣದ ರಾಜೀವಗಾಂಧಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಮಡಿವಾಳ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಅಲ್ಪಸಂಖ್ಯಾತ ಸಮಾಜವಾದ ಮಡಿವಾಳ ಜನಾಂಗವು ಕಾಯಕನಿಷ್ಠೆಯನ್ನು ಹೊಂದಿ ಎಲ್ಲಾ ಸಮಾಜದವರೊಂದಿಗೆ ಸೌಹಾರ್ದಯುತ ಜೀವನ ನಡೆಸುತ್ತಿದ್ದು, ಉತ್ತಮ ಬಾಂಧವ್ಯ ಹೊಂದಿದೆ ಎಂದರು.
ಮಡಿವಾಳ ಸಮಾಜಕ್ಕೆ ದೋಬಿಗಾಟ್ ನಿರ್ಮಿಸಿ, ಸಮಾಜಬಾಂಧವರ ಕಾಯಕಕ್ಕೆ ಪೂರಕವಾಗಿ ಅನುಕೂಲ ಕಲ್ಪಿಸುವುದಾಗಿ ಭರವಸೆ ನೀಡಿದರು.
ಸಾಹಿತಿ ಡಾ.ಅಂಜನಾಕೃಷ್ಣಪ್ಪ, ಮಡಿವಾಳ ಮಾಚಯ್ಯನವರ ಕುರಿತು ಉಪನ್ಯಾಸ ನೀಡಿದರು. ಸಂದರ್ಭದಲ್ಲಿ ತಹಶೀಲ್ದಾರ ರಾಘವೇಂದ್ರರಾವ್, ತಾ.ಪಂ. ಇ.ಓ. ಯು.ಹೆಚ್.ಸೋಮಶೇಖರ, ಮಡಿವಾಳ ಸಮಾಜದ ಅಧ್ಯಕ್ಷ ಎಂ.ಸುರೇಶ, ಮುಖಂಡರಾದ ಎಂ.ಪರಮೇಶ್ವರಪ್ಪ, ಅಟವಾಳಗಿ ಕೊಟ್ರೇಶ, ಮಾಜಿ ಪುರಸಭೆ ಅಧ್ಯಕ್ಷೆ ಶಕುಂತಲಮ್ಮ, ಬಿಸಿಎಂ ಇಲಾಖೆಯ ಅಧಿಕಾರಿ ಎಂ.ಪಿ.ಎಂ.ಅಶೋಕ ಸೇರಿದಂತೆ ಸಮಾಜದ ಮುಖಂಡರು, ಕಾರ್ಯಕರ್ತರು ಹಲವರು ಇದ್ದರು. ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.