ಕನಕದಾಸರು ಜ್ಞಾನ ಸಂಸ್ಕಾರ ಪಾಂಡಿತ್ಯದಿಂದ ಸಂತರಾದರು ಕಾಗಿನೆಲೆ ಶ್ರೀ

ಕೊಟ್ಟೂರು 

        ತಳ ಸಮುದಾಯದ ದಾರ್ಶನಿಕರ ಜಯಂತಿ, ಉತ್ಸವಗಳು ಆ ಸಮುದಾಯಗಳ ವಿಭಜನೆಗೆ ಕಾರಣವಾಗದೆ ಒಕ್ಕಟ್ಟಿಗೆ ಪ್ರೇರಣೆಯಾಗಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀನಿರಂಜನಾನಂದಪುರಿ ಸ್ವಾಮಿಗಳು ನುಡಿದರು.

       ಪಟ್ಟಣದಲ್ಲಿ ಶನಿವಾರ ಹಾಲುಮತ ಸಮಾಜ, ಕೊಟ್ಟೂರು ತಾಲೂಕು ಕುರುಬರ ಸಂಘ, ಸಂಗೋಳ್ಳಿ ರಾಯಣ್ಣ ಯುವಕರ ಸಂಘ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕನಕದಾಸರ 531 ನೇ ಜಯಂತಿಯ ಸಾನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

       ಕನಕದಾಸರ ತಮ್ಮ ಜೀವಿತದ ಅವಧಿಯಲ್ಲಿ ಅನೇಕ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದರೂ, ಯಾರಿಗೂ ತೊಡೆತಟ್ಟದೆ ಸಾಮರಸ್ಯೆದಿಂದ ತಮ್ಮ ಜ್ಞಾನ ಸಂಸ್ಕಾರದಿಂದ ಎಲ್ಲಾವರ್ಗದ ಮನಗೆದ್ದು ಸಂತರಾದರು ನೀವು ಇವರ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.

      ಯಾವ ವ್ಯಕ್ತಿ ಯಾವುದೇ ಸಮುದಾಯದಲ್ಲಿ ಜನಿಸಿದರೂ ಆ ಸಮುದಾಯದ ಇತಿಹಾಸ. ಪರಂಪರೆಯನ್ನು ಅರಿತುಕೊಂಡು ಮತ್ತೊಂದು ಸಮಾಜಕ್ಕೆ ಮಾರ್ಗದರ್ಶಕನಾದಾಗ ಮಾತ್ರ ಆ ಸಮುದಾಯಕ್ಕೆ ಕೀರ್ತಿ ತಂದಂತ್ತಾಗುತ್ತದೆ ಎಂದರು.

      ಜಯಂತಿಗಳು ಇತ್ತೀಚಿಗೆ ಶೋಕಿಯಾಗಿವೆ. ಅವರಿವರ ಕೈಯಲ್ಲಿ ಸಿಕ್ಕು ನರಳುವಂತ್ತಾಗಿವೆ ಎಂದು ಶ್ರೀಗಳು ಕನಕದಾಸರ ಜಯಂತಿ ಸಮಾಜದ ಎಲ್ಲಾ ವರ್ಗದವರು ಪ್ರೀಸುವ ಜಯಂತಿಯಾಗಬೇಕು ಎಂದು ಸಮಾಜಕ್ಕೆ ಕರೆ ನೀಡಿದರು.

        ಡಾ. ರೇವಯ್ಯ ಒಡೆಯರ್, ಕನಕದಾಸರ ಕುರಿತು ಉಪನ್ಯಾಸ ನೀಡಿ, ಜಯಂತಿಗಳು ಪ್ರಚಾರ ಸರಕಾಗಬಾರದು. ಜಾತ್ಯಾತೀತವಾಗಿ ಎಲ್ಲರೂ ಸಂಭ್ರಮಿಸುವಂತ್ತಾಗಬೇಕು ಎಂದರು.

       ಶ್ರೀಮತಿ ಗೀತಾ ಭೀಮಾನಾಯ್ಕ ಮಾತನಾಡಿ, ಪ್ರಾಚೀನ ಪರಂಪರೆ, ಸಂಸ್ಕತಿ, ಸಂಪ್ರದಾಯಗಳನ್ನು ಹಾಲುಮತ ಸಮಾಜಹೊಂದಿದೆ. ಇಂದಿಗೂ ಶುಭಕಾರ್ಯಗಳಿಗೆ ಈ ಸಮಾಜದವರಿಂದ ಆರಂಭಿಸುತ್ತಾರೆ. ಈ ಸಮಾಜದವರು ಎಂದೂ ಬೇರೆಯವರಿಗೆ ಕೇಡು ಬಯಸದವರು. ಅನ್ಯರಿಗೆ ಯಾವಾಗಲೂ ಶುಭಕೋರುವ ಸಮಾಜ ಎಂದು ಬಣ್ಣಿಸಿದರು.

         ಸಮಾಜದ ಮುಖಂಡ ಕಲ್ಲಂಬ ಪಂಪಾಪತಿ ಮಾತನಾಡಿದ, ಕೇವಲ ಕನಕದಾಸರ ಜಯಂತಿ ಆಚರಿಸುವುದರ ಜತೆಯಲ್ಲಿ ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣಕೊಡಿಸಿದಾಗ ಮಾತ್ರ ಜಯಂತಿಗೆ ಅರ್ಥ ಬರುತ್ತದೆ ಎಂದರು.

         ತಹಶೀಲ್ದಾರ ಮಂಜುನಾಥ್ ಕೆ. ಅವರನ್ನು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಗೌರವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುರುಬ ಸಂಘದ ಅಧ್ಯಕ್ಷ ಡಾ. ಜಲಪೂರ ವಹಿಸಿದ್ದರು.

       ಉಜ್ಜಿನಿ ಗ್ರಾಮದ ಬಿಂಗಿಭೀಮಪ್ಪ ಶ್ರೀಗಳಿಗೆ ಕುರಿ ಮರಿಯನ್ನು ಕಾಣಿಕೆಯಾಗಿ ಅರ್ಪಿಸಿದರು.ವೇದಿಕೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್, ಕುರಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಕೃಷ್ಣ, ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ದೊಡ್ಡರಾಮಣ್ಣ, ಎಪಿಎಂಸಿ ನಿರ್ದೇಶಕ ಹರಾಳು ನಂಜಪ್ಪ, ಸಮಾಜದ ಮುಖಂಡರಾದ ಚೌಟಿ ಕೊಟ್ರೇಶಪ್ಪ, ಭರ್ಮಪ್ಪ, ಹೆಚ್. ಸೋಮಲಿಂಗಪ್ಪ, ಕುರಿ ಶಿವಮೂರ್ತಿ, ಮಾನಸ ನಾಗರಾಜ್, ಜೆಸಿಬಿ ಕರ್ಣಕುಮಾರ್, ಅಜ್ಜಪ್ಪ, ಮೂಗಪ್ಪ ಮುಂತಾದವರು ಇದ್ದರು.ಮಂಗನಹಳ್ಳಿ ಸಿದ್ದೇಶ ಸ್ವಾಗತಿಸಿ ವಂದಿಸಿದರು. ಬಿ.ಟಿ. ರಂಗನಾಥ ನಿರೂಪಿಸಿದರು. ಮೂಗಪ್ಪ ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link