ಹಾವೇರಿ :
ಜಿಲ್ಲೆಯ ಹಾನಗಲ್ ತಾಲೂಕಿನ ಆಕ್ಕಿಆಲೂರಿನಲ್ಲಿ ನಡೆದ ಲಿಂ.ಚನ್ನವೀರ ಮಹಾಸ್ವಾಮಿಗಳ ಜನ್ಮಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅಕ್ಕಿಆಲೂರಿನ ಶ್ರೀ ಮನಿಪ್ರ ಶಿವಬಸವ ಸ್ವಾಮಿಗಳು 5 ನೇ ಬಾರಿ ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆ ನೀಡಿದರು. ಅಕ್ಕಿಆಲೂರಿನ ಮುತ್ತಿನಕಂತಿಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ರಕ್ತದಾನ ಮಾಡಿದರು.
ಅಕ್ಕಿಆಲೂರ ಗೊಡಚಿಕೊಂಡ ಬಾಳಂಬಿಡ ಮಾಳಗೊಂಡನಕೊಪ್ಪ ಹಾನಗಲ್ ಹಾವೇರಿ ಸೇರಿದಂತೆ ಹಲವು ಭಕ್ತರು ಸೇರಿ ಒಟ್ಟು 56 ಜನರು ರಕ್ತದಾನ ಮಾಡಿದರು.
ಆಡೂರಿನ ಯುವಕ ಶ್ರೀ ತಾನಾಜಿ ಘೋರ್ಪಡೆ 30 ನೇ ಬಾರಿ ರಕ್ತದಾನ ಮಾಡಿ ಶ್ರೀಗಳ ಜನ್ಮಶತಮಾನೋತ್ಸವ ಆಚರಿಸಿದರು.ಹಾನಗಲ್ ಸಾರಿಗೆ ಸಂಸ್ಥೆಯ 13 ಜನ ಸಿಬ್ಬಂದಿಗಳು ರಕ್ತದಾನ ಮಾಡಿದರು.
ಹಾವೇರಿ ಕೂಡಲ ನೀಲಗುಂದ ಪರಮಪೂಜ್ಯರು, ಜಿಲ್ಲಾಸ್ಪತ್ರೆಯ ಡಾ.ಬಸವರಾಜ ತಳವಾರ & ತಂಡದವರು ,ಡಾ.ಸಹನಾ ಮುತ್ತಿನಕಂತಿಮಠ, ಸ್ನೇಹಮೈತ್ರಿ ರಕ್ತದಾನಿಗಳ ಬಳಗದ ಕರಬಸಪ್ಪ ಗೊಂದಿ , ಆರೋಗ್ಯ ಸಮಿತಿಯ ಸದಸ್ಯರು, ಪ್ರಕಾಶ ಮೊಟಗಿ, ಸೂರ್ಯನಾರಾಯಣ ಪಂಚಾನನ ಇತರರು ಹಾಜರಿದ್ದರು…
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ