ನಕಲಿ ಪೊಲೀಸ್ ಪಾಸ್ ಮಾಡುತ್ತಿದ್ದ 6 ಜನರ ಬಂಧನ

ಬೆಂಗಳೂರು:

   ಪೊಲೀಸ್ ನಕಲಿ ಪಾಸ್ ಸೃಷ್ಟಿಸಿ ದುರ್ಬಳಕೆ ಮಾಡುತ್ತಿದ್ದ ಆರು ಜನರನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಕೊರೊನಾ ವೈರಸ್​ ನಿಯಂತ್ರಿಸಲು ಲಾಕ್​​ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ತುರ್ತು ಸಂದರ್ಭಗಳಲ್ಲಿ ಉಪಯೋಗಿಸಿಕೊಳ್ಳಲು ಪೊಲೀಸರು ಪಾಸ್​ ವಿತರಣೆ ಮಾಡಿದ್ದಾರೆ. ಇದನ್ನೇ ಕೇಂದ್ರಿಕರಿಸಿಕೊಂಡು ಕೆಲವರು ನಕಲಿ ಪಾಸ್ ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು.

    ಬಂಧಿತರನ್ನು ನದೀಂ ಪಾಷಾ, ಮುಹಮ್ಮದ್ ಅಬ್ದುಲ್ ರೆಹಮಾನ್, ಮುಹಮ್ಮದ್ ಜುನೈದ್ ಖುರೇಷಿ, ಮುಹಮ್ಮದ್ ರಾಖೀಬ್ ಹಾಗೂ ಇರ್ಷಾದ್ ಪಾಷಾ ಮತ್ತು ಜಬೀವುಲ್ಲಾ ಖಾನ್ ಎಂದು ಗುರುತಿಸಲಾಗಿದೆ.
 
    ಇತ್ತ ನಕಲಿ ಪಾಸ್ ಹಾವಳಿ ಮಂಗಳೂರು ಮತ್ತು ವಿಜಯಪುರದಲ್ಲೂ ಮುಂದುವರೆದಿದ್ದು,ಕೊರೊನಾ ವೈರಸ್ ತಡೆಗೆ ಲಾಕ್ ಡೌನ್ ಜಾರಿಯಲ್ಲಿದೆ. ಆದರೆ ಪೊಲೀಸ್ ಇಲಾಖೆಯಿಂದ ಪಾಸ್ ಪಡೆದರೆ ಅಗತ್ಯ ಕೆಲಸಕ್ಕೆ ಹೊರಗೆ ಓಡಾಡಬಹುದು. ಇದನ್ನೇ ಬಂಡವಾಳ ಮಾಡಿಕೊಂಡಿರುವ  ಕೆಲವರು ನಕಲಿ ಪಾಸ್ ಗಳನ್ನು ಮಾರಾಟ ಮಾಡುತ್ತಿದ್ದಾರೆ. ವಿಜಯಪುರ ಹಾಗೂ ಚಿಕ್ಕಮಗಳೂರಲ್ಲಿ ನಕಲಿ ಪಾಸ್ ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧನ ಮಾಡಿದ್ದಾರೆ.
    ವಿಜಯಪುರದಲ್ಲಿ ಮಾಮಾಶ್ರೀ ಎಂಬುವವನನ್ನು ಹಾಗೂ ಚಿಕ್ಕಮಗಳೂರಲ್ಲಿ ಅಪ್ರಾಪ್ತ ವಯಸ್ಕ ಹಾಗೂ  ಇದಕ್ಕೆ ಸಹಕರಿಸಿದ ಆತನ ತಾಯಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರತಿಯೊಂದು ಪಾಸ್ ನ್ನು 500 ರಿಂದ 1000 ರೂಪಾಯಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap