ಹಾನಗಲ್ಲ ತಾಲ್ಲೂಕಿಗೆ 6.11 ಕೋಟಿ ಅನುದಾನ ಬಿಡುಗಡೆ : ಸಿ ಎಂ ಉದಾಸಿ

ಹಾನಗಲ್ಲ :
 
    ನಬಾರ್ಡ ಸಹಯೋಗದಲ್ಲಿ ಆರ್‍ಐಡಿಎಫ್-25 ರ ಯೋಜನೆಯಡಿ 2019-20 ನೇ ಸಾಲಿನಲ್ಲಿ ಪ್ರವಾಹ ಪೀಡಿತ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕೊಠಡಿ ನಿರ್ಮಾಣ ಕಾಮಗಾರಿಗೆ ಹಾವೇರಿ ಜಿಲ್ಲೆಗೆ 30.44 ಕೋಟಿ ರೂ ಬಿಡುಗಡೆಯಾಗಿದ್ದು, ಹಾನಗಲ್ಲ ತಾಲೂಕಿಗೆ 6.11 ಕೋಟಿ ರೂ ಬಿಡುಗಡೆಯಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು.
     ಬುಧವಾರ ಹಾನಗಲ್ಲಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಿದ ಅವರು, ಪ್ರಸ್ತುತ ಅತಿವೃಷ್ಠಿಯಿಂದಾಗಿ ಹಾನಿಗೊಳಗಾದ 53 ಶಾಲಾ ಕೊಠಡಿಗಳನ್ನು ನಿರ್ಮಾನ ಮಾಡಲು 6.11 ಕೋಟಿ ರೂ ಬಿಡುಗಡೆಯಾಗಿದ್ದು, ಲೋಕೋಪಯೋಗಿ ಇಲಾಖೆ ಕೂಡಲೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಬಿಸಲು ಸೂಚಿಸಲಾಗಿದೆ. ಇದರೊಂದಿಗೆ ತಾಲೂಕಿನಲ್ಲಿ ನೆಲಸಮಗೊಳಿಸಲಾದ 194 ಶಾಲಾ ಕೊಠಡಿಗಳಲ್ಲಿ ಅವಶ್ಯವಿರುವ 60 ಶಾಲಾ ಕೊಠಡಿಗಳ ನಿರ್ಮಾನದ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಿದ್ದು, ಅವಿಗಲು ಕೂಡ ಶೀಘ್ರದಲ್ಲಿ ಅನುದಾನ ಬಿಡುಗಡೆಯಾಗಲಿದೆ ಎಂದರು.
     ಕಳೆದ 2013-14 ರಿಂದ 2017-18 ರ ವರೆಗಿನ ಬಸವ ವಸತಿ. ಅಂಬೇಡ್ಕರ ವಸತಿ, ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ಹಾನಗಲ್ಲ ತಾಲೂಕಿನಲ್ಲಿ ಒಟ್ಟು 1290 ಬ್ಲಾಕ್ ಆದ ಮನೆಗಳನ್ನು ಬಿ.ಎಸ್.ಯಡಿಯೂರಪ್ಪ ಸರ್ಕಾರ ತೆರವುಗೊಳಿಸಿದ್ದು, ಫಲಾನುಭವಿಗಳು ಮಾರ್ಚ 14 ರೊಳಗಾಗಿ ನಿಯಮಾನುಸಾರ ತಳಪಾಯ ನಿರ್ಮಿಸಿ ಕೂಡಲೇ ಸಂಬಂದಿಸಿದ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಂದ ಜಿಪಿಎಸ್ ಮಾಡಿ ನಿಗಮದ ವೆಬ್‍ಸೈಟ್ ಅಪಲೋಡ್ ಮಾಡಿದಲ್ಲಿ ಮುಂದಿನ ಕಂತುಗಳು ಬಿಡುಗಡೆಯಾಗಲಿವೆ.
 
     ಈಗಾಗಲೇ ವಸತಿ ಯೋಜನೆಯಡಿ ವಿವಿಧ ಹಂತಗಳಲ್ಲಿ ಮನೆಗಳನ್ನು ನಿರ್ಮಾನ ಮಾಡಿದ್ದು, ಅನುದಾನ ಬಿಡುಗಡೆಗಾಗಿ ಸರ್ಕಾಸ ಹೊಸದಾಗಿ ಜಾರಿಗೆ ತಂದ “ವಿಜಿಲ್ ಆಪ್” ಮುಖಾಂತರ ಜೆಪಿಎಸ್ ಮಾಡಿಸಿ, ಪಿಡಿಓ ಹಾಗೂ ಸಂಬಂಧಿಸಿದ ನೋಡಲ್ ಅಧಿಕಾರಿಗಳ ಸಹಯೋಗದೊಂದಿಗೆ, ಜಂಟಿಯಾಗಿ ಪರಿಶೀಲಿಸಿ ಕೂಡಲೇ ತಾಲೂಕು ಪಂಚಾಯತಿಗೆ ಲಾಗಿನ್ ದತ್ತಾಂಶಗಳನ್ನು ರವಾನಿಸಿದಲ್ಲಿ ಸಕಾರ ಪರಿಶೀಲಿಸಿ ಅನುದಾನ ಮಾಡಲಿದೆ ಎಂದ ಶಾಸಕ ಸಿ.ಎಂ.ಉದಾಸಿ, ಹಾನಗಲ್ಲ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದ ರಿ.ಸನಂ 65 ರ 1 ಎಕರೆ ಜಮೀನು ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ ಬಾಲಕಿಯರ ವಸತಿ ಶಾಲೆಗೆ ಮಂಜೂರಾಗಿದ್ದು, ಶೀಘ್ರದಲ್ಲಿ 25 ಕೋಟಿ ರೂ ಮೊತ್ತದ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಮಭವಾಗಲಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link