ಬೆಂಗಳೂರು
ಪೊಲೀಸ್ ಸಹಾಯವಾಣಿಗೆ ಹುಸಿಕರೆಗಳನ್ನು ಮಾಡಿದವರಿಗೆ 6 ತಿಂಗಳವರೆಗೆ ಶಿಕ್ಷೆ ವಿಧಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ ನಾರಾಯಣ ಅವರು ಎಚ್ಚರಿಕೆ ನೀಡಿದ್ದಾರೆ.ರೇಡಿಯೋ ವಾಹಿನಿಯೊಂದರಲ್ಲಿ ನಾಗರೀಕರ ಕುಂದುಕೊರತೆಗಳನ್ನು ಆಲಿಸಿದ ಅವರು ಪೊಲೀಸ್ ಸೇರಿದಂತೆ ಇತರ ಸಹಾಯವಾಣಿಗಳು ಸೇರಿದಂತೆ ನಾಗರಿಕರು ಹುಸಿ ಕರೆಗಳನ್ನು ಮಾಡಿ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ತೊಂದರೆ ಕೊಡುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದರು.
ನಾಗರೀಕರಿಗೆ ಬೇಕಾದ ಸೌಲಭ್ಯ ಸಹಕಾರ ನೀಡಲು ಸರ್ಕಾರ ಮತ್ತು ಬಿಬಿಎಂಪಿ ಸಿದ್ಧವಿದೆ. ಅದೇ ರೀತಿ ಜನರು ಕೂಡ ಜವಾಬ್ದಾರಿಯಿಂದ ತೆಗೆದುಕೊಳ್ಳಬೇಕು ಎಂದು ಹೇಳಿದರು.ನಗರದಲ್ಲಿ ನಾಗರೀಕರಿಗೆ ತುರ್ತು ಸಂದರ್ಭಗಳಲ್ಲಿ ಅವರ ನೆರವಿಗೆ ಬಿಬಿಎಂಪಿಯಿಂದ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಇದನ್ನು ಡೌನ್‌ಲೋಡ್ ಮಾಡಿಕೊಂಡು ಆ ಮೂಲಕವು ದೂರು ನೀಡಲು ಅವಕಾಶವಿದೆ ಪೊಲೀಸರ ಸಹಾಯವಾಣಿ 100ಕ್ಕೆ ಕರೆ ಮಾಡಿದರೂ ಕರೆ ಸ್ವೀಕರಿಸುವುದಿಲ್ಲ ಎಂಬ ಆರೋಪವನ್ನು ತಳ್ಳಿ ಹಾಕಿದ ಅವರು ಈಗಾಗಲೇ ಇಲಾಖೆಗೆ ಸ್ಪಷ್ಟ ನಿರ್ದಶನ ನೀಡಲಾಗಿದೆ ಎಂದು ಉತ್ತರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








