ದಸರಾಗೆ ಉಗ್ರರ ಆತಂಕ ಇಲ್ಲ: ವಿ ಸೋಮಣ್ಣ

ಬೆಂಗಳೂರು

   ದಸರಾ ಮಹೋತ್ಸವಕ್ಕೆ ಯಾವುದೇ ಉಗ್ರರ ಆತಂಕ ಇಲ್ಲ ಎಂದು ಉಸ್ತುವಾರಿ ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದ್ದಾರೆ. ಮೈಸೂರು ದಸರಾ ಜಂಬೂ ಸವಾರಿ ವೇಳೆ ಸ್ಪೋಟಕ್ಕೆ ಸಂಚು ರೂಪಿಸಿದ್ದ ನಾಲ್ವರು ಉಗ್ರರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜನರನ್ನು ಭಯಭೀತಿಗೊಳಿಸಲು ಇಂತಹ ಷಡ್ಯಂತ್ರಗಳು ನಡೆಯುತ್ತವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸರ್ಕಾರ ನೋಡಿಕೊಳ್ಳುತ್ತೆ. ತಾಯಿ ಚಾಮುಂಡೇಶ್ವರಿ ಸುಮ್ಮನೆ ಕುಳಿತಿಲ್ಲ, ಅವಳ ರಕ್ಷಣೆ ನಮಗಿದೆ ಎಂದು ಹೇಳಿದರು.

     ನಗರ ಪೊಲೀಸರಿಗೆ ಎಲ್ಲಾ ಬೆಳವಣಿಗೆಗಳ ಮಾಹಿತಿ ಇದೆ, ಹೆಚ್ಚಿನ ಭಧ್ರತೆ ಅವಶ್ಯಕತೆ ಇಲ್ಲ, ಗುಪ್ತಚರ ಇಲಾಖೆ ತನ್ನ ಕೆಲಸ ಮಾಡ್ತಿದೆ. ಅಧಿಕಾರಿಗಳು ಅವರ ಕೆಲಸ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಮೈಸೂರು ಅರಮನೆಯಿಂದ ಬನ್ನಿ ಮಂಟಪದವರೆಗೂ ಬೆಳಿಗ್ಗೆಯಿಂದ ಶ್ವಾನದಳ ಬಾಂಬ್ ಸ್ಕ್ವಾಡ್ ತಂಡ ತಪಾಸಣಾ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಇಂದು ನಾಳೆ, ನಾಡಿದ್ದು ಸೇರಿದಂತೆ ಮೂರು ದಿನಗಳ ಕಾಲ ನಗರದಾದ್ಯಂತ ಬಿಗಿಭದ್ರತೆ ತೀವ್ರಗೊಳಿಸಲಾಗಿದೆ.

    ಮೈಸೂರಿಗೆ 5 ಬಾಂಬ್ ಸ್ಕ್ವಾಡ್ ತಂಡ ಆಗಮಿಸಿದ್ದು, ಮೆರವಣಿಗೆ ನಡೆಯುವ ಮಾರ್ಗದ್ದಕ್ಕೂ ತಪಾಸಣೆ ಕೈಗೊಳ್ಳಲಿದ್ದಾರೆ. ದಸರೆ ಜಂಬೂಸವಾರಿ ಮೆರವಣಿಗೆ ಯಲ್ಲಿ ಜನರು ನಿರ್ಭೀತಿಯಿಂದ ಭಾಗವಹಿಸಬಹುದಾಗಿದೆ. ಅಗತ್ಯ ರೀತಿಯ ಭದ್ರತೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಾಲಕೃಷ್ಣ ಮಾಹಿತಿ ನೀಡಿದ್ದಾರೆ. ನಿನ್ನೆ ಶಂಕಿತ ಉಗ್ರರನ್ನು ಶ್ರೀರಂಗಪಟ್ಟಣದಲ್ಲಿ ವಶಕ್ಕೆ ಪಡೆಯಲಾಗಿದೆ ಎನ್ನುವ ಕುರಿತು ಮಾತನಾಡಿದ ಅವರು ಜನರಲ್ಲಿ ಆತಂಕಬೇಡ. ಎಲ್ಲ ವಿಷಯಗಳ ಕುರಿತಂತೆ ಪೊಲೀಸರಿಗೆ ಮಾಹಿತಿಯಿದೆ. ಗುಪ್ತಚರ ಇಲಾಖೆ ತನ್ನ ಕರ್ತವ್ಯ ನಿರ್ವಹಿಸುತ್ತಿದೆ.

    ಉಗ್ರರ ಬಂಧನ ವದಂತಿಗಳು ಹೆಚ್ಚಿತ್ತಿದ್ದಂತೆ ಶ್ರೀರಂಗಪಟ್ಟಣ ಜಿಲ್ಲೆಯ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳ ಬಳಿ ಬಾಂಬ್ ನಿಷ್ಕ್ರೀಯ ದಳದಿಂದ ತಪಾಸಣೆ ನಡೆಸಲಾಯಿತು.ಹೆಚ್ಚು ಜನ ಸಂದಣಿ ಇರುವ ಪ್ರದೇಶಗಳಾದ ಬಸ್ ಸ್ಟಾಂಡ್, ರೈಲ್ವೆ ನಿಲ್ದಾಣ, ಹೈವೆಯಲ್ಲಿ ಅನುಮಾನಸ್ಪದವಾಗಿ ನಿಂತಿರೋ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಮದರಸ ಮಸೀದಿಗಳಿಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಶ್ರೀರಂಗಪಟ್ಟಣ ಸುತ್ತಮುತ್ತಲಿನ ರೆಸಾರ್ಟ್, ಲಾಡ್ಜ್ , ಹೊರ ವಲಯದ ಫಾಮ್ರ್ಹೌಸ್ ಗಳಲ್ಲಿ ಬಂದು ಹೋದವರ ಬಗ್ಗೆ ಮಾಹಿತಿಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ

 ನಿನ್ನೆಯಷ್ಟೇ ಅಧಿಕಾರಿಗಳು ಉಗ್ರರ ಬಂಧನ ಕೇವಲ ವಂದತಿ ಎಂದು ಹೇಳಿದ್ದರು ಆದರೆ ಪೊಲೀಸರ ಕಾರ್ಯಾಚರಣೆಯನ್ನು ನೋಡಿದರೆ ಸಾರ್ವಜನಿಕರಲ್ಲಿ ಆತಂಕ ಮೂಡುವಂತಾಗಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link