ಭಾರತ : ಒಂದೇ ದಿನದಲ್ಲಿ 6977 ಮಂದಿಗೆ ಕೊರೋನಾ ಸೋಂಕು..!

ನವದೆಹಲಿ:

      ಭಾರತದಲ್ಲಿ ಸತತವಾಗಿ ಮೂರನೆ ದಿನವೂ ಸಹ 6000ಕ್ಕೂ ಹೆಚ್ಚು ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ, ಸೋಮವಾರ ದಾಖಲೆಯ 6,977 ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,38,845ಕ್ಕೆ ತಲುಪಿದೆ. ಇದರ ಜೊತೆಗೆ 24 ಗಂಟೆಗಳಲ್ಲಿ ಮಹಾಮಾರಿ ವೈರಸ್ 154 ಮಂದಿಯನ್ನು ಬಲಿಪಡೆದುಕೊಂಡಿದ್ದು, ಸಾವಿನ ಸಂಖ್ಯೆ 4021ಕ್ಕೆ ಏರಿಕೆಯಾಗಿದೆ. 

      ದೇಶದಲ್ಲಿ 1,38,845 ಮಂದಿ ಸೋಂಕಿತರ ಪೈಕಿ 57720 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಒಂದೇ ದಿನ 6,977 ಮಂದಿಯಲ್ಲಿ ವೈರಸ್ ಪತ್ತೆಯಾಗಿರುವುದು ಈ ವರೆಗಿನ ಗರಿಷ್ಠ ಪ್ರಮಾಣವಾಗಿದೆ. 
       ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ ಅತೀ ಹೆಚ್ಚು 3041 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ ತಮಿಳುನಾಡಿನಲ್ಲಿ 765, ದೆಹಲಿಯಲ್ಲಿ 508, ಗುಜರಾತ್ 394, ಪಶ್ಚಿಮ ಬಂಗಾಳದಲ್ಲಿ 208 ಮತ್ತು ರಾಜಸ್ಥಾನದಲ್ಲಿ 152 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ