ಗ್ರಾಹಕರ ಒಪ್ಪಿಗೆ ಇಲ್ಲದೆ ಮೊಬೈಲ್‌ ಸಂಖ್ಯೆ ಪಡೆಯುವಂತಿಲ್ಲ…!

ನವದೆಹಲಿ:

      ಗ್ರಾಹಕರ ಒಪ್ಪಿಗೆ ಇಲ್ಲದೆ ಮೊಬೈಲ್‌ ಸಂಖ್ಯೆ ಪಡೆಯುವಂತಿಲ್ಲ ಎಂದು ವರ್ತಕರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

      ಸರಕುಗಳ ಮಾರಾಟ ಅಥವಾ ಸೇವೆಗಳನ್ನು ಒದಗಿಸುವ ಸಂದರ್ಭದಲ್ಲಿ ಗ್ರಾಹಕರ ಅನುಮತಿ ಇಲ್ಲದೆ ಅವರ ಮೊಬೈಲ್‌ ದೂರವಾಣಿ ಸಂಖ್ಯೆ ಪಡೆದುಕೊಳ್ಳಬಾರದು ಎಂದು ರಿಟೇಲ್‌ ವರ್ತಕರಿಗೆ ಸೂಚಿಸುವಂತೆ ಕೇಂದ್ರ ಸರ್ಕಾರವು ಉದ್ಯಮ ಸಂಘಟನೆಗಳಿಗೆ ಹೇಳಿದೆ.

     ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಅವರು ಈ ಸಂಬಂಧ ಈಚೆಗೆ ಸಿಐಐ, ಫಿಕ್ಕಿ, ಅಸೋಚಾಂ, ಭಾರತೀಯ ರಿಟೇಲರ್‌ಗಳ ಒಕ್ಕೂಟ ಮತ್ತು ಅಖಿಲ ಭಾರತ ವರ್ತಕರ ಒಕ್ಕೂಟಕ್ಕೆ (ಸಿಎಐಟಿ) ಪತ್ರ ಬರೆದಿದ್ದಾರೆ.

      ಮೊಬೈಲ್ ಸಂಖ್ಯೆ ಕೊಟ್ಟ ನಂತರದಲ್ಲಿ ಗ್ರಾಹಕರಿಗೆ ಮಾರ್ಕೆಟಿಂಗ್ ಮತ್ತು ಪ್ರಚಾರ ಉದ್ದೇಶದ ಎಸ್‌ಎಂಎಸ್‌ಗಳು ಬರುತ್ತಿವೆ. ಇವನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ‘ವಸ್ತುವನ್ನು ಮಾರಾಟ ಮಾಡುವಾಗ ಮೊಬೈಲ್‌ ಸಂಖ್ಯೆ ಬೇಕೇಬೇಕು ಎನ್ನುವುದು ಗ್ರಾಹಕರ ಹಕ್ಕುಗಳ ಉಲ್ಲಂಘನೆ ಮತ್ತು ನ್ಯಾಯಸಮ್ಮತವಲ್ಲದ ಕೆಲಸ. ಗ್ರಾಹಕರು ಮೊಬೈಲ್ ಸಂಖ್ಯೆ ಕೊಟ್ಟಿಲ್ಲ ಎಂಬ ಒಂದೇ ಕಾರಣಕ್ಕೆ ಅವರಿಗೆ ಉತ್ಪನ್ನ ಮರಳಿಸಲು, ಬೇರೊಂದು ಉತ್ಪನ್ನದೊಂದಿಗೆ ವಿನಿಮಯ ಮಾಡಿಕೊಳ್ಳಲು ನಿರ್ಬಂಧಿಸುವುದು, ಅವರಿಗೆ ಹಣ ಮರಳಿಸಲು ನಿರಾಕರಿಸುವುದು ಅಥವಾ ದೂರುಗಳನ್ನು ಇತ್ಯರ್ಥ ಮಾಡದೆ ಇರುವುದು ಕೂಡ ಅಕ್ರಮ ಎಂದು ಸಿಂಗ್ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap