ಕುಣಿಗಲ್ ಬಳಿ ಕಾರು ಭೀಕರ ಅಪಘಾತ: 7 ಜನರ ಸಾವು

ಕುಣಿಗಲ್

    ಇನೋವಾ ಕಾರಿನ ಟೈಯರ್ ಸಿಡಿದ ಪರಿಣಾಮ ಕಾರು ಡಿವೈಡರ್‍ಗೆ ಡಿಕ್ಕಿ ಒಡೆದು ಸ್ಥಳದಲ್ಲಿಯೇ 7 ಜನ ದುರ್ಮರಣಕ್ಕೀಡಾದ ಹೃದಯ ವಿದ್ರಾವಕ ಘಟನೆಯಲ್ಲಿ 3 ಜನ ಚಿಂತಾಜನಕ ಸ್ಥಿತಿಯಲ್ಲಿದ್ದು 2 ವರ್ಷದ ಮಗು ಆಶ್ಚರ್ಯಕರ ರೀತಿಯಲ್ಲಿ ಪಾರಾದ ಘಟನೆ ತಾಲ್ಲೂಕಿನ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸಿದ್ದಾಪುರದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.

    ಮೂಲ ತಮಿಳುನಾಡಿನವರೆನ್ನಲಾಗಿದ್ದು ಬೆಂಗಳೂರಿನ ನಂದಿನಿ ಲೇಔಟ್‍ನ ನಿವಾಸಿಗಳಾಗಿದ್ದು ನಿರ್ಮಲಮ್ಮ (55) ನಾಗಮ್ಮ (53) ವೀರಮ್ಮ (56) ಕಾಳಿ (60) ಉಮಾ (40) ಸೆಲ್ವೆ ಮತ್ತು ಗೊಂಡಮಣಿ ಸೇರಿದಂತೆ ಇನ್ನೂ ಸಮರ್ಪಕವಾಗಿ ಹೆಸರು ತಿಳಿದು ಬಂದಿಲ್ಲದ ಕಾರಣ ಮಹಿಳೆಯರು 6 ಜನ ಮತ್ತು ಒಬ್ಬ ಗಂಡಸು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚಾಲಕ ಯೋಗೇಶ್ ಸೇರಿದಂತೆ ಇನ್ನಿಬ್ಬರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿಸಲಾಗಿದ್ದು ಇವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

     ಇಂತಹ ಭೀಕರ ಅಪಘಾತದಲ್ಲಿಯೂ ಸಹ ಎರಡು ವರ್ಷದ ಗಂಡು ಮಗುವೊಂದು ಆಶ್ಚರ್ಯಕರ ರೀತಿಯಲ್ಲಿ ಉಳಿದುಕೊಂಡಿದ್ದಾನೆ. ಇವರುಗಳು ಬೆಂಗಳೂರಿನಿಂದ ಎಡೆಯೂರು ದೇವಾಲಯಕ್ಕೆ ಹೋಗಿ ದೇವರ ದರ್ಶನ ಮಾಡಿದ್ದಾರೆ. ಅವರ ಸಂಬಂಧಿಗಳು ಶ್ರೀ ರಂಗಸ್ವಾಮಿ ಬೆಟ್ಟದಲ್ಲಿ ಕರನರೆಗೆ ಭಾಗವಹಿಸಿದ್ದರು. ಅಲ್ಲಿಂದ ಇವರನ್ನ ಕರೆದೊಯ್ಯಲು ಇನೋವಾ ಕಾರು ಎಡೆಯೂರಿಗೆ ಹೋಗಿ ಅಲ್ಲಿಂದ ಬೆಂಗಳೂರಿಗೆ ವಾಪಸ್ ತೆರಳುವಾಗ ಈ ಘಟನೆ ಸಂಭವಿಸಿದ್ದು ಇವರುಗಳು ಕಾಂಗ್ರೆಸ್ ಪಕ್ಷದ ಮುಖಂಡರು ಎನ್ನಲಾಗಿದೆ.
ಈ ಭೀಕರ ಅಪಘಾತದಲ್ಲಿ ಕಾರು ರಸ್ತೆಯಲ್ಲಿ ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ಜನರು ರಸ್ತೆಯಲ್ಲಿ ಚಲ್ಲಾಪಿಲ್ಲಿಯಾಗಿ ಉರುಳಿ ಹೋಗುತ್ತಿದ್ದ

      ದೃಶ್ಯವನ್ನ ಗ್ರಾಮಸ್ಥರು ಕಂಡು ಭಯಭೀತರಾದ ಸನ್ನಿವೇಶದ ನಡುವೆಯೇ ಕೆಲವು ಮಹಿಳೆಯರು ಸೇರಿದಂತೆ ಸ್ಥಳೀಕರು ಪೊಲೀಸರಿಗೆ ಹಾಗೂ ಆಂಬುಲೆನ್ಸ್ ಸಿಬ್ಬಂದಿಗೆ ನೆರವಾಗುವ ಮೂಲಕ ಆಸ್ಪತ್ರೆಗಳಿಗೆ ಕಳಿಸಿದರು.

      ಸುದ್ದಿ ತಿಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಅಪಘಾತವಾದ ಸ್ಥಳ ಮತ್ತು ಶವಾಗಾರದಲ್ಲಿದ್ದ ಶವಗಳನ್ನ ಪರಿಶೀಲಿಸಿದರು. ಡಿವೈಎಸ್‍ಪಿ ರಾಮಲಿಂಗೇಗೌಡ, ಸಿಪಿಐ ಅಶೋಕ್, ಪಿಎಸ್‍ಐ ಪುಟ್ಟೇಗೌಡ, ಈ ಪ್ರಕರಣವನ್ನು ಅಮೃತೂರು ಪಿಎಸ್‍ಐ ಅನಿಲ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap