55 ಪ್ರಕರಣಗಳಲ್ಲಿ 70 ಮಂದಿ ಆರೋಪಿಗಳ ಬಂಧನ.!

ಬೆಂಗಳೂರು

     ಕನ್ನಗಳವು, ವಾಹನಗಳವು ಗಾಂಜಾ ಎಂಡಿಎಂಎ ಮಾದಕವಸ್ತು ಮಾರಾಟ ಸೇರಿದಂತೆ 55 ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿ ತಮಿಳುನಾಡು ಬಿಹಾರದ ಅಂತರ್‌ರಾಜ್ಯಕಳ್ಳರು ಸೇರಿ 70 ಮಂದಿ ಆರೋಪಿಗಳನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು 1 ಕೋಟಿ 48 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ದ್ವಿಚಕ್ರವಾಹನ ಲ್ಯಾಪ್‌ಟಾಪ್ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ಬಂಧಿತ ಆರೋಪಿಗಳಿಂದ 1 ಕೆಜಿ 72 ಗ್ರಾಂ ಚಿನ್ನ, 975 ಗ್ರಾಂ ಬೆಳ್ಳಿ, 10 ಲಕ್ಷ 88,309 ನಗದು, 39 ಮೊಬೈಲ್‌ಗಳು, 66 ಕೆಜಿ ಗಾಂಜಾ, 26 ಲ್ಯಾಪ್‌ಟಾಪ್, 31 ದ್ವಿಚಕ್ರ ವಾಹನ, 2 ಕಾರು, 1 ಆಟೋ, 1 ಟಿಟಿ ಸೇರಿ 1 ಕೋಟಿ 48 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ.

    ಮಡಿವಾಳ ಪೊಲೀಸರು ತಮಿಳುನಾಡು ಮೂಲದ ಮನೋಹರ್ (21), ಲೋಗನಾಥನ್ (19), ಕಾರ್ತಿಕ್ (19), ಸೂರ್ಯ (19), ಗೋಕುಲನಾಥನ್ (19) ಅವರಲ್ಲದೆ ಮೂವರು ಅಪ್ರಾಪ್ತ ಬಾಲಕರನ್ನು ಬಂಧಿಸಿ 20 ಲಕ್ಷ ಮೌಲ್ಯದ 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ ಅಪ್ರಾಪ್ತ ಬಾಲಕರಿಂದ 1 ಲಕ್ಷ ಮೌಲ್ಯದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಆಡುಗೋಡಿ ಪೊಲೀಸರು ಕಾನೂನಿನ ಸಂಘರ್ಷಕ್ಕೊಳಗಾದ ಇಬ್ಬರನ್ನು ಬಂಧಿಸಿ 89 ಸಾವಿರ ಮೌಲ್ಯದ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಮೊಬೈಲ್ ಕಳುವು ಮಾಡುತ್ತಿದ್ದ ಕೋರಮಂಗಲದ ಶಾನವಾಸ್ (19), ದಯಾನಂದ (27)ನನ್ನು ಬಂಧಿಸಿ 2,65,000 ಮೌಲ್ಯದ 5 ದ್ವಿಚಕ್ರ ವಾಹನಗಳು, ಮೊಬೈಲ್‌ನ್ನು ವಶಪಡಿಸಿಕೊಂಡಿದ್ದಾರೆ.

    ವಿವೇಕ್‌ನಗರದ ವಿನೋದ್ (24), ಆನೆಪಾಳ್ಯದ ದಯಾನಂದ್ (27), ನವೀನ್ ಮರಿಯಾದಾಸ್ (29)ನನ್ನು ಬಂಧಿಸಿ 2 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.ಕೋರಮಂಗಲ ಪೊಲೀಸರು ತಮಿಳುನಾಡಿನ ತಿರುಚಿ ಮೂಲದ ಟೀನು ಆನಂದ್ (23), ವಿಘ್ನೇಶ್ (23), ಸರಣ್‌ರಾಜ್ (23), ಸೇದುರಾಮನ್ (20), ಪ್ರವೀಣ್ (23), ರಾಮ್ (36)ನನ್ನು ಬಂಧಿಸಿ ಆರೋಪಿಗಳು ಕಳುವು ಮಾಡಿದ್ದ 8 ಲಕ್ಷ 10 ಸಾವಿರ ಮೌಲ್ಯದ 25 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ ವಿವೇಕ್‌ನಗರದ ಪ್ರವೀಣ್ ಕುಮಾರ್ (33), ಕೋರಮಂದಲದ ಕೃಷ್ಣಮೂರ್ತಿ (33), ಹಲಸೂರಿನ ಕರುಣಾಕರನ್ (34) ಎಂಬ ಮೊಬೈಲ್ ಕಳ್ಳರನ್ನು ಬಂಧಿಸಿ ಒಂದೂವರೆ ಲಕ್ಷ ರೂ. ಮೌಲ್ಯದ 25 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

    ಆಡುಗೋಡಿಯ ರವಿಚಂದ್ರ (19), ಅಶೋಕ್ ನಗರದ ಮೋಸಸ್ (19)ನನ್ನು ಬಂಧಿಸಿ 50 ಸಾವಿರ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಂಡರೆ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರು ಕೋರಮಂಗಲದ ಹರೀಶ್ ಕುಮಾರ್ (23), ಫಯಾಜ್ (25)ನನ್ನು ಬಂಧಿಸಿ ಮೊಬೈಲ್ ಸುಲಿಗೆ ಪ್ರಕರಣವನ್ನು ಬೇಧಿಸಿದ್ದಾರೆ.

    ಮೈಕೋ ಲೇಔಟ್ ಪೊಲೀಸರು ಭದ್ರಾವತಿಯ ರಾಹುಲ್ (22), ಸ್ಮಿತ್ ಫ್ರಾನ್ಸಿಸ್ (24), ದೇವರಾಜ್ (23), ಚಂದನ್ (28), ರಾಘವೇಂದ್ರ (33), ಯಶವಂತಪುರ ಯಶವಂತ (23) ಎನ್ನುವ ಗಾಂಜಾ ಮಾರಾಟಗಾರರನ್ನು ಬಂಧಿಸಿ 12 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಕನ್ನಗಳ್ಳರ ಸೆರೆ

    ದೇವರಚಿಕ್ಕನಹಳ್ಳಿಯ ನಾಗೇಶ್ (31) ಎಂಬ ವಂಚಕನನ್ನು ಬಂಧಿಸಿ 1 ಲಕ್ಷ 65 ಸಾವಿರ ಮೌಲ್ಯದ ನೆಕ್ಲೇಸ್‌ನ್ನು ವಶಪಡಿಸಿಕೊಳ್ಳಲಾಗಿದೆ. ಸುದ್ದಗುಂಟೆಪಾಳ್ಯ ಪೊಲೀಸರು ಬಿಸ್ಮಿಲ್ಲಾ ನಗರದ ಜುನೇತ್ ಖಾನ್ (25), ಹೊಸಕೋಟೆಯ ಸಯೈದ್ ಸದ್ದಾಮ್ (28) ಎಂಬ ಕನ್ನಗಳ್ಳರನ್ನು ಬಂಧಿಸಿ 10 ಲಕ್ಷ ಮೌಲ್ಯದ 275 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಇದಲ್ಲದೆ ಭಾರತಿ ನಗರದ ಮೊಹ್ಮದ್ ಅನ್ವರ್ ನೂರುಲ್ಲಾ ಅಲಿಯಾಸ್ ಕುಂಟ (50)ನನ್ನು ಬಂಧಿಸಿ 7 ಲಕ್ಷ ಮೌಲ್ಯದ 231 ಗ್ರಾಂ ಚಿನ್ನ, 475 ಗ್ರಾಂ ಬೆಳ್ಳಿ ವಶಪಡಿಸಿಕೊಂಡು 2 ಕನ್ನಗಳವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.

ಎಂಡಿಎಂಎ ವಶ

   ಎಸ್‌ಜಿ ಪಾಳ್ಯದ ಕಿರಣ್ (21) ನನ್ನುಬಂಧಿಸಿ 1 ಕೆಜಿ 200 ಗ್ರಾಂ ಗಾಂಜಾ, ಬಿಟಿಎಂ 2ನೇ ಹಂತದ ಮೀರ್‌ದಾಸ್‌ನನ್ನು ಬಂಧಿಸಿ 2 ಲಕ್ಷ ಮೌಲ್ಯದ 11 ಗ್ರಾಂ ಎಂಡಿಎಂಎ, ಮಡಿಲಾಶ ಶಬೂದ್ದೀನ್‌ನನ್ನು ಬಂಧಿಸಿ 2 ಕೆಜಿ 500 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

   ತಿಲಕ್‌ನಗರ ಪೊಲೀಸರು ಮಲ್ಲತ್ತಹಳ್ಳಿಯ ವಾಸಿಂಅಕ್ರಮ್ (26)ನನ್ನು ಬಂಧಿಸಿ 7 ಲಕ್ಷ 60 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಡೇಪಾಳ್ಯ ಪೊಲೀಸರು ರಾಜಸ್ತಾನ ಮೂಲದ ಪ್ರಕಾಶ್ ಪರಿಹಾರ್ (35), ಜಿತೇಂದ್ರ ಕುಮಾರ್ (23), ಜಸ್ವಂತ್ ಸಿಂಗ್ (26)ನನ್ನು ಬಂಧಿಸಿ ಐದೂವರೆ ಲಕ್ಷ ಮೌಲ್ಯದ ಜೀನ್ಸ್ ಪ್ಯಾಂಟ್, ಶರ್ಟ್, ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

  ಬೇಗೂರು ಪೊಲೀಸರು ಕೆಜಿ ನಗರದ ಗಣೇಶ (21), ಶಾಂತಕುಮಾರ್ (20), ವೀರಮಣಿ (20) ಎಂಬ ಕನ್ನಗಳ್ಳರನ್ನು ಬಂಧಿಸಿ 9 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

40 ಕೆಜಿ ಗಾಂಜಾ ವಶ

   ಶಾಹೀದ್, ಅಶೋಕ್ ಕುಮಾರ್, ಕೃಥಿಬಾಸ್, ಕೋರ್ಮಾ ನಾಯಕ್, ಸತ್ಯದೀಪ್, ಬಿಬಕಬೀಗರ್, ಹೇಂಮಂತ್ ಮಗಾನಂದ್ ಸೇರಿ 7 ಮಂದಿಯನ್ನು ಬಂಧಿಸಿರುವ ಬೇಗೂರು ಪೊಲೀಸರು 12 ಲಕ್ಷ ಮೌಲ್ಯದ 40 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಿಹಾರ ಮೂಲದ ಮೂವರನ್ನು ಬಂಧಿಸಿ 10 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ ತಮಿಳುನಾಡಿನ ತ್ಯಾಗರಾಜ್, ನಂದೀಶ್, ಅರುಳ್, ಮಹೇಶ್ ಸೇರಿ ನಾಲ್ವರನ್ನು ಬಂಧಿಸಿ ಮೊಬೈಲ್ ಕಳವು ಪ್ರಕರಣಗಳನ್ನು ಬೇಧಿಸಿದ್ದಾರೆಂದು ತಿಳಿಸಿದರು.ಡಿಸಿಪಿ ಇಶಾಪಂತ್ ಅವರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link