ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಶಾಂತಯುತ ಶೇ.72.68ರಷ್ಟು ಮತದಾನ

ಹಗರಿಬೊಮ್ಮನಹಳ್ಳಿ:

       ತಾಲೂಕನಲ್ಲಿ ಬಹುತೇಕ ಶಾಂತಯುತ ಮತದಾನವಾಗಿದ್ದು, ಶೇ72.68ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಯಾದ ಸಂತೋಷ್‍ಕುಮಾರ್ ತಿಳಿಸಿದರು.

         ತಾಲೂಕಿನ ಮೂರು ಕಡೆ ಮತದಾನ ಬಹಿಷ್ಕಾರವಾಗಿದ್ದು, ಒಂದು ಹೊಳೆ ಮುತ್ಕೂರು ಗ್ರಾಮದಲ್ಲಿ ಗ್ರಾ.ಪಂ.ಕಚೇರಿ ಸ್ಥಳಾಂತರಿಸಿ ಗ್ರಾಮದವರು ಬೆಳಗಿನಿಂದ ಸಂಜೆಯವರೆಗೂ ಒಗ್ಗಟ್ಟಿನಿಂದ ಸಾಮೂಹಿಕವಾಗಿ ಮತದಾನಮಾಡದೆ ಮತಕೇಂದ್ರದಿಂದ ದೂರ ಉಳಿದು ಬಹಿಷ್ಕಾರ ಹಾಕಿದ ಘಟನೆ ಜರುಗಿತು.

          ಅದರಂತೆ ಬಿ.ಮುತ್ಕೂರು ಗ್ರಾಮದ ಮತದಾರರು ಹತ್ತಿರದ ಬಂಡಿಹಳ್ಳಿಗೆ ಹೋಗಿ ಮತದಾನಮಾಡುವ ಪ್ರಕ್ರಿಯೆ ಇತ್ತು. ಆದರೆ, ಸುಮಾರು 6ವರ್ಷಗಳಿಂದ ಗ್ರಾಮಕ್ಕೆ ಒಂದು ಮತಗಟ್ಟೆ ತೆರೆಯುವಂತೆ ಹೋರಾಟನಡೆಯುತ್ತಲೇ ಇತ್ತು. ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಕಿಂಚಿತ್ತು ಕಾಳಜಿ ತೋರದೆ ಮತದಾನ ಬಹಿಷ್ಕಾರ ಮಾಡಬೇಕಾದ ಅನಿವಾರ್ಯತೆ ಬಂತು ಎಂದು ವೈ.ಸುಭಾಷ್, ಹತ್ತಿ ಚಂದ್ರಶೇಖರ್, ಬಿ.ಚಂದ್ರಪ್ಪ, ಸರ್ದಾರ್ ರಾಮಣ್ಣ, ಮಾರುತಿ, ಪ್ರಹ್ಲಾದ್, ಎಚ್.ಪ್ರಭಕರ ದೂರುತ್ತಾರೆ.

       ಅಂದು 275 ಮತಗಳಿದ್ದು ಇಂದು 318ಮತಗಳಾಗಿವೆ ಎಂದು ಹೇಳುವ ಇವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಹಾಕಲಾಗಿತ್ತು. ಆದರೆ, ಶಾಸಕ ಎಸ್.ಭೀಮಾನಾಯ್ಕ ಮನವೂಲಿಸಿ ಮತಚಲಾಯಿಸುವಂತೆ ಮನವಿ ಹಿನ್ನೆಲೆಯಲ್ಲಿ ಮತದಾನಮಾಡಲಾಗಿತು. ಈಗ ಯಾವ ಮತದಾರರು ಮತಕೇಂದ್ರದಿಂದ ದೂರ ಉಳಿದು ಮತದಾನಮಾಡಲಿಲ್ಲ. ಅಧಿಕಾರಿಗಳು ಬೇಟಿ ನೀಡಿ ವಿಫಲಯತ್ನದಿಂದ ಅಲ್ಲಿಂದ ಹಿಂತಿರುಗಿದರು.

       ಅಲ್ಲದೆ, ಯಡ್ರಮ್ಮನಹಳ್ಳಿ ಗ್ರಾಮದ ಹತ್ತಿರ ಇರುವ ಹಳ್ಳದಲ್ಲಿ ಮರಳು(ಉಸುಗು)ಟೆಂಡರ್ ಆಗಿದ್ದು, ವಿರೋಧಿಸಿ ಮತದಾನ ಬಹಿಷ್ಕಾರ ಹಾಕಲು ತೀರ್ಮಾನಿಸಿದರು. ಬೆಳಗ್ಗೆ 7ಮತಗಳು ಮಾತ್ರ ಚಲಾಯಿಸಲಾಗಿದ್ದು ನಂತರ ತೀರ್ಮಾನದಂತೆ ಪಟ್ಟು ಹಿಡಿದರು. ಗ್ರಾಮಕ್ಕೆ ಶಾಸಕ ಎಸ್.ಭೀಮಾನಾಯ್ಕ ಹಾಗೂ ಮುಖಂಡರು ಬೇಟಿ ನೀಡಿ, ಅವರ ಮನವೂಲಿಸುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಬೆಳಗ್ಗೆ 11ಗಂಟೆಯಿಂದ ಮತದಾನ ಆರಂಭವಾಯಿತು.

      ಅಲ್ಲದೆ, ತಾಲೂಕಿನ ಕೆಲವು 15ಕಡೆ ಅದರಲ್ಲಿ ಬೂತ್ 140, 161 ಹಾಗೂ 103ಗಳು ಸೇರಿದಂತೆ ಮತಯಂತ್ರಗಳ ಸಣ್ಣಪುಟ್ಟ ಕಿರಿಕಿರಿಯಿಂದ ಮತದಾನ ಆರಂಭವಾಗುವಲ್ಲಿ ವಿಳಂಬವಾಗಿದ್ದು ಬಿಟ್ಟರೆ, ಬಹುತೇಕ ಎಲ್ಲಾ ಕಡೆ ಶಾಂತಯುತವಾಗಿ ಮತದಾನವಾಯಿತು.
ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಕ್ಷೇತ್ರದ ಮತಗಟ್ಟೆಗಳಿಗೆ ಬೇಟಿನೀಡಿ, ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಮಾತನಾಡಿಸುವ ನೆಪದಲ್ಲಿ ಮತದಾರರಿಗೆ ಕೈಮುಗಿಯುವ ಮೂಲಕ ಆಶೀರ್ವಾದ ಬೇಡುತ್ತಿದ್ದುದ್ದು ಕಂಡುಬಂದಿತು. ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಮತದಾನದ ದಿನ ಇತ್ತ ಸುಳಿಯಲೇ ಇಲ್ಲ.ಪಟ್ಟಣದಲ್ಲಿ ಮಹಿಳೆಯರನ್ನು ಆಕರ್ಷಿಸುವ ಹಿನ್ನೆಲೆಯಲ್ಲಿ ಸಖಿ ಮತಗಟ್ಟೆ ಕೇಂದ್ರವನ್ನು ತೆರೆಯಲಾಗಿತ್ತು. ಹೊಳೆ ಮುತ್ಕೂರಿನ 2ಮತಗಟ್ಟೆಗಳನ್ನು ಬಿಟ್ಟು ಒಟ್ಟು 250 ಮತಕೇಂದ್ರದಲ್ಲಿ ಶಾಂತಯುತ ಮತದಾನವಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link