ಬಳ್ಳಾರಿ
ತುಂಗಭದ್ರಾ ಜಲಾಶಯದ 75ನೇ ವರ್ಷದ ಅಮೃತ ಮಹೋತ್ಸವ ಸಮಾರಂಭ ಇದೇ ಏಪ್ರಿಲ್ 25ರಂದು ವಿಜೃಂಭಣೆಯಿಂದ ಆಯೋಜಿಸಲಗಿದೆ ಎಂದು ತುಂಗಭದ್ರಾ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಪುರುಷೋತ್ತಮಗೌಡ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ನಗರದ ಡಾ.ರಾಜ್ ಕುಮಾರ್ ರಸ್ತೆಯ ಬಿಡಿಎ ಸಭಾಂಗಣದಲ್ಲಿ ಅಂದು ಬೆಳಿಗ್ಗೆ 10 ಗಂಟೆಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಡಾ.ಸಂಗನಬಸವಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿರುವ ಸಮಾರಂಭದಲ್ಲಿ ನಂದಿಪುರ ಮಹೇಶ್ವರ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಭಾಗವಹಿಸಲಿದ್ದಾರೆ. ತುಂಗಭದ್ರಾ ಜಲಾಶಯದ ನಿವೃತ್ತ ಅಧಿಕಾರಿಗಳಾದ ಇ.ಪಿ.ಉದ್ದಿಹಾಳ, ಕೆ.ಗೋವಿಂದುಲು, ಡಾ.ಹೆಚ್ ಮಹಾಬಲೇಶ್ವರ, ಕೆ.ಚನ್ನಪ್ಪ, ವಿ.ವೀರೇಶಯ್ಯ, ಜಿ.ಚನ್ನಬಸಪ್ಪ ಮತ್ತು ರಾಮರಾವ್ ಅವರನ್ನು ಇದೇವೇಳೆ ಸನ್ಮಾನಿಸಲಾಗುತ್ತಿದೆ ಎಂದರು.
ಹೈ-ಕ ಅಭಿವೃದ್ಧಿಗಾಗಿ ಸುಮಾರು 13.5 ಸಾವಿರ ಕೋಟಿ ನಿಗದಿ ಮಾಡಿರುವ ಗಣಿಯ ದುಡ್ಡನ್ನು ತುಂಗಭದ್ರಾ ಜಲಾಶಯದ ಹೂಳು ಎತ್ತಲು ವಿನಿಯೋಗಿಸಲು ಸಮಾರಂಭದಲ್ಲಿ ಚರ್ಚಿಸಲಾಗುತ್ತಿದೆ. ಒಟ್ಟು 133 ಟಿಎಂಸಿ ಸಾಮಥ್ರ್ಯದ ಜಲಾಶಯದಲ್ಲಿ 33 ಟಿಎಂಸಿ ಹೂಳು ತುಂಬಿಕೊಂಡಿದೆ.
ಉಳಿದ ನೀರಿನಲ್ಲಿ 30 ಟಿಎಂಸಿ ಭದ್ರಾ, 7.50 ಟಿಎಂಸಿ ನೀರು ತುಂಗಾ ಮೇಲ್ದಂಡೆಗೆ ಮತ್ತು 18 ಟಿಎಂಸಿ ನೀರು ಸಿಂಗಟಾಲೂರು ಏತ ನೀರಾವರಿಗೆ ವಿನಿಯೋಗವಾಗುತ್ತಿದೆ. ಉಳಿದ ನೀರು ಕರ್ನಾಟಕಾಂಧ್ರ ಪ್ರದೇಶ ಮತ್ತು ತೆಲಂಗಾಣದ ಕೆಲ ಜಿಲ್ಲೆಗಳಲ್ಲಿ ಕೃಷಿ, ಕೈಗಾರಿಕೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜಲಾಶಯದ ಹೂಳು ತೆಗೆಯಲು ಮತ್ತು ಜಲಾಶಯ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲರನ್ನು ಗೌರವಿಸಲು ಈ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.
ರೈತ ಮುಖಂಡರಾದ ಕೃಷ್ಣಾನಗರ ಕ್ಯಾಂಪ್ ಡಿ.ಶಿವಯ್ಯ, ಗಂಗಾವತಿ ವೀರೇಶ್, ಶ್ರೀಧರ್ ಜಾಲಿಹಾಳ್, ಶರಣಪ್ಪ ಶಾನವಾಸಪುರ ಇನ್ನಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
