ಬೆಂಗಳೂರು
ಗಾಂಜಾ ಮಾರಾಟ ಮಾರಾಟ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಉತ್ತರ ವಿಭಾಗದ ಪೊಲೀಸರು ಲೈನ್ ಮೆನ್, ಇಬ್ಬರು ದಂತ ವೈದ್ಯಕೀಯ ವಿದ್ಯಾರ್ಥಿಗಳು, ಇಂಜಿನಿಯರ್‍ಗಳು ಸೇರಿದಂತೆ, 28 ಮಂದಿ ಆರೋಪಿಗಳನ್ನು ಬಂಧಿಸಿ 8 ಕೆಜಿ 650 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಮಲ್ಲೇಶ್ವರಂ, ಯಶವಂತಪುರ, ಶ್ರೀರಾಮಪುರಂ, ಸುಬ್ರಮಣ್ಯನಗರ, ನಂದಿನಿ ಲೇಔಟ್, ಮಹಾಲಕ್ಷ್ಮಿ ಲೇಔಟ್, ರಾಜಗೋಪಾಲನಗರ, ಆರ್.ಎಂ.ಸಿ. ಯಾರ್ಡ್, ಸೋಲದೇವನಹಳ್ಳಿ, ಬಾಗಲಗುಂಟೆ ಸೇರಿ ಉತ್ತರ ವಿಭಾಗದ ಗಂಗಮ್ಮನಗುಡಿ ಹೋರತುಪಡಿಸಿ ಎಲ್ಲಾ ಪೆÇಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 19 ಪ್ರಕರಣಗಳನ್ನು ಪತ್ತೆಹಚ್ಚಿ 28 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದರು.
ಯಶವಂತಪುರ ಪೊಲೀಸರು ಬಂಧಿಸಿರುವ ಮತ್ತಿಕೆರೆಯ ಲೈನ್ ಮೆನ್ ಮೋಹನ್ ಕುಮಾರ್ (24) ಹಲವು ದಿನಗಳಿಂದ ಗಾಂಜಾ ಮಾರಾಟದಲ್ಲಿ ತೊಡಗಿರುವುದು ಪತ್ತೆಯಾಗಿದೆ. ಈತನ ಜೊತೆ ಇಂಜಿನಿಯರಿಂಗ್ ವಿದ್ಯಾರ್ಥಿ ಶ್ರೀನಿವಾಸ್ ರೆಡ್ಡಿ, ದಂತವೈದ್ಯಕೀಯ ವಿದ್ಯಾರ್ಥಿಗಳಾದ ಅಖಿಲ್ ನಾಯರ್, ಹುಸೇನ್ ಸೇಠ್ ಕೂಡ ಗಾಂಜಾ ಮಾರಾಟ ಮಾಡುತ್ತಿದ್ದ. ಬೇರೆಡೆಯಿಂದ ಗಾಂಜಾ ತಂದು ಗಿರಾಕಿಗಳಿಗೆ ಪೊಲೀಸರ ಕಣ್ತಪ್ಪಿಸಿ ಆರೋಪಿಗಳು ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








