ಕೆರೆಯಂಗಳದಲ್ಲಿ ಅಕ್ರಮವಾಗಿ ಮಣ್ಣು ತುಂಬುತ್ತಿದ್ದ 8 ಟ್ರ್ಯಾಕ್ಟರ್, ಒಂದು ಜೆಸಿಬಿ ವಶ.

ಚಳ್ಳಕೆರೆ

  ನಗರದ ಹೊರಭಾಗದಲ್ಲಿರುವ ಕರೇಕಲ್ ಕೆರೆಯಂಗಳದಲ್ಲಿ ನಿಯಮಬಾಹಿರವಾಗಿ ಮಣ್ಣನ್ನು ತುಂಬಿ ಸಾಗಾಟ ಮಾಡುತ್ತಿದ್ದ 8 ಟ್ರ್ಯಾಕ್ಟರ್ ಹಾಗೂ ಒಂದು ಜೆಸಿಬಿಯನ್ನು ವಶಪಡಿಸಿಕೊಳ್ಳಲಾಗಿದೆ.

   ಸಾರ್ವಜನಿಕರ ಮಾಹಿತಿ ಆಧಾರದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮತ್ತು ಸಿಬ್ಬಂದಿ ವರ್ಗ ಮಂಗಳವಾರ ಮಧ್ಯಾಹ್ನ ಕರೇಕಲ್ ಕೆರೆಯಂಗಳದಲ್ಲಿ 8 ಟ್ರ್ಯಾಕ್ಟರ್‍ಗಳಲ್ಲಿ ಮಣ್ಣು ತುಂಬಿ ಅದನ್ನು ಖಾಸಗಿ ಲೇಔಟ್‍ಗೆ ಸಾಗಾಟ ಮಾಡುತ್ತಿರುವ ಸಂದರ್ಭದಲ್ಲೇ ತಹಶೀಲ್ದಾರ್ ಭೇಟಿ ನೀಡಿ ಎಲ್ಲಾ ಟ್ರ್ಯಾಕ್ಟರ್ ಹಾಗೂ ಜೆಸಿಬಿಯನ್ನು ವಶಪಡಿಸಿಕೊಂಡು ಕಾನೂನು ಬಾಹಿರವಾಗಿ ಕೆರೆಯಂಗಳದ ಮಣ್ಣನ್ನು ಸಾಗಾಟ ಮಾಡಬೇಕಾದಲ್ಲಿ ಅನುಮತಿ ಪಡೆಯಬೇಕಾಗುತ್ತದೆ. ಈ ಬಗ್ಗೆ ಯಾವುದೇ ಅನುಮತಿಯನ್ನು ಪಡೆಯದೆ ಮಣ್ಣು ಸಾಗಾಟ ಮಾಡುತ್ತಿರುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ ಎಂದು ತಿಳಿಸಿ, ಟ್ರ್ಯಾಕ್ಟರ್ ಹಾಗೂ ಚಾಲಕರ ಸಹಿತ ಎಲ್ಲವನ್ನೂ ಇಲ್ಲಿನ ತಾಲ್ಲೂಕು ಕಚೇರಿ ಆವರಣಕ್ಕೆ ತಂದಿದ್ದಾರೆ.

    ಈ ಬಗ್ಗೆ ಟ್ರ್ಯಾಕ್ಟರ್ ಚಾಲಕರು ಮಾತನಾಡಿ, ನಮಗೆ ಈ ಬಗ್ಗೆ ಯಾವುದೇ ರೀತಿಯ ನಿರ್ದೇಶನವನ್ನು ಅಧಿಕಾರಿಗಳು ನೀಡಿರಲಿಲ್ಲ. ನಗರದ ಹೊರಭಾಗದ ಕೆಲವು ಲೇಔಟ್‍ಗಳಿಗೆ ತಗ್ಗುಮುಚ್ಚಲು ಮಣ್ಣು ಅವಶ್ಯಕತೆ ಇದ್ದು, ಈ ಮಣ್ಣನ್ನು ಅಲ್ಲಿಗೆ ಸಾಗಿಸಲಾಗುತ್ತಿತ್ತು ಎಂದಿದ್ದಾರೆ.

ತಹಶೀಲ್ದಾರ್ ಸ್ವಷ್ಷನೆ

     ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್ ಕೆರೆಯಂಗಳದ ಮಣ್ಣು ಅಕ್ರಮ ಸಾಗಾಟ ಬಗ್ಗೆ ಸಾರ್ವಜನಿಕರು ಹಲವಾರು ಬಾರಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಯಾರು ಇರುತ್ತಿರಲಿಲ್ಲ. ಆದರೆ, ಈ ದಿನ ಯಾವುದೇ ಮಾಹಿತಿ ನೀಡದೆ ಸಾರ್ವಜನಿಕರ ಮಾಹಿತಿ ಅನುಸರಿಸಿ ದಿಢೀರ್ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಎಲ್ಲಾ ವಾಹನಗಳು ಅಲ್ಲಿ ಮಣ್ಣು ತುಂಬುತ್ತಿದ್ದು ಅವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ದಂಡವನ್ನು ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಲಾಗುವುದು ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap