ಪುರಸಭೆಯಲ್ಲಿ ತಹಶಿಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆ.

ಹೊಸದುರ್ಗ

      ಹೊಂದಾಣಿಕೆ ಇಲ್ಲದಿದ್ದರೆ ಜನತೆಗೆ ನೀರು ಕೊಡುವಲ್ಲಿ ಅಸಮರ್ಪಕರಾಗುತೇವೆ,ಬಿರು ಬೇಸಿಗೆಯಲ್ಲಿ ನೀರು ಕೊಡುವುದು ಸಹಾ ತುಂಬಾ ಕಷ್ಟ ಆದರೆ ಇಂತಹ ಪರುಸ್ದಿತಿಯನ್ನ ಅಧಿಕಾರಿಗಳು ಹಾಗೂ ಸರ್ವ ಸದಸ್ಯರು ನಿಭಾಯಿಸಲೆ ಬೇಕು, ಎಂದು ತಹಶೀಲ್ದಾರ್ ವಿಜಯಕುಮಾರ್ ಸಲಹೆ ನೀಡಿದರು.

      ಪಟ್ಟಣದ ಪುರಸಭೆಯಲ್ಲಿ ಸೋಮುವಾರ ಪುರಸಭಾ ಅಧಿಕಾರಿಗಳು ಹಾಗೂ ಸದಸ್ಯರ ನಡುವೆ ನಡೆದ ಮಾತಿನ ಚಕಮಖಿಯ ನಂತರ ನಡೆದ ತುರ್ತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

      ಪಟ್ಟಣದಲ್ಲಿ ಶ್ರೀ ದುರ್ಗಾಂಬಿಕಾ ದೇವಿಯವರ ಜಾತ್ರೆ ನಡೆಯುತ್ತಿದೆ ಜನರಿಗೆ ನೀರಿಲ್ಲ ಎಂದರೆ ಅವರು ನಿತ್ಯದ ಕೆಲಸಗಳನ್ನ ನಿಭಾಯಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು ಪುರಸಭೆಯಿಂದ ಒಂದೇ ಬೋರ್‍ವೆಲ್ ಇದೆ ಎಂದು ಹೇಳುತ್ತಿದ್ದೀರಿ ಪ್ರವೀಟ್ ಬೋರ್‍ಗಳಿಂದ ಟ್ಯಾಂಕರ್‍ನಲ್ಲಿ ನೀರು ತುಂಬಿಸಿ ಸರಬರಾಜು ಮಾಡಿ ಅಂತಹ ಪ್ರವೀಟ್ ಬೋರ್‍ನವರಿಗೆ ಹಣವನ್ನ ಸಂದಾಯಮಾಡಲಾಗುವುದು.

     ಅವರು ಒಪ್ಪದಿದ್ದರೆ ಮಾಲಿಕರ ಹೆಸರುಗಳನ್ನು ಪಟ್ಟಿ ಮಾಡಿ ನನ್ನ ಬಳಿಗೆ ತನ್ನಿ ಅವರನ್ನ ನಾನು ಒಪ್ಪಿಸುವ ಪ್ರಯತ್ನ ಮಾಡುತ್ತೇನೆ ಎಂಬ ಆಶ್ವಾಸನೆಯ ಮಾತುಗಳನ್ನ ಆಡಿದ ಅವರು ಪುರಸಭಾ ಟ್ಯಾಕರ್ ಕಡಿಮೆ ಇದ್ದರೆ ಖಾಸಗಿಯಾಗಿ ಖರೀದಿಸಿ ನೀರು ಸರಬರಾಜು ಮಾಡಿ ಎಂದು ಮುಖ್ಯಾಧಿಕಾರಿ ಮಂಜುನಾಥ್ ಅವರಿಗೆ ಸೂಚನೆ ನೀಡಿದರು.

     ಪುರಸಭೆಯಿಂದ ನೀರಿನ ಟ್ಯಾಂಕ್ ಕಳುಹಿಸಿದರೆ ವಾರ್ಡಿನಲ್ಲಿ ಹಣ ಸಂಗ್ರಹಿಸುತ್ತಾರೆ ಹಾಗೂ ಮನೆಯ ತೊಟ್ಟಿಗಳಿಗೆ ತುಂಬಿಸಿಕೊಳ್ಳುತ್ತಾರೆ ಇದರಿಂದ ಜನರಿಗೆ ಸಮರ್ಪಕವಾಗಿ ಸಿಗಬೇಕಾದ ನೀರು ಸಿಗುತ್ತಿಲ್ಲಾ ಇಂತಹ ವಿಚಾರಗಳಿಂದ ನೀರು ಸರಬರಾಜು ಮಾಡುವುದಾದರೂ ಹೇಗೆ ಎಂಬ ಅತಂಕವನ್ನ ನೀರು ಸರಬರಾಜು ವಿಭಾಗದ ತಿಮ್ಮರಾಜು ವ್ಯಕ್ತಪಡಿಸಿದರು.

      ಅಧಿಕಾರಿಗಳಲ್ಲಿ ಹೊಂದಾಣಿ ಇಲ್ಲದೆ ಇರುವುದರಿಂದ ಸಮಸ್ಯೆಗಳು ಬರುತ್ತಿವೆ ಸಿಬ್ಬಂದಿಗಳು ಎಕ ವಚನದಲ್ಲಿ ಮಾತನಾಡುತ್ತಾರೆ ಎಂದು ಸದಸ್ಯ ದಾಳಿಂಬೆ ಗಿರೀಶ್ ಆರೋಪಿಸಿದರು.ನೀರಿಗಾಗಿ ವಾಡಿನ ಜನತೆ ರಾತ್ರಿ ಹಗಲೆನ್ನದೆ ಬಂದು ನಿಂತಿರುತ್ತಾರೆ.ಈ ವಿಚಾರದಲ್ಲಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಮುಖ್ಯಾಧಿಕಾರಿಗಳು ಪೋನ್ ರಿಸೀವ್ ಮಾಡುವುದೆ ಇಲ್ಲ ಎಂದು ಶ್ರೀನಿವಾಸ್ ದೂರಿದರು.
ಲೋಕಸಭಾ ಸದಸ್ಯರ ಅನುದಾನದಲ್ಲಿರುವ ನೀರಿನ ಟ್ಯಾಂಕ್ ಆಸ್ಪತ್ರೆಗೆ ನೀರು ಸರಬರಾಜು ಮಾಡುವುದನ್ನು ಬಿಟ್ಟು ಒಂದೇ ಮನೆಗೆ ಟ್ಯಾಂಕ್ ಮೂಲಕ ನೀರು ಹಾಕಿಸುತ್ತಾರೆ ಎಂದು ನಾಗರಾಜ್ ದೂರಿದರು.

      ನಮ್ಮ ವಾರ್ಡುಗಳಲ್ಲಿ ನೀರಿನ ಕೊರತೆ ಇದ್ದ ಕಾರಣ ಖಾಸಗಿ ಟ್ಯಾಂಕರ್ ತರಿಸಿ ನೀರು ಹಾಕಿಸುತ್ತೇವೆ ನಾವು ಯಾರಿಂದಲೂ ಸಹಾ ಹಣವನ್ನ ಪಡೆಯುತ್ತಿಲ್ಲ ಇಂತಹ ಆಪಾಧನೆಗಳು ಬರುವುದಾದರೆ ನಾವುಗಳು ಖಾಸಗಿ ಟ್ಯಾಂಕರ್‍ಗಳಿಂದ ನೀರು ತರಿಸುವುದನ್ನ ಇಂದಿನಿಂದ ನಿಲ್ಲಿಸುತ್ತೇವೆ ಎಂದು ಬಹುತೇಕ ಸದಸ್ಯರು ನುಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap