ಎಲೆಬೇತೂರಿನಲ್ಲಿ 83ನೇ ಶಿವ ಜಯಂತಿ

ದಾವಣಗೆರೆ :

       ತಾಲೂಕಿನ ಎಲೆಬೇತೂರು ಗ್ರಾಮದ ಶ್ರೀಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಹಾಗೂ ಎಲೆಬೇತೂರು ಸೇವಾ ಕೇಂದ್ರದ ಸಹಯೋಗದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ 83ನೇ ಶಿವ ಜಯಂತಿ ಕಾರ್ಯಕ್ರಮ ನಡೆಯಿತು.

     ಕಾರ್ಯಕ್ರಮದ ಪ್ರಯುಕ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಹಾಗೂ ಶಿವ-ಪಾರ್ವತಿಯರ ದರುಶನ ಮೆರವಣಿಗೆ ನಡೆಯಿತು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಲೀಲಾಜಿ ಮಾತನಾಡಿ, ಶಿವರಾತ್ರಿಯ ರಹಸ್ಯವನ್ನು, ಶಿವರಾತ್ರಿಯನ್ನು ರಾತ್ರಿಯೇ ಏಕೆ ಆಚರಿಸುತ್ತಾರೆ ಮತ್ತು ಉಪವಾಸದ ಹಿನ್ನೆಲೆಯ ಕುರಿತು ಸವಿವರ ನೀಡಿದರು
ಕಾರ್ಯಕ್ರಮವನ್ನು ಜಿ.ಪಂ. ಸದಸ್ಯೆ ರೇಣುಕಮ್ಮ ಕರಿಬಸಪ್ಪ ಉದ್ಘಾಟಿಸಿದರು.

    ಈ ಸಂದರ್ಭದಲ್ಲಿ ಹೆಚ್.ಬಸವರಾಜಪ್ಪ, ಬಿ.ವಿರೂಪಾಕ್ಷಪ್ಪ, ಎನ್.ಎಂ.ಬಸಪ್ಪ, ನಾಗರಕಟ್ಟೆ ಮರುಳುಸಿದ್ದಪ್ಪ, ನಾಗರಕಟ್ಟೆ ಬಸವರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು. ಬಿ.ಕೆ.ರಾಘವೆಂದ್ರ ಈಶ್ವರಿ ವಿವಿಯ ಬಗ್ಗೆ ಪರಿಚಯಿಸಿದರು. ಉಮಕ್ಕ ನಿರೂಪಿಸಿ, ಸ್ವಾಗತಿಸಿದರು. ಆಶಾ ನಾಗಪ್ಪ ವಂದಿಸಿದರು. ಭಜನಾ ಗೀತೆಗಳನ್ನು ಹಾಡಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link