ಧಾರವಾಡ:
ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಜ.4ರಿಂದ ನಡೆಯಲಿರುವ 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಶುರುವಾಗಿದೆ ,ಸಮಾರಂಭಕ್ಕೆ ಆಗಮಿಸುವ ಎಲ್ಲಾ ಅತಿಥಿಗಳಿಗಾಗಿ ಜಿಲ್ಲಾಡಳಿತ ಭಾರೀ ಸಿದ್ಧತೆಗಳನ್ನು ಮಾಡಿಕೊಂಡಿದ್ದು.ಬಂದವರಿಗೆಲ್ಲ ಉತ್ತರ ಕರ್ನಾಟಕದ ಪ್ರಸಿದ್ಧ ಖಾದ್ಯ ತಿನ್ನುವ ಸದಾವಕಾಶ ಒದಗಿ ಬಂದಿದೆ.
ಈ ವಿಷೇಶ ಸಂದರ್ಭಕ್ಕಾಗಿ ಅಗತ್ಯವಿರುವ ಸುಮಾರು 1 ಲಕ್ಷ ಕಡಕ್ ರೊಟ್ಟಿಗಳು ಈಗಾಗಲೇ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಲಕ್ಷಾಂತರ ರೊಟ್ಟಿಗಳು ಸಿದ್ಧಗೊಳ್ಳುತ್ತಿವೆ. ಶಿಗ್ಲಿ ಗ್ರಾಮ ಕಸಾಪ ಅಧ್ಯಕ್ಷರಾಗಿರುವ ಮನು ಬಳಿಗಾರ್ ಅವರ ಸ್ವಗ್ರಾಮವೂ ಆಗಿದೆ.
ಈ ಬಾರಿ ಧಾರವಾಡದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನಲೆಯಲ್ಲಿ ಅವಕಾಶ ಸಿಕ್ಕಿರುವುದರಿಂದ ಅವರೇ ಕಾಳಜಿ ವಹಿಸಿ, ಉತ್ತರ ಕರ್ನಾಟಕದ ಜವಾರಿ ಖಡರ್ ರೊಟ್ಟಿಯನ್ನು ಸ್ವಗ್ರಾಮದಲ್ಲಿಯೇ ಸಿದ್ಧಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








