ಪಾಸ್ ದುರುಪಯೋಗ :ಒಂದೇ ಕುಟುಂಬದ 9 ಜನರಿಗೆ ಕ್ವಾರಂಟೈನ್

ಹುಬ್ಬಳ್ಳಿ:

     ಪೊಲೀಸ್ ಇಲಾಖೆ ಅಗತ್ಯ ಮತ್ತು ಅವಶ್ತಕ ಓಡಾಟಗಳಿಗಾಗಿ ನೀಡುವ ಟ್ರಾವೆಲ್ ಪಾಸ್ ದುರುಪಯೋಗ ಪಡಿಸಿಕೊಂಡು ವಿವಾಹ ಸಮಾರಂಭಕ್ಕೆ ಹಾಜರಾಗಿದ್ದ ಒಂದೇ ಕುಟುಂಬದ 9 ಮಂದಿಗೆ ಕಡ್ಡಾಯವಾಗಿ ಕ್ವಾರಂಟೈನ್ ವಿಧಿಸಲಾಗಿದೆ .ಧಾರವಾಡ ಜಿಲ್ಲೆಯ 9 ಮಂದಿ ಚೆಕ್ ಪೊಸ್ಟ್ ಗಳಲ್ಲಿ ಟ್ರಾವೆಲ್ ಪಾಸ್ ಬಳಸಿಕೊಂಡು ಸಂಚರಿಸಿ ನರೇಂದ್ರ ಚೆಕ್ ಪೋಸ್ಟ್ ಬಳಿ ಸಿಕ್ಕಿಬಿದ್ದಿದ್ದಾರೆ.

    ಡಿವೈಎಸ್ ಪಿ ರವಿ ನಾಯಕ್ ಅವರ ತಂಡ KA22Z5691 ವಾಹನವನ್ನು ಪರಿಶೀಲಿಸುವಾಗ ವಾಹನದಲ್ಲಿದ್ದವರು ಹುಬ್ಬಳ್ಳಿಯಲ್ಲಿ ಮದುವೆ ಮುಗಿಸಿ ವಾಪಸಾಗುತ್ತಿದ್ದದ್ದು ಕಂಡು ಬಂದಿದೆ. ವೈದ್ಯಕೀಯ ಕಾರಣಕ್ಕೆ ನೀಡಿದ್ದ ಪಾಸ್ ಅನ್ನು ದುರುಪಯೋಗ ಪಡಿಸಿಕೊಂಡಿದ್ದು ಗೊತ್ತಾಗಿದೆ .ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಕುಟುಂಬವು ಜಿಲ್ಲಾಡಳಿತದಿಂದ ಪಾಸ್ ಕೋರಿತ್ತು , ಐದು ಜನರ ಓಡಾಟಕ್ಕೆ ಅನುವು ಮಾಡಿಕೊಡಲಾಗಿತ್ತು  ಎಂದು ಹೇಳಲಾಗಿದೆ.

  5 ಮಂದಿಯ ಪಾಸ್ ಅನ್ನು 9 ಮಂದಿ ದುರುಪಯೋಗ ಪಡಿಸಿಕೊಂಡಿರುವ ಪ್ರಕರಣದಲ್ಲಿ ವಾಹನವನ್ನು ಸೀಜ್ ಮಾಡಿರುವ ಪೊಲೀಸರು, ಅದರಲ್ಲಿದ್ದವರ ಗಂಟಲು ದ್ರವ ಮಾದರಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ