ಮಿಡಿಗೇಶಿ
ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿ ಮಟ್ಟದ ಕಂದಾಯ ತನಿಖಾಧಿಕಾರಿಗಳ ಕಾರ್ಯಾಲಯದಲ್ಲಿ ಜ. 09 ರಂದು ಉಪವಿಭಾಗಾಧಿಕಾರಿ ಡಾ.ನಂದಿನಿದೇವಿ ಖಾತೆ ಮತ್ತು ಪಹಣಿ ಹೊಂದಿರುವವರ ದಾಖಲೆಗಳನ್ನು ಪರಿಶೀಲಿಸಿ ದರು. ಕಂದಾಯಾಧಿಕಾರಿ ಹಾಗೂ ಗ್ರಾಮಲೆಕ್ಕಿಗರ ಈ ಸಂದರ್ಭದಲ್ಲಿ ಇದ್ದು, ಖುದ್ದು ನೂರಾರು ರೈತರನ್ನು ವಿಚಾರಿಸಿ, ಪಹಣಿ ಸರಿಪಡಿಸಿಕೊಟ್ಟರು.
ಇದರಿಂದಾಗಿ ರೈತರು ಕೋರ್ಟ್ ಕಛೇರಿಗಳಿಗೆ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಅಲೆದಾಡುವುದು ತಪ್ಪಿತು. ನ್ಯಾಯಾಲಯಗಳಿಗೆ ತಿರುಗಾಡುವ ಮತ್ತು ರೈತರಿಗೆ ಸರ್ಕಾರಕ್ಕೆ ಭರಿಸಬೇಕಾದಂತಹ ಹಣದ ಉಳಿತಾಯವು ಆದಂತಾಗಿರುತ್ತದೆ. ಈಗಾಗಲೆ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿ ಕೇಂದ್ರ ಸ್ಥಾನದಲ್ಲಿ 22 ಪ್ರಕರಣಗಳು, ದೊಡ್ಡೇರಿ ಹೋಬಳಿಯಲ್ಲಿ 38 ಪ್ರಕರಣಗಳು ಹಾಗೂ ಮಿಡಿಗೇಶಿ ಹೋಬಳಿಯಲ್ಲಿ 36 ಪ್ರಕರಣಗಳು ಇತ್ಯರ್ಥವಾಗಿವೆ.
ಸರ್ಕಾರದ ಆದೇಶಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಂದೀಶ್, ಅಪೀಲು ಪ್ರಕರಣ ತಿದ್ದುಪಡಿಯ ವಿಷಯ ನಿರ್ವಾಹಕ ಕೆ.ಎಲ್.ಸುದರ್ಶನ್, ಗ್ರಾಮಲೆಕ್ಕಿಗರಾದ ಪ್ರಸನ್ನ ಕುಮಾರ್, ಕೆಂಪಯ್ಯ, ಹರೀಶ್, ಷಬ್ಬೀರ್, ಹೊನ್ನೇಶ್ ಹಾಗೂ ಗ್ರಾಮ ಸಹಾಯಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
