ಸದನದಲ್ಲಿ ಸದ್ದಿಲ್ಲದೆ ಸದ್ದು ಮಾಡುತ್ತಿದೆ ಅನಾಮಧೇಯ ಪತ್ರ..?

ರಾಜಾಹುಲಿಗೆ ಖೆಡ್ಡಾ ತೋಡಿದ್ರಾ ಸ್ವಪಕ್ಷೀಯರು

ಬೆಂಗಳೂರು: 

     ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಅವಿರತ ಶ್ರಮ ಪಟ್ಟ ಬಿಎಸ್ ಯಡಿಯೂರಪ್ಪ ವಿರುದ್ಧವೇ ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಅನಾಮಧೇಯ ಪತ್ರವೊಂದು ಸದ್ದಿಲ್ಲದೇ ಸುದ್ದಿ ಮಾಡುತ್ತಿದೆ.

     ಯಡಿಯೂರಪ್ಪ ಅವರಗೆ ವಯಸ್ಸಾಯಿತು. ಸಿಎಂ ಕುರ್ಚಿ ಬಿಟ್ಟು ರಾಜ್ಯಪಾಲರಾಗಿ ಎಂದು ಪತ್ರದಲ್ಲಿ ತಿಳಿಸಿದ್ದು .ಪುತ್ರ ವಿಜಯೇಂದ್ರ ಇಲಾಖಾ ವರ್ಗಾವಣೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮೊದಲು ಬಿಎಸ್ ವೈ ಅವರನ್ನು ಹೊಗಳಿದ ಪತ್ರ ನಂತರದಲ್ಲಿ  ಬಿಎಸ್ ವೈ ಅವರನ್ನು ಟೀಕೆ ಮಾಡುವಂತಿದೆ ಎನ್ನಲಾಗಿದೆ.ಪತ್ರದಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನೇ ಗುರಿಯಾಗಿಸಿಕೊಂಡು ಬರೆದಿರುವ ಈ ಪ್ರಕಟಣೆ ಮಂಗಳವಾರ ಮಾಧ್ಯಮ ಸಂಸ್ಥೆಗಳ ಕೈಸೇರಿದ್ದು, ಇದುವರೆಗೂ ಯಾರೊಬ್ಬರೂ ಅದರ ಹೊಣೆ ಹೊತ್ತಿಲ್ಲ ಎಂದು ತಿಳಿದು ಬಂದಿದೆ.

    ಬಿಎಸ್ ಯಡಿಯೂರಪ್ಪ ಅವರು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅನ್ನು ವಂಶಾಡಳಿತ, ಸ್ವಾರ್ಥ ರಾಜಕಾರಣ ಮತ್ತು ಕುಟುಂಬ ವ್ಯಾಮೋಹಕ್ಕೆ ಬಲಿಯಾದ ಪಕ್ಷ ಎನ್ನುತ್ತಾರೆ ಆದರೆ ಅವರು ಈಗ ಮಾಡುತ್ತಿರುವುದಾದರು ಎನು ? ಇನ್ನು ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎನ್ನುತ್ತಾರೆ.

    ಸ್ವಜಾತಿ ಪ್ರೇಮ ಮೆರೆಯುವುದು ಜನಹಿತವಲ್ಲ. ಮುಂದಿನ ವಾರ 77ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವಯೋವೃದ್ಧ ಯಡಿಯೂರಪ್ಪ ಅವರು ಚುನಾವಣಾ ರಾಜಕೀಯ ಬಿಟ್ಟು ಮಾರ್ಗದರ್ಶಕರಾಗಿರುವುದು ಒಳ್ಳೆಯದು. ಅವರಿಗೆ ರಾಜ್ಯಪಾಲ ಹುದ್ದೆಯನ್ನು ನೀಡುವ ಮೂಲಕ ಗೌರವಿಸಿ ಅವರ ಅನುಭವ ಬಳಸಿಕೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

    ವಿಜಯೇಂದ್ರ ಅವರನ್ನು ಸೂಪರ್‌ ಸಿಎಂ, ಡಿಫ್ಯಾಕ್ಟೊ ಸಿಎಂ ಎಂದು ಸ್ವಪಕ್ಷೀಯರು ಹಾಗೂ ಪ್ರತಿಪಕ್ಷದವರು ನೇರ ಆರೋಪ ಮಾಡುವುದು ನಮ್ಮ ಮನಸ್ಸಿಗೆ ಘಾಸಿ ಉಂಟು ಮಾಡಿದೆ. ಶಿವಾನಂದ ವೃತ್ತದ ಬಳಿಯ ಅವರ ಆದರ್ಶ ರೋಸ್‌ ಅಪಾರ್ಟ್‌ಮೆಂಟ್‌ ಶಕ್ತಿ ಕೇಂದ್ರವಾಗಿದೆ. ತಮ್ಮನ್ನು ಭೇಟಿ ಮಾಡುವ ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಉದ್ದಿಮೆದಾರರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪುತ್ರ ವಿಜಯೇಂದ್ರ ಅವರನ್ನು ಭೇಟಿ ಮಾಡಲು ಕಳುಹಿಸುತ್ತಾರೆ. ಸಂಜೆಯಾದರೆ ನಗರದ  ಕೆಲ ಪ್ರಸಿದ್ದ ಹಾಗು ಪ್ರತಿಷ್ಠಿತ ಪಂಚತಾರಾ ಹೋಟೆಲ್‌ ಗಳಲ್ಲಿ ವಿಜಯೇಂದ್ರ ಅವರನ್ನು ಕಾಣಬಹುದು ಎಂಬ ಮಾತಿದೆ ಎಂದೂ ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap