ಸಾವಯಾವ ಕೃಷಿಯಲ್ಲಿ ಯಶಸ್ಸು ಕಂಡ ಯಶಸ್ವಿ ರೈತ..!!

ಗುಬ್ಬಿ

     ಕಳೆದ ಹಲವು ವರ್ಷಗಳಿಂದ ಸಾವಯವ ಕೃಷಿಯಿಂದ ಉತ್ತಮ ಬೆಳೆಯುವುದರ ಜೊತೆಗೆ ರಾಸಾಯನಿಕ ಗೊಬ್ಬರ ಬಳಸಿ ಬೆಳೆಗಳನ್ನು ಬೆಳೆಯುತ್ತಿದ್ದ ರೈತರಿಗೆ ಮನವೊಲಿಸಿ ಸಾವಯವ ಕೃಷಿ ಅಳವಢಿಸಿಕೊಳ್ಳುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿರುವ ಸಾವಯವ ಕೃಷಿಕ ಅಮ್ಮನಘಟ್ಟ ಶಂಕರಪ್ಪ ಇದೀಗ ಹಲಸಿನ ಕಾಯಿಯಿಂದ ಹಲಸಿವ ಚಿಪ್ಸ್ ತಯಾರಿಸಿ ಮನೆಗೆ ಬಂದವರಿಗೆ ತಿನ್ನಲು ಕೊಡುತ್ತಾರೆ ಅಲ್ಲದೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.

      ಇದು ಹಲಸಿನ ಹಣ್ಣಿನ ಕಾಲವಾಗಿರುವುದರಿಂದ ಹಣ್ಣಿಗಷ್ಟೆ ಬಳಕೆಯಾಗುತ್ತಿದ್ದ ಹಲಸನ್ನು ಚಿಪ್ಸ್ ಮಾಡುವ ಮೂಲಕ ಕಾಯಿಯನ್ನು ಬಳಸಬಹುದೆಂಬ ವಿಧಾನವನ್ನು ತೋರಿಸಿಕೊಟ್ಟಿದ್ದಾರೆ. ಹಲಸಿನ ಚಿಪ್ಸ್‍ನ್ನು ಸಾವಯವ ವಿಧಾನದಿಂದಲೆ ತಯಾರಿಸುತ್ತಿರುವುದು ಇವರ ವಿಶೇಷವಾಗಿದೆ.

        ಚೆನ್ನಾಗಿ ಬಲಿತ ಹಲಸಿನ ಕಾಯಿಯನ್ನು ಹೋಳು ಮಾಡಿ ಹಲಸಿನ ಕಾಯಿ ತೊಳೆಗಳನ್ನು ಬಿಡಿಸಿ ಅವುಗಳನ್ನು ಸಣ್ಣ ಸಣ್ಣದಾಗಿ ಹಚ್ಚಿ ನಂತರ ತಮ್ಮ ತೋಟದ ಸಾವಯವ ಕೃಷಿ ವಿಧಾನದಿಂದ ಬೆಳೆದ ತೆಂಗಿನ ಕಾಯಿ ಕೊಬ್ಬರಿಯಿಂದ ಎಣ್ಣೆ ತೆಗೆಸಿ ಶುಧ್ದವಾದ ಎಣ್ಣೆಯಿಂದ ಸೌದೆ ಒಲೆಯಲ್ಲಿ ನೈಸರ್ಗಿಕವಾಗಿ ಹಲಸಿನ ಚಿಪ್ಸ್‍ನ್ನು ಕೊಬ್ಬರಿ ಎಣ್ಣೆಯಲ್ಲಿ ಕರಿದು ಅದಕ್ಕೆ ರುಚಿಗನುಗುಣವಾಗಿ ಖಾರದ ಪುಡಿ ಮತ್ತು ಉಪ್ಪನ್ನು ಬೆರಸಿ ರುಚಿಕರವಾದ ಹಲಸಿನ ಚಿಪ್ಸ್‍ನ್ನು ತಯಾರಿಸಿ ಹೊಸ ರುಚಿ ಕಂಡುಕೊಂಡಿದ್ದಾರೆ.

        ತಯಾರಿಸಿದ ಹಲಸಿನ ಚಿಪ್ಸ್‍ನ್ನು ರಿಯಾಯಿತಿ ದರದಲ್ಲಿ ಮಾರಾಟವನ್ನು ಮಾಡುತ್ತಿದ್ದಾರೆ ಇವರು ತಯಾರಿಸಿದ ಹಲಸಿನ ಚಿಪ್ಸ್‍ಗೆ ಇನ್ನಿಲ್ಲದ ಬೇಡಿಕೆಯಿದೆ. ಇಡೀ ತೋಟವನ್ನೆ ಸಾವಯವ ಕೃಷಿಯನ್ನಾಗಿಸಿರುವ ಶಂಕರಪ್ಪ ಮಾದರಿ ಕೃಷಿಕರಾಗಿದ್ದಾರೆ. ತೋಟಕ್ಕೆ ಬರುವ ಅದೆಷ್ಟೂ ರೈತರಿಗೆ ಸಾವಯವ ಕೃಷಿ ನಗ್ಗೆ ಸಮಗ್ರವಾದ ಮಾಹಿತಿ ಮಾರ್ಗದರ್ಶನ ನೀಡುವುದರ ಜೊತೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಗೆ ಹೋಗಿ ರೈತರಿಗೆ ಉತ್ತಮ ಮಾರ್ಗಧರ್ಶನ ನೀಡುತ್ತಿದ್ದಾರೆ.

        ತೋಟದಲ್ಲಿ ಉತ್ಪನ್ನವಾಗುವ ಕೃಷಿ ತ್ಯಾಜ್ಯವನ್ನು ತೋಟಕ್ಕೆ ಬಳಕೆ ಮಾಡುವ ಮೂಲಕ ಸಾವಯವ ಗೊಬ್ಬರ ತಯಾರಿಸಿ ತೋಟಕ್ಕೆ ಬಳಕೆ ಮಾಡುತ್ತಿದ್ದಾರೆ. ಈವರೆಗೂ ಯಾವುದೆ ರೀತಿಯ ಕೀಟನಾಶಕವ್ನಾಗಲಿ ಅಥವಾ ರಾಸಾಯನಿಕ ಗೊಬ್ಬರವನ್ನಾಗಲಿ ಬಳಕೆ ಮಾಡುತ್ತಿಲ್ಲ.

        ತೋಟದಲ್ಲಿನ ತೆಂಗು, ಅಡಿಕೆ, ಬಾಳೆ ಬೆಳೆಗಳ ಜೊತೆಗೆ ಮಿಶ್ರ ಬೆಳೆಗಲಾಗಿ ಸೀಬೆ, ಸಪೋಟ, ಚಕ್ಕೋತ, ನಿಂಬೆ, ಹಲಸು, ದಾಳಿಂಬೆ, ಏಲಕ್ಕಿ, ಹರಿಸಿನ, ಕಾಳು ಮೆಣಸು, ಶುಂಠಿ ಮುಂತಾದ ಬೆಳೆಗಳನ್ನು ಸಾವಯವ ಕೃಷಿ ವಿಧಾನದಿಂದಲೆ ಬೆಳೆಯುತ್ತಿರುವುದರಿಂದ ಇವರ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇವರು ಕುಡಿಯಲು ಬಳಸುವ ನೀರು ಸಹ ಮಳೆ ನೀರು ತಮ್ಮ ಮನೆಯ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಿ ಪ್ರತ್ಯೇಕ ತೊಟ್ಟಿಯಲ್ಲಿ ಸಂಗ್ರಹಿಸಿ ವರ್ಷ ಪೂರ್ತಿ ಶುಧ್ದವಾದ ಮಳೆ ನೀರನ್ನೆ ಕುಡಿಯಲು ಬಳಸುತ್ತಾರೆ. ಇವರ ಸಾವಯವ ಕೃಷಿ ಸಾಧನೆ ರೈತರಿಗೆ ಉತ್ತಮ ಮಾರ್ಗಧರ್ಶನವಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link