ಹಾವೇರಿ :
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಎಲ್ಲ ವರ್ಗದ ಜನರು ಬಹುಜನ ಸಮಾಜ ಪಕ್ಷಕ್ಕೆ ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಬಿಎಸ್ಪಿ ಪಕ್ಷದ ಅಭ್ಯರ್ಥಿ ಅಯೂಬಖಾನ್ ಎ ಪಠಾಣ ಹೇಳಿದರು.
ನಗರದ ಹುಕ್ಕೇರಿಮಠದ ಶ್ರೀ ಸದಾಶಿವ ಮಹಾಸ್ವಾಮಿಗಳ ಆರ್ಶಿವಾದ ಪಡೆದು ಇಲ್ಲಿನ 18,23,15,24,17,16,08 ವಾರ್ಡಗಳಲ್ಲಿ ಪ್ರಚಾರ ಕಾರ್ಯಕೈಗೊಂಡು ಅವರು ಮಾತನಾಡಿದರು. ಕ್ಷೇತ್ರದ ಎಲ್ಲ ಭಾಗಗಳಲ್ಲಿ ಪ್ರಚಾರ ಕೈಗೊಂಡಾಗ ಮತದಾರರು ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಗಳನ್ನು ತಿರಸ್ಕರಿಸುವ ತೀರ್ಮಾನಕ್ಕೆ ಬಂದಾಗಿದೆ. ದೇಶದಲ್ಲಿ ಎಲ್ಲ ವರ್ಗದ ಜನರ ಪರವಾಗಿ ಕೆಲಸ ಮಾಡುವ ಬಿಎಸ್ಪಿ ಪಕ್ಷದ ಅಕ್ಕ ಮಾಯಾವತಿಯವರು ದೇಶದ ಆಡಳಿತ ಹಿಡಿಯುವಂತೆ ಜನರು ಬಯಸುತ್ತಿದ್ದಾರೆ.
ಈ ಬಾರಿ ಬಿಎಸ್ಪಿ ಪಕ್ಷಕ್ಕೆ ಬೆಂಬಲ ದೊರೆಯಲಿದೆ ಎಂದು ಬಿಎಸ್ಪಿ ಪಕ್ಷದ ಅಭ್ಯರ್ಥಿ ಅಯೂಬಖಾನ ಪಠಾಣ ಹೇಳಿದರು. ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷರಾದ ಅಶೋಕ ಮರೆಣ್ಣನವರ ಬಿಎಸ್ಪಿ ಪಕ್ಷ ಎಲ್ಲ ವರ್ಗದ ಜನರ ಆಶೋತ್ತರ ಇಡೇರಿಸುವ ಉದ್ದೇಶಿತ ಪಕ್ಷವಾಗಿದೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕೋರಿದರು. ಪ್ರಚಾರದಲ್ಲಿ ಬಿಎಸ್ಪಿ ಪಕ್ಷ ಮುಖಂಡರಾದ ಶಂಭುಲಿಂಗಯ್ಯ ಹನಗೋಡಿಮಠ.ಅಬ್ದುಲ್‍ಖಾದರ ಧಾರವಾಡ, ವಿಜಯಕುಮಾರ ವಿರಕ್ತಮಠ.ಶಿವಕುಮಾರ ತಳವಾರ.ಎಂ.ಕೆ ಮಖಬೂಲ್.ನಾಗರಾಜ ಅಂಗಡಿ,ನಿಲಕಂಠಪ್ಪ ಗುಡಗೂರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
