ಅಭಿನವ ರುದ್ರ ಚನ್ನ ಮಲ್ಲಿಕಾರ್ಜುನ ಸ್ವಾಮಿಜಿಗಳ 9ನೇ ವರ್ಧಂತಿ ಮಹೋತ್ಸವ

ಹಾವೇರಿ :

     ಗುರು ಸರ್ವೋತ್ತಮ, ಗುರು ಎನ್ನುವ ತತ್ವ ಬಹಳ ಶ್ರೇಷ್ಠವಾದುದು, ಗುರುವನ್ನು ವೇದಗಳು, ಸ್ಮೃತಿಗಳು, ವಚನಕಾರರು, ಶಾಸ್ತ್ರಕಾರರು ಎಲ್ಲರೂ ಹಾಡಿ ಹೊಗಳಿದ್ದಾರೆ, ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರಿಗಿಂತಲೂ ಗುರು ಶ್ರೇಷ್ಠ ಎಂದು ಉಲ್ಲೇಖಿಸಲಾಗಿದೆ ಎಂದು ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾವರು ಹೇಳಿದರು.

     ನಗರದ ಹರಸೂರು ಬಣ್ಣದಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳ 34ನೇ ಪುಣ್ಯ ಸ್ಮರಣೋತ್ಸವ ಹಾಗೂ ಅಭಿನವ ರುದ್ರ ಚನ್ನ ಮಲ್ಲಿಕಾರ್ಜುನ ಸ್ವಾಮಿಜಿಗಳ 9ನೇ ವರ್ಧಂತಿ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಮಂಗಳವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಧರ್ಮೋತ್ತೇಜಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಎರಡನೇ ದಿನದ ಸಂಜೆ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.

      ಗುರು ಶ್ರೇಷ್ಠ ಎಂದು ವೇದ ಹೇಳಿದೆ. ಅದಕ್ಕಾಗಿ ಹರ ಮುನಿದರು ಗುರು ಕಾಯುವ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ, ಯಾವ ವ್ಯಕ್ತಿಯಲ್ಲಿ ಗುರುವಿನ ಬಗ್ಗೆ ಶ್ರದ್ಧೆ, ಭಕ್ತಿ ಇರುವುದಿಲ್ಲವೂ ಆ ವ್ಯಕ್ತಿಗೆ ದೇವರವಲವೂ ಇರುವುದಿಲ್ಲ, ಕೆಲ ಪ್ರದೇಶಗಳಲ್ಲಿ ಗುರುವನ್ನು ತಾಯಿಯ ಸರಿಸಮಾನವಾಗಿ ಕಾಣಲಾಗಿದೆ ಎಂದು ಹೇಳಿದರು.

      ಪರುಷಮಣಿಯ ಸ್ಪರ್ಷದಿಂದ ಎಲ್ಲ ಲೋಹಗಳು ಬಂಗಾರವನ್ನಾಗಿ ಮಾಡುವ ಶಕ್ತಿ ಇದೆಯೇ ಹೊರತು ಮತ್ತೊಂದು ಪರುಷಮಣಿಯನ್ನು ಸೃಷ್ಠಿಸುವ ಸಾಮಥ್ರ್ಯ ಅದಕ್ಕಿಲ್ಲ, ಆದರೆ ಗುರುವಾದವರು ಅನೇಕ ಶಿಷ್ಯರಿಗೆ ಸಂಸ್ಕಾರವನ್ನು ನೀಡಿ ಮಾನವನನ್ನು ಮಹದೇವನನ್ನಾಗಿ, ನರನನ್ನು ಹರನನ್ನಾಗಿಸುವ ಸಾಮಥ್ರ್ಯವಲ್ಲದೆ ತನ್ನಂತಹ ಸಾವಿರಾರು ಗುರುಗಳನ್ನು ಸೃಷ್ಠಿಸುವ ಸಾಮಥ್ರ್ಯವಿದೆ ಅದಕ್ಕಾಗಿ ಗುರು ಸರ್ವಶ್ರೇಷ್ಠರು ಎಂದರು.

       ಕಬೀರ ದಾಸರು ಗುರು ಮತ್ತು ದೇವರು ಏಕಕಾಲಕ್ಕೆ ಪ್ರತ್ಯಕ್ಷನಾದರೆ ಮೊದಲು ಗುರುವಿಗೆ ನಮಸ್ಕರಿಸುವುದಾಗಿ ಅವರು ಅನೇಕ ದೊಹೆಗಳಲ್ಲಿ ಗುರುವಿನ ಬಗ್ಗೆ ಉಲ್ಲೇಖಿಸಿದ್ದಾರೆ. ದೆವರೆಂಬುದನ್ನು, ಜ್ಞಾನವನ್ನು ಮೊಟ್ಟ ಮೊದಲು ಕೊಟ್ಟವರು ಗುರು ಹೀಗಾಗಿ ನಾನು ಮೊದಲು ಗುರುವಿಗೆ ನಮಸ್ಕರಿಸುವುದಾಗಿ ಅವರು ತಿಳಿಸಿರುವುದನ್ನು ಗಮನಿಸಿದರೆ ಶ್ರೇಷ್ಠರಲ್ಲಿ ಶ್ರೇಷ್ಠವಾದವರು ಗುರುಗಳು ಎನ್ನುವುದು ಅರ್ಥವಾಗುತ್ತದೆ.

     ಪಂಚಪೀಠಗಳು ದೇಶದ ನಾಲ್ಕು ದಿಕ್ಕುಗಳಲ್ಲಿ ಪ್ರಸರಿಸಿವೆ, ಶ್ರೀಶೈಲ ಶಾಖಾಮಠವಾದ ಹರಸೂರು ಬಣ್ಣದಮಠ 160 ವರ್ಷಗಳಷ್ಟು ಹಿಂದೆನೇ ಗುರುಕುಲವನ್ನು ಪ್ರಾರಂಭಿಸಿ ಜಾತಿ, ಜನಾಂಗ, ಧರ್ಮ ಬೇಧವಿಲ್ಲದೆ, ಅನ್ನ, ಅಕ್ಷರ ದಾಸೋಹವನ್ನು ಮಾಡಿದ ಕೀರ್ತಿ ಈ ಮಠಕ್ಕಿದೆ ಎಂದರು.

      ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಧಾರ್ಮಿಕ ಮತ್ತು ಶೈಕ್ಷಣಿಕ ತಳಹದಿಯ ಮೇಲೆ ಶಾಂತಿ ನೆಮ್ಮದಿಯನ್ನು ಮೂಡಿಸುವುದರಲ್ಲಿ ಮಠ ಮಾನ್ಯಗಳ ಪಾತ್ರ ಮಹಳ ಪ್ರಮುಖವಾಗಿದೆ ಎಂದರು.

       ಮದ್ದರಕಿ, ರಾಣೇಬೆನ್ನೂರ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ಮಾನವನ ಅಸ್ತಿತ್ವ ಪ್ರಜ್ವಲಿಸಬೇಕಾದರೆ ಒಬ್ಬ ಗುರುವಿನ ಅವಶ್ಯಕತೆ ಇದೆ. ಗುರು ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುವುದರಿಂದ ಗುರುವನ್ನು ಸೂರ್ಯನಿಗೆ ಹೋಲಿಸಲಾಗಿದೆ ಎಂದು ತಿಳಿಸಿದರು.

       ಬಂಕಾಪುರ ಭವೀಸ್‍ಮಹಲ್ ಅರಳೆಲೆ ಹಿರೇಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಜಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮಿಜಿಗಳ ಸಮ್ಮುಖವಹಿಸಿದ್ದರು. ಉಪದೇಶವನ್ನು ಹೇರೂರ ಗುಬ್ಬಿಮಠದ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಹಾಗೂ ಕೂಡಲ ಗುರುನಂಜೇಶ್ವರಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮಿಜಿ ನೀಡುವರು.ವೀರಯ್ಯ ಹಿರೇಮಠ ಮಾತನಾಡಿದರು, ಮಂಜುಳಾ ಅಕ್ಕಿ ಆಶಯ ನುಡಿಗಳನ್ನಾಡುವರು.ವೇದಿಕೆಯಲ್ಲಿ ಡಾ. ದೀಪಾ ವಾಗೀಶ ಛತ್ರಮಠ, ಡಾ. ವಿನಾಯಕ ಬ್ಯಾಟಪ್ಪನವರ, ಲತಾ ಕೆ.ಮಂಜಪ್ಪ, ಪ್ರಕಾಶ ಶೆಟ್ಟಿ, ಶಿವಯೋಗಿ ಹುಲಿಕಂತಿಮಠ, ಮಾಲತೇಶ ಜಾಧವ ಅನೆಕರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link