ಚಿಕ್ಕಬಳ್ಳಾಪುರ:
ಸರ್ಕಾರ ಜನರ ಸೇವೆಗಾಗಿ ಮಿತವ್ಯಯ ಸೇವೆಗಳ ಅಡಿಯಲ್ಲಿ ಇ ಖಾತೆ ಮಾಡಿಕೊಡಲು ಮುಂದಾದರೆ ಗುಡಿಬಂಡೆಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವ್ಯಕ್ತಿಯೊಬ್ಬರಿಂದ 25 ಸಾವಿರ ಲಂಚ ಪಡೆಯುತ್ತಿದ್ದ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಿನ್ನೆ ಬಂಧಿಸಿದ್ದಾರೆ. ಪಟ್ಟಣದ 5ನೇ ವಾರ್ಡ್‌ನ ನಿವಾಸಿ ಬಾಲಾಜಿಯವರು ತಮಗೆ ಸೇರಿದ 8 ಸೈಟ್‌ಗಳಿಗೆ ಸಂಬಂಧಿಸಿದ ಇ ಖಾತೆಗಳನ್ನು ಮಾಡಿಕೊಡಲು ಅರ್ಜಿ ಹಾಕಿದ್ದರು.
ಇ ಖಾತೆ ಮಾಡಿಕೊಡಲು ಪ.ಪಂ. ಮುಖ್ಯಾಧಿಕಾರಿ ಎನ್. ನಾಗರಾಜು ಸುಮಾರು 50 ಸಾವಿರ ರೂಪಾಯಿ ಲಂಚ ಕೇಳಿದ್ದರು. ಈ ಬಗ್ಗೆ ಬಾಲಾಜಿ ಎಸಿಬಿ ಕಚೇರಿಗೆ ದೂರು ನೀಡಿದ್ದು, ಎಸಿಬಿ ನಿದೇರ್ಶನದಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗರಾಜ್‌ಗೆ ಅವರದೇ ಕಚೇರಿಯಲ್ಲಿ 25 ಸಾವಿರ ಹಣ ನೀಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಮುಖ್ಯಾಧಿಕಾರಿ ನಾಗರಾಜುರನ್ನು ವಶಕ್ಕೆ ಪಡೆದರು. ನಂತರ ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಚಿಕ್ಕಬಳ್ಳಾಪುರದ ಎ.ಸಿ.ಬಿ. ಡಿ.ವೈ.ಎಸ್.ಪಿ ವೆಂಕಟೇಶ್‌ನಾಯ್ಡು, ಸಬ್ ಇನ್ಸ್ ಪೆಕ್ಟರ್ ಗಳಾದ ಶಿವಮಲ್ಲವಯ್ಯ, ಲಕ್ಷ್ಮೀದೇವಿ ನೇತೃತ್ವದ ತಂಡವು ದಾಳಿ ನಡೆಸಿತು.