ಬೆಂಗಳೂರು
ಬಾರ್‍ನಲ್ಲಿ ಕಂಠಪೂರ್ತಿ ಕುಡಿದು, ಬಿಲ್ ನೀಡುವ ವಿಚಾರದಲ್ಲಿ ಜಗಳ ತೆಗೆದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾರಾಣಾಂತಿಕ ನಡೆಸಿದ್ದ ರೌಡಿ ಅಶೋಕ್‍ನನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಬಾರ್‍ಗಳ ಮೇಲೆ ದಾಳಿ ನಡೆಸಿ ರೌಡಿಗಳ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಸಿಸಿಬಿ ಪೊಲೀಸರು ನಿನ್ನೆ ರಾತ್ರಿ ಆರ್.ಎಂ.ಸಿ. ಯಾರ್ಡ್‍ನ ಲಕ್ಷ್ಮಿಶ್ರೀ ಬಾರ್ ಅಂಡ್ ರೆಸ್ಟೊರೆಂಟ್ ಮೇಲೆ ದಾಳಿ ನಡೆಸಿದ್ದರು.
ಬಾರ್‍ನಲ್ಲಿ ಕಂಠಪೂರ್ತಿ ಕುಡಿದಿದ್ದ ರೌಡಿ ಅಶೋಕ್ ಎಂಬಾತ ಮದ್ಯ ಖರೀದಿಸಿದ ಹಣವನ್ನು ಹತ್ತಿರದಲ್ಲಿ ಕುಳಿತಿದ್ದ ಆರ್.ಎಂ.ಸಿ. ಯಾರ್ಡ್‍ನ ಸುಧೀರ್‍ಗೆ ಕೂಡುವಂತೆ ಧಮಕಿಹಾಕಿದ್ದ. ಬಿಲ್ ಕೊಡಲು ಒಪ್ಪದ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.
ಹಲ್ಲೆಯಿಂದ ತಲೆ, ಇನ್ನಿತರ ಭಾಗಗಳಿಂದ ರಕ್ತ ಸೋರುತ್ತಿದ್ದ ಸುಧೀರ್‍ನನ್ನು ರಕ್ಷಿಸಿದ ಪೊಲೀಸರು, ರೌಡಿ ಅಶೋಕ್‍ನನ್ನು ಬಂಧಿಸಿದ್ದಾರೆ. ಗಾಯಗೊಂಡಿರುವ ಸುಧೀರ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಬಾರ್‍ನಲ್ಲಿ ಕುಡಿದಿದ್ದ ಅಶೋಕ್ ನನಗೆ ಬಿಲ್ ನೀಡುವಂತೆ ಕೇಳಿದ. ನಾನು ನಿರಾಕರಿಸಿದ್ದಕ್ಕಾಗಿ ಆತ ಹಲ್ಲೆ ನಡೆಸಿದ್ದಾನೆ ಎಂದು ಸುಧೀರ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಸಿಬಿಯ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ