ಕೂಡ್ಲಿಗಿ:
ಶಿವಪುರ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬುಧವಾರ ಬೆಳಗಿನ ಜಾವ ಕ್ರೂಸರ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ಮೂವರು ಮಹಿಳೆಯರ ಸಾವನ್ನಪ್ಪಿದ್ದಾರೆ.
ಕ್ರೂಸರ್ನಲ್ಲಿದ್ದ ಬೀಬನ್(39) ಮತ್ತು ರಬಿಯಾ(25) ಸ್ಥಳದಲ್ಲೇ ಮೃತರಾಗಿದ್ದು, ಶಬಾನಾ(20) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇವರೆಲ್ಲ ವಿಜಯಪುರ ಜಿಲ್ಲೆ ಬಸವನಬಾಗೆವಾಡಿ ತಾಲ್ಲೂಕಿನ ಚಿಕ್ಕಾಸಂಗಿ ಗ್ರಾಮದವರೆಂದು ಗುರುತಿಸಲಾಗಿದ್ದು, ಮೈಸೂರು ಸೇರಿದಂತೆ ಇತರೆ ಪ್ರವಾಸಿ ಸ್ಥಳಗಳನ್ನು ನೋಡಿಕೋಂಡು ತಮ್ಮ ಗ್ರಾಮದ ಕಡೆ ಹೊರಟಿದ್ದಾಗ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಶಿವಪುರ ಬಳಿ ಗಂಗಾವತಿಯಿಂದ ಚಿತ್ರದುರ್ಗಕ್ಕೆ ಹೊರಟಿದ್ದ ಕ್ಯಾಂಟರ್ ಲಾರಿ ಮತ್ತು ಕ್ರೂಸರ್ ಮಧ್ಯ ಡಿಕ್ಕಿಯಾಗಿದೆ.
ಇದರಿಂದ ಕ್ರೂಸರನಲ್ಲಿದ್ದ ಮೂವರು ಸಾವನ್ನಪ್ಪಿದ್ದು, ಕರಿಷ್ಮ, ಮುಸ್ಕಾನ್, ಮಹಮದ್ ನಂದ್ಯಾಲ್, ಗಫೋರ್ ನಂದ್ಯಾಲ್, ಅಫಾನ್ ನಂದ್ಯಾಲ್, ಮಸ್ತಾನ್ ಆದಿಮನಿ, ರಾಜು ಮಹಮದ್, ಸೀನಾರಬಿ, ನಾಸೀರ್ ನಂದ್ಯಾಲ್, ಬಷೀರ್ ಆಹಮದ್ ಹಾಗೂ ಕ್ಯಾಂಟರ್ ಚಾಲಕ ಗಾಯಗೊಂಡಿದ್ದಾರೆ. ಗಾಯಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕಳಿಸಲಾಗಿದೆ. ಗಾಯಳು ಬಷೀರ್ ಆಹಮದ್ ನೀಡಿದ ದೂರಿನಂತೆ ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಆರುಣ್ ರಂಗರಾಜನ್ ಎಎಸ್ಪಿ ಲಾವಣ್ಯ ಕೂಡ್ಲಿಗಿ ಡಿವೈಎಸ್ಪಿ ಬಸವೇಶ್ವರ ಹಾಗೂ ಸಿಪಿಐ ಟಿ.ಆರ್. ನಯೀಂ ಆಹಮದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ