ಕೇಬಲ್ ಆಪರೇಟರ್ ಗಳಿಗೆ ಎಡಿಸಿ ಕ್ಲಾಸ್

ಬಳ್ಳಾರಿ

    ಜಿಲ್ಲೆಯಾದ್ಯಂತ ಕೇಬಲ್ ಅಪರೇಟರ್‍ಗಳು ಅನಾವಶ್ಯಕವಾಗಿ ಹೆಚ್ಚುವರಿಯಾಗಿ ಹಣ ವಸೂಲಿ ಮಾಡುವ ಪ್ರಕರಣಗಳು ಕಂಡುಬಂದಲ್ಲಿ ಕೇಬಲ್ ಅಪರೇಟರ್‍ಗಳ ವಿರುದ್ಧ ಕಾನೂನುರೀತ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಎ.ಎಸ್.ಮಂಜುನಾಥ್ ಅವರು ಎಚ್ಚರಿಕೆ ನೀಡಿದ್ದಾರೆ.

    ನಗರದ ಅಪರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಚಾನಲ್‍ಗಳು ನಿಗದಿಪಡಿಸಿದ ಹಣವನ್ನಷ್ಟೇ ಕೇಬಲ್ ಅಪರೇಟರ್‍ಗಳು ಗ್ರಾಹಕರಿಂದ ಪಡೆದುಕೊಳ್ಳಬೇಕು ಮತ್ತು ಅದಕ್ಕೆ ಸರಿಯಾದ ರಶೀದಿ ನೀಡಬೇಕು. ಒಂದು ವೇಳೆ ಹೆಚ್ಚುವರಿ ಹಣ ವಸೂಲಿ ಮಾಡಿರುವುದು ಕಂಡುಬಂದಲ್ಲಿ ಅಂತ ಕೇಬಲ್ ಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

    ಜಿಲ್ಲೆಯಲ್ಲಿ ಕೇಬಲ್ ಸೌಲಭ್ಯ ಪಡೆದುಕೊಂಡಾಗ ಪಾವತಿಸಬೇಕಾದ ಕನಿಷ್ಠ ಹಣ,ಇಷ್ಟದ ಚಾನಲ್ ಗಳು ಆಯ್ಕೆ ಮಾಡಿಕೊಂಡಾಗ ಪಾವತಿಸಬೇಕಾದ ಹಣವನ್ನಷ್ಟೇ ಗ್ರಾಹಕರಿಂದ ಪಾವತಿ ಮಾಡಿಕೊಳ್ಳಬೇಕು ಮತ್ತು ಅದನ್ನು ಪಾವತಿ ಮಾಡಿಕೊಂಡಿರುವುದಕ್ಕೆ ರಶೀದಿ ನೀಡಬೇಕು; ರಶೀದಿ ನೀಡುವುದನ್ನು ಬಿಟ್ಟು ಕೇಬಲ್ ದಾರರು ತಮ್ಮ ನೋಟ್ ಬುಕ್ನಲ್ಲಿ ಬರೆದುಕೊಳ್ಳುವುದು ಕಂಡುಬರುತ್ತಿದೆ; ಇದು ಸರಿಯಲ್ಲ.

      ಇನ್ಮುಂದೆ ಈ ರೀತಿ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದ ಎಡಿಸಿ ಮಂಜುನಾಥ ಅವರು ಈ ಕುರಿತು ದೂರುಗಳೇನಾದರೂ ಇದ್ದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಲಾಗಿರುವ ದೂರುಕೋಶ(08392-275198)ಕ್ಕೆ ಹಾಗೂ ಜನಸ್ಪಂದನ ದೂರುಕೋಶಕ್ಕೂ( ದೂ:08392-277100 ಹಾಗೂ ಮೊ:8277888866 ) ದೂರು ಸಲ್ಲಿಸಬಹುದಾಗಿದೆ.ಇಲ್ಲಿನ ದೂರುಗಳನ್ನು ಕ್ರೋಢೀಕರಿಸಿ ಸಭೆಯಲ್ಲಿ ಮಂಡಿಸಿ ತೀರ್ಮಾನಿಸಲಾಗುವುದು ಎಂದು ಅವರು ಹೇಳಿದರು.

     ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಇದುವರೆಗೆ ಯಾವುದೇ ರೀತಿಯ ದೂರುಗಳು ಸಲ್ಲಿಕೆಯಾಗಿರವುದಿಲ್ಲ ಎಂದು ಹೇಳಿದ ಅವರು ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿ ದೂರುಕೋಶಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಚಾರ ನೀಡುವಂತೆ ಜಿಲ್ಲಾ ವಾರ್ತಾಧಿಕಾರಿಗಳಿಗೆ ಎಡಿಸಿ ಮಂಜುನಾಥ ಸೂಚಿಸದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link