ದಾವಣಗೆರೆ:
ಶ್ರೀಸ್ವಾಮಿ ಅಯ್ಯಪ್ಪ ಶಬರಿಮಲೈ ಸೇವಾ ಸಮಿತಿಯ ಆಶ್ರಯದಲ್ಲಿ ಇಲ್ಲಿನ ನಿಟುವಳ್ಳಿ ರಸ್ತೆಯ ಕೆ.ಬಿ. ಬಡಾವಣೆಯ ಲೇಬರ್ ಕಾಲೋನಿಯಲ್ಲಿ ಶ್ರೀಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ದೀಪೋತ್ಸವ, ಮೆರವಣಿಗೆ ಭಾನುವಾರ ಅದ್ದೂರಿಯಾಗಿ ನಡೆಯಿತು.
ಲೇಬರ್ ಕಾಲೋನಿಯ ಸ್ವಾಮಿಯ ದೇವಸ್ಥಾನದಿಂದ ಭಾನುವಾರ ಮಧ್ಯಾಹ್ನ ಆರಂಭವಾಗುವ ಕೆಟಿಜೆ ನಗರ, ವಿದ್ಯಾರ್ಥಿ ಭವನ, ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ಅರುಣ ಟಾಕೀಸ್, ವಸಂತ ಟಾಕೀಸ್, ಗಾಂಧಿ ವೃತ್ತ, ಕಿರುವಾಡಿ ವೃತ್ತ, ಶಿವಪ್ಪ ವೃತ್ತ ಮತ್ತಿತರೆಡೆ ಸಂಚರಿಸಿ, ಪುನಃ ಸ್ವಾಮಿ ಮಂಟಪಕ್ಕೆ ತಲುಪಿ ಮುಕ್ತಾಯವಾಯಿತು. ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದ್ದವು.
ಸ್ವಾಮಿಯ ದಿಪೋತ್ಸವ ಸಹ ನೆರವೇರಿತು.
ಮೆರವಣಿಗೆಯಲ್ಲಿ ಸಮಿತಿಯ ಟಿ. ರವಿಕುಮಾರ್ ನಿಬ್ಗೂರ್, ಲೋಕಪ್ಪ, ಗಂಗಾಧರ, ರಘು, ಪ್ರಸನ್ನ, ಅಣ್ಣಪ್ಪ, ಪುರುಷೋತ್ತಮ, ರವಿಕುಮಾರ, ಮಲ್ಲಿಕಾರ್ಜುನ, ಸುಬ್ಬರಾವ್, ಮಹೇಶ್, ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
