ಚಿತ್ರದುರ್ಗ
ಸಾಧಕರು, ಮಹಾನ್ ನಾಯಕರ ಜಯಂತಿಗಳ ಆಚರಣೆ ಮಾಡುವುದರಿಂದ ಸಮಾಜಕ್ಕೆಉತ್ತಮ ಮಾರ್ಗದರ್ಶನ ಮತ್ತು ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವಂತ ಕಾರ್ಯವನ್ನು ಸರ್ಕಾರ ಮಾಡಿದಂತಾಗುತ್ತದೆ ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಹೇಳಿದರು.
ನಗರದ ತ.ರಾ.ಸು ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ನಗರಸಭೆಇವರ ಸಹಯೋಗದಲ್ಲಿಶುಕ್ರವಾರಆಯೋಜಿಸಿದ್ದ ಮಡಿವಾಳ ಮಾಚಿದೇವರಜಯಂತಿಕಾರ್ಯಕ್ರಮಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ಮಹನೀಯರ ಜಯಂತಿಗಳನ್ನು ಆಚರಿಸುವುದರಿಂದ ಸಮಾಜಕ್ಕೆ ಒಳಿತಾಗುವ ಕೆಲಸವಾಗುತ್ತಿದೆ.ಮಹಾ ಶರಣರ ವಚನಗಳು, ಸಾಧನೆಗಳು ಹಾಗೂ ಅವರಜೀವನದ ಸಂದೇಶಗಳನ್ನು ಯುವ ಪೀಳಿಗೆಗೆ ತಿಳಿಸುವ ದೃಷ್ಟಿಯಿಂದ ಸರ್ಕಾರ ಮಹತ್ವದ ಕಾರ್ಯ ಮಾಡುತ್ತಿದೆ.12ನೇ ಶತಮಾನದ ಬಸವಣ್ಣನವರ ಸಮಕಾಲಿನದಲ್ಲಿ ಬರುವ ಮಡಿವಾಳ ಮಾಚಿದೇವರ ಸಂದೇಶಗಳು, ಸಮಾಜದ ಸುಧಾರಣೆಯಲ್ಲಿ ಮುಖ್ಯ ಪಾತ್ರವಹಿಸಿವೆ ಎಂದರು.
ಮಡಿವಾಳ ಮಾಚಿದೇವರು ಬಸವಣ್ಣನವರ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಅನುಭವ ಮಂಟಪದಲ್ಲಿ ಇದ್ದು, ಸಮಾಜದಲ್ಲಿದ್ದ ಜಾತಿ ವ್ಯವಸ್ಥೆ, ಮೂಢ ನಂಬಿಕೆ, ಲಿಂಗತಾರತಮ್ಯಗಳ ಹೋಗಲಾಡಿಸಲು 12ನೇ ಶತಮಾನದಲ್ಲಿಯೇ ಪಣತೊಟ್ಟರು. ಅದರೆ ಪ್ರಸ್ತುತ ಸಮಾಜದಲ್ಲಿ ಮೇಲು ಕೀಳೆಂಬ ಭಾವನೆಗಳು ಜೀವಂತವಾಗಿರುವುದು ತುಂಬ ವಿಷಾದನೀಯವಾಗಿದೆ. ಮಡಿವಾಳ ಸಮಾಜ ಬೆಳೆಯಬೇಕೆಂದರೆ ಆಧುನೀಕರಣದ ಜಗತ್ತಿಗೆತಕ್ಕಂತೆ ಬೇರೆ ಬೇರೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿ.ಹೆಚ್. ತಿಪ್ಪಾರೆಡ್ಡಿ ಅವರು ಹೇಳಿದರು.
ಮಹಾರಾಜ ಮದಕರಿ ನಾಯಕ ಪ್ರಥಮದರ್ಜೆಕಾಲೇಜಿನ ಪ್ರಾಧ್ಯಾಪಕಡಾ. ವಿ. ಬಸವರಾಜ್ ಮಾತನಾಡಿ,ಕನ್ನಡ ಸಾಹಿತ್ಯಕ್ಕೆ ಮಡಿವಾಳ ಮಾಚಿದೇವರಕೊಡುಗೆಅಪಾರವಾದದ್ದು.ವಚನ ಚಳುವಳಿಯಲ್ಲಿ ಇವರ ಪಾತ್ರ ಬಹುಮುಖ್ಯವಾಗಿದ್ದು, ಶಾಸ್ತ್ರ ವಿದ್ಯೆ ಮತ್ತು ಶಸ್ತ್ರ ವಿದ್ಯೆಎರಡರಲ್ಲೂ ಪಾಂಡಿತ್ಯವನ್ನು ಪಡೆದಿದ್ದಇವರು, ಸಮಾಜದಲ್ಲಿನ ಅಂಕು ಡೊಂಕುಗಳನ್ನು ಹೋಗಲಾಡಿಸಲು ಪ್ರಮುಖ ಪಾತ್ರವಹಿಸಿದ್ದಾರೆ.ಕರ್ನಾಟಕದಲ್ಲಿ 18 ಲಕ್ಷ ಮಡಿವಾಳ ಜಾತಿ ಸಮುದಾಯವಿದ್ದು ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದ್ದಾರೆ ಹೀಗಾಗಿ ಪರಿಶಿಷ್ಟ ಜಾತಿ ಪಟ್ಟಿಗೆ ಸರ್ಕಾರ ಸೇರಿಸಿ ಸೌಲಭ್ಯಗಳು ಪಡೆಯುವಂತೆ ಮಾಡಬೇಕು. ಮಡಿವಾಳರನ್ನು ಈಗಲು ಸಹ ಉಳ್ಳವರು ತಾರತಮ್ಯ ಮಾಡುತ್ತಿದ್ದಾರೆಎಂದುಅಭಿಪ್ರಾಯಪಟ್ಟರು.
ಅಪರಜಿಲ್ಲಾಧಿಕಾರಿ ಸಿ.ಸಂಗಪ್ಪ ಮಾತನಾಡಿಕರ್ನಾಟಕದಲ್ಲಿ 12ನೇ ಶತಮಾನಎನ್ನುವುದು ಮಹತ್ವವಾದಘಟ್ಟವಿದ್ದಂತೆ.ಆ ಕಾಲದಲ್ಲಿಯೆ ಮಡಿವಾಳ ಮಾಚಿದೇವರು ಸಮಾಜದಕೆಟ್ಟ ಧೋರಣೆಗಳನ್ನು ಹೋಗಲಾಡಿಸಲು ಶ್ರಮವಹಿಸಿದವರು, ಆದ್ದರಿಂದ ಮಡಿವಾಳ ಸಮುದಾಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿಒಗ್ಗಟ್ಟಿನಿಂದಕೂಡಿ ಸಮಾಜದಲ್ಲಿಉನ್ನತವಾದ ಸ್ಥಾನಕ್ಕೆ ಬೆಳೆಯಲಿ ಎಂದು ಹಾರೈಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ತಹಸಿಲ್ದಾರ್‍ಕಾಂತರಾಜ್, ನಗರಸಭೆ ಪೌರಾಯುಕ್ತ ಸಿ. ಚಂದ್ರಪ್ಪ, ತಾಲ್ಲೂಕು ಪಂಚಾಯತ್‍ಅಧ್ಯಕ್ಷ ಲಿಂಗರಾಜು,ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಜಿಲ್ಲಾ ಮಡಿವಾಳರ ಸಂಘದಅಧ್ಯಕ್ಷ ಟಿ. ರಮೇಶ್, ಚಿದಾನಂದಪ್ಪ, ಅನಿತಾರಮೇಶ್, ಪ್ರಶಾಂತ್, ಜಿ.ಕೆ ದಿನೇಶ್, ಸಂಪಿಗೆ ಸಿದ್ದೇಶ್ ಉಪಸ್ಥಿತರಿದ್ದರು. ಗೀತಗಾಯನವನ್ನು ಲೋಕೇಶ್ ಪಲ್ಲವಿ ಮತ್ತು ಸಂಗಡಿಗರು ನಡೆಸಿಕೊಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
