ಆಧಿ ಜಾಂಬವ ಅಭಿವೃದ್ಧಿ ನಿಗಮ ಜನೇವರಿ 17 ರಂದು ಲೋಕಾರ್ಪಣೆ

ಹಾವೇರಿ

        ಕರ್ನಾಟಕ ಆಧಿ ಜಾಂಬವ ಅಭಿವೃದ್ಧಿ ನಿಗಮವನ್ನು ಜನೇವರಿ 17 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ತಿಳಿಸಿದರು. ಹಾವೇರಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸಮಾಜದ ಮುಖಂಡರೊಂದಿಗೆ ಮಾತನಾಡಿದ ಅವರು, ಎಡಗೈ ಉಪಪಂಡಗಳಾದ ಮಾದಿಗ, ಡೋಹರ, ಚಮಗಾರ, ಮಚಗಾರ, ಡಕ್ಕಲಿಗ ಅಭಿವೃದ್ಧಿಗಾಗಿ ಪ್ರತೇಕ ನಿಗಮ ಸ್ಥಾಪಿಸಲಾಗಿದೆ.

       ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಎಡಗೈ ಸಮುದಾಯ ಬಾಂಧವರು ಭಾಗವಹಿಸಬೇಕು. ಜೊತೆಗೆ ಪ್ರಸ್ತುತ ಸರಕಾರದಲ್ಲಿ ಸಮಾಜದ ಅಭಿವೃದ್ಧಿಗೆ ಸಾಕಷ್ಟು ಕಲ್ಯಾಣ ಕಾರ್ಯಗಳು ಜಾರಿಗೆ ಬರುತ್ತಿದ್ದು, ಇದರ ಸದುಪಯೋಗವನ್ನು ಸಮಾಜದ ಜನರು ಪಡೆದುಕೊಳ್ಳಬೇಕು ಎಂದರು.

        ಬಳಿಕ ಸಮಾಜದ ಮುಖಂಡರೊಂದಿಗೆ ಚರ್ಚಿಸಿದ ಆಂಜನೇಯ ಅವರು, ಸಮಾಜದ ಅಭಿವೃದ್ಧಿಗೆ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು.ಈ ಸಂದರ್ಭದಲ್ಲಿ ನಾಗರಾಜ ಮಾಳಗಿ, ಡಿ.ಎಸ್.ಮಾಳಗಿ, ಪರಮೇಶಪ್ಪ ಮೇಗಳಮನಿ, ಜಗದೀಶ ಬೇಟಗೇರಿ,ಉಡಚಪ್ಪ ಮಾಳಗಿ,ಬಸವರಾಜ ಹೆಡಿಗೊಂಡ,ಸಂಜಯಗಾಂಧಿ, ಹೊನ್ನಪ್ಪ ತಗಡಿನಮನಿ, ಮಾಲತೇಶ ಅಲ್ಲಾಪುರ, ಬಿ.ಜಿ.ದೇವರಮನೆ, ಮಹೇಶ ಹರಿಜನ,ರಾಜು ಹರಿಜನ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link