ದಾವಣಗೆರೆ:
ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಇತ್ತೀಚೆಗೆ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಆಯೋಜಿಸಿದ್ದ “ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ನಗರದ ಪಿ.ಜೆ. ಬಡಾವಣೆಯ ಆದಮ್ಯ ಕಲಾ ಸಂಸ್ಥೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಮತದಾನದ ಜಾಗೃತಿ ಗೀತೆಗಳು ಜನರನ್ನು ವಿಶೇಷವಾಗಿ ರಂಜಿಸಿದವು.
ಜಾನಪದ ಶೈಲಿಯಲ್ಲಿದ್ದ ಗೀತೆಗಳು ಜನರ ಮನಸ್ಸನ್ನು ಮುಟ್ಟುವಂತಿತ್ತು. ಸಂಸ್ಥೆಯ ಪ್ರಾಚಾರ್ಯರು ಹಾಗೂ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಗೀತಾ ಬಿ. ಮಾಲತೇಶ್‍ರವರು ಈ ಕಾರ್ಯಕ್ರಮವನ್ನು ನಡೆಸುತ್ತಿರುವುದು ತಮ್ಮ ಸಂಸ್ಥೆಯ ಹೆಮ್ಮೆ ಎಂದ ಅವರು. ಮುಂದೆಯೂ ಕೂಡಾ ನಮ್ಮ ಸಂಸ್ಥೆಯು ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕುಮಾರಿಯರಾದ ಪೃಥ್ವಿ ಬಿ.ಎಂ.. ಲಕ್ಷ್ಮೀ, ಕೋಮಲಾ, ಗುಣಶ್ರೀ, ಶುಭಶ್ರೀ ಎಸ್., ಮಂಜುನಾಥ್ ಮುಧೋಳ್, ಪ್ರಜ್ವಲ್ ಹಾಡಿದರೆ, ಕು|| ವಿಜಯ್ ಹಾರ್ಮೋನಿಯಂ ಸಾತ್ ನೀಡಿದರು.
ಕಾರ್ಯಕ್ರಮದಲ್ಲಿ ಲೋಕಸಭಾ ಚುನಾವಣೆಯ ಸಾಮಾನ್ಯ ವೀಕ್ಷಕರಾದ ಆನಂದ ಶರ್ಮಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮಾನಾಯ್ಕ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಆಂಜನೇಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ. ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಸಿ.ಡಿ.ಪಿ.ಓ. ಎಂ. ವೀಣಾ ಸೇರಿದಂತೆ ಜೆ.ಹೆಚ್. ಪಟೇಲ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರತಿಭಾ ಪುಟ್ಟರಾಜು ಹಾಗೂ ಆದಮ್ಯ ಕಲಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ದ್ವಾರಕೀಶ್ ಎಂ.ರವರು ಉಪಸ್ಥಿತರಿದ್ದರು.