ಕ್ಷಿಪ್ರ ನ್ಯಾಯದಾನಕ್ಕೆ ವಕೀಲರ ಸಹಕಾರ ಅತಿಮುಖ್ಯ

ತುಮಕೂರು
   ನ್ಯಾಯಾಲಯದಲ್ಲಿ ಕಕ್ಷಿದಾರರಿಗೆ ಕ್ಷಿಪ್ರವಾಗಿ ನ್ಯಾಯ ದೊರೆಯಬೇಕಾದರೆ ವಕೀಲ ವೃಂದದ ಸಹಕಾರ ಇರಬೇಕು. ಅಂದರೆ ವಕೀಲರು, ಅದರಲ್ಲೂ ಯುವವಕೀಲರು ತಾವು ವಾದಿಸುವ ಪ್ರಕರಣಗಳ ಬಗ್ಗೆ ಸಮಗ್ರ ಮಾಹಿತಿಯೊಂದಿಗೆ ಅಧ್ಯಯನಶೀಲರಾಗಿ ಹಾಗೂ ಸಂಪೂರ್ಣ ಸಜ್ಜಾಗಿ ಹಾಜರಾಗಬೇಕು. ಆಗ ನ್ಯಾಯಾಧೀಶರು ತ್ವರಿತವಾಗಿ ಪ್ರಕರಣವನ್ನು ಇತ್ಯರ್ಥಪಡಿಸಲು ಅನುಕೂಲವಾಗುತ್ತದೆ ಎಂದು  ರಾಜ್ಯ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ.ಎನ್.Àಣೀಂದ್ರ ಅವರು ಅಭಿಪ್ರಾಯಪಟ್ಟರು.
    ಅವರು ಶನಿವಾರ ಬೆಳಗ್ಗೆ ತುಮಕೂರು ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಕಟ್ಟಡದ ಎರಡನೇ ಅಂತಸ್ತಿನ ಉದ್ಘಾಟನಾ ಸಮಾರಂ`Àದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. “ನಿಮ್ಮನ್ನು ನೀವು ಸಜ್ಜುಗೊಳಿಸಿಕೊಳ್ಳಿ” ಎಂದು ವಕೀಲವೃಂದಕ್ಕೆ ಪದೇ ಪದೇ ಒತ್ತಿ ಹೇಳಿದ ಅವರು, ತಮಗೆ ಬೇಗ ನ್ಯಾಯ ಸಿಗಬೇಕೆಂಬ ಅಪೇಕ್ಷೆಯಿಂದ ಜನರು ನ್ಯಾಯಾಲಯದ ಮೊರೆ ಹೋಗುತ್ತಾರೆ. ಜನರ ಆ ಕಾತರತೆಯನ್ನು ವಕೀಲವೃಂದ ಅರ್ಥಮಾಡಿಕೊಳ್ಳಬೇಕು.
     ನ್ಯಾಯಾಲಯಕ್ಕೆ ಬರುವಾಗ ಸಂಬಂಧಿತ ಪ್ರಕರಣಗಳ ಬಗ್ಗೆ ಆಮೂಲಾಗ್ರವಾಗಿ ಅಧ್ಯಯನ ಮಾಡಿರಬೇಕು. ಎಲ್ಲ ವಿಷಯಗಳ ಬಗ್ಗೆ ಸಮಗ್ರವಾಗಿ ಸಜ್ಜಾಗಿರಬೇಕು. ಆಗ ಕಲಾಪ ಕ್ಷಿಪ್ರವಾಗಿ ನಡೆಯುತ್ತದೆ. ನ್ಯಾಯದಾನ ಶೀಘ್ರವಾಗಲು ಅನುಕೂಲವಾಗುತ್ತದೆ ಎಂದು ಹೇಳಿದರು.  ಈ ವಿಷಯಕ್ಕೆ ಪೂರಕವಾಗಿ ಅವರು ತಮ್ಮ ಸ್ವಾನುಭವವನ್ನೇ ಉಲ್ಲೇಖಿಸಿದರು. ತಾವು ಇದೇ ತುಮಕೂರಿನ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಆರಂಭಿಸಿದ ಮೊದಲ ದಿನಗಳಲ್ಲಿ ಆದ ಅನುಭವ ಹಾಗೂ ಪ್ರಸ್ತುತ ಹೈಕೋರ್ಟ್‍ನಲ್ಲಿ ಸಜ್ಜಾಗದೆ ಬರುವ ಯುವ ವಕೀಲರಿಂದ ತಮ್ಮ ತಾಳ್ಮೆಯ ಪರೀಕ್ಷೆ ಆಗುವಂತಾಗುತ್ತಿರುವುದನ್ನು ಸಾಂದರ್ಭಿಕವಾಗಿ ಪ್ರಸ್ತಾಪಿಸಿದರು.
ಅಧ್ಯಯನ ಫೋರಂ ಮಾಡಿ
       “ವಿಶೇಷವಾಗಿ ಯುವ ವಕೀಲರು ಸಜ್ಜುಗೊಳ್ಳಬೇಕಾದರೆ ಅಧ್ಯಯಯನಾಕಾಂಕ್ಷೆಯಿಂದ ಒಂದು ಫೋರಂ ಮಾಡಿಕೊಳ್ಳಿ. ಕನಿಷ್ಟ 10 ಜನರಾದರೂ ಒಂದೆಡೆ ಸೇರಿ. ಪ್ರತಿ ತಿಂಗಳ ಎರಡನೇ ಶುಕ್ರವಾರ ಒಂದೊಂದು ಹೊಸ ವಿಷಯವನ್ನು ಆಯ್ಕೆ ಮಾಡಿಕೊಂಡು, ಸಂಪನ್ಮೂಲ ವ್ಯಕ್ತಿಗಳಿಂದ ಆ ಬಗ್ಗೆ ಮಾತನಾಡಿಸಿ ಹಾಗೂ ಆ ವಿಷಯವಾಗಿ ಚರ್ಚೆ ನಡೆಸಿ. ಇದರಿಂದ ನಿಮ್ಮ ಜ್ಞಾನಾರ್ಜನೆಗೆ ಅನುಕೂಲವಾಗುವುದು” ಎಂದು ಅವರು ಸಲಹೆಯಿತ್ತರು.
ಡಿಜಿಟಲೀಕರಣ
   “ಎಲ್ಲ ಕ್ಷೇತ್ರಗಳಂತೆ ನ್ಯಾಯಾಂಗವೂ ಡಿಜಿಟಲೀಕರಣಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ನ್ಯಾಯಾಂಗದಲ್ಲಿ ಡಿಜಿಟಲೀಕರಣ ವ್ಯಾಪಕವಾಗುತ್ತದೆ. ಆದ್ದರಿಂದ ಆ ಬಗ್ಗೆ ಈಗಿನಿಂದಲೇ ಸೂಕ್ತ ತಯಾರಿ ಮಾಡಿಕೊಳ್ಳಬೇಕು. ವಕೀಲರು ಸಜ್ಜಾಗಬೇಕು. ಈ ರೀತಿ ಸಜ್ಜಾದರೆ ನ್ಯಾಯದಾನ ಕ್ಷಿಪ್ರವಾಗಲು ಸಹಕಾರಿಯಾಗುವುದು” ಎಂದು ಹೇಳಿದರು.
     `ನ್ಯಾಯಾಲಯಗಳಲ್ಲಿ ವಕೀಲರು ತಮ್ಮ ಎದುರು ಪಕ್ಷದ ವಕೀಲರ ವಾದವನ್ನೂ ತಾಳ್ಮೆಯಿಂದ ಆಲಿಸಬೇಕು. ಬಳಿಕ ತಮ್ಮ ವಾದವನ್ನು ಮಂಡಿಸಬೇಕು. ಆದರೆ ನ್ಯಾಯಾಧೀಶರ ಸಮ್ಮುಖ ವಕೀಲರೇ ಪರಸ್ಪರ ವಾಗ್ವಾದಕ್ಕಿಳಿದರೆ ಇದರಿಂದ ನ್ಯಾಯಾಧೀಶರಿಗೆ ಕಿರಿಕಿರಿ ಆಗುತ್ತದೆ. ಇಂತಹ ಸನ್ನಿವೇಶ ಉದ್ಭವಿಸದಂತೆ ನೋಡಿಕೊಳ್ಳಬೇಕು” ಎಂದು ವಕೀಲವೃಂದವನ್ನು ಕೋರಿದರು.
    “ವಕೀಲರು ನ್ಯಾಯಾಂಗ ಮತ್ತು ಸಾರ್ವಜನಿಕರ ನಡುವಿನ ಸೇತುವೆಯಿದ್ದಂತೆ. ಹೀಗಾಗಿ ನ್ಯಾಯ ಪಡೆಯಲು ಜನರು ವಕೀಲರನ್ನು ಅವಲಂಬಿಸಿದಂತೆ, ನ್ಯಾಯಾಂಗವೂ ವಕೀಲರಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತದೆ. ಹೀಗಾಗಿ ವಕೀಲರ ಜವಾಬ್ದಾರಿ ಅಧಿಕವಾದುದಾಗಿದೆ” ಎಂದರು.
ಶೇ.20 ರಷ್ಟು ಮಾತ್ರ ಕೋರ್ಟ್‍ಗೆ
    “ನಮ್ಮ ಸಮಾಜದಲ್ಲಿ ಈಗಲೂ ಶೇ. 20 ರಷ್ಟು ವ್ಯಾಜ್ಯಗಳು ಮಾತ್ರ ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಿವೆ. ಮಿಕ್ಕ ಶೇ.80 ರಷ್ಟು ಪ್ರಕರಣಗಳು ನಾನಾ ಕಾರಣಗಳಿಂದ ನ್ಯಾಯಾಂಗೇತರ ವಿಧಾನಗಳಲ್ಲಿ ಸಿಲುಕಿಕೊಳ್ಳುತ್ತಿವೆ. ಈ ಸ್ಥಿತಿ ತಪ್ಪಬೇಕಾದರೆ ನ್ಯಾಯಾಲಯದಲ್ಲಿ ಕ್ಷಿಪ್ರವಾಗಿ ನ್ಯಾಯ ದೊರೆಯುತ್ತದೆಂಬ ಭಾವನೆ ಸಾರ್ವಜನಿಕರಲ್ಲಿ ಬಲವಾಗಬೇಕು. ಆಗ ಈ ಶೇ. 80 ರಷ್ಟು ವ್ಯಾಜ್ಯಗಳೂ ನ್ಯಾಯಾಲಯಕ್ಕೇ ಬರುತ್ತವೆ. ಇದರ ಲಾಭ ಅಂತಿಮವಾಗಿ ವಕೀಲರಿಗೆ ಸಹ ಲಭಿಸಲಿದೆ” ಎಂದು ನ್ಯಾಯಮೂರ್ತಿ Àಣೀಂದ್ರ ಹೇಳಿದರು.
      ತುಮಕೂರು ವಕೀಲರ ಸಂಘ ಮೊದಲಿನಿಂದಲೂ ನೇರವಂತಿಕೆ ಮತ್ತು ದಿಟ್ಟತನಕ್ಕೆ  ಹೆಸರುವಾಸಿಯಾಗಿದೆ. ಇದೇ ಕಾರಣದಿಂದ ಹಿಂದೆ ನ್ಯಾಯಾಂಗದ ಅಧಿಕಾರಿಗಳು ತುಮಕೂರಿಗೆ ವರ್ಗಾವಣೆಯಾಗಿ ಬರಲು ಸ್ವಲ್ಪ ಹಿಂಜರಿಯುತ್ತಿದ್ದರು. ತುಮಕೂರಿನಲ್ಲಿ ನ್ಯಾಯಾಂಗದ ಅಧಿಕಾರಿಗಳು ನಾಲ್ಕೆ`ದು ವರ್ಷಗಳ ಕಾಲ ಸೇವೆ ಸಲ್ಲಿಸಿದರೆಂದರೆ, ಅವರು ನ್ಯಾಯಾಂಗ ವಲಯದಲ್ಲಿ ಬಹಳ ಹೆಸರು ಗಳಿಸುತ್ತಿದ್ದರು ಎಂದು ಹೇಳಿದ ನ್ಯಾಯಮೂರ್ತಿ ಫಣೀಂದ್ರ ಅವರು, ತುಮಕೂರು ವಕೀಲರ ಸಂಘ ಈಗಲೂ ಸಹ ಅದೇ ಹೆಸರನ್ನು ಉಳಿಸಿಕೊಂಡಿದೆ ಎಂದು ಬಣ್ಣಿಸಿದರು. ಇಲ್ಲಿನ ಎಲ್ಲ ನ್ಯಾಯೋಚಿತ ಬೇಡಿಕೆಗಳಿಗೂ ಹೈಕೋರ್ಟ್ ಸ್ಪಂದಿಸುವುದೆಂದು ಭರವಸೆ ನೀಡಿದರು.
ಸದುಪಯೋಗವಾಗಲಿ
     ಇದಕ್ಕೂ ಮೊದಲು ಹೈಕೋರ್ಟ್ ನ್ಯಾಯಾಧೀಶರೂ, ತುಮಕೂರು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರೂ ಆದ ನ್ಯಾಯಮೂರ್ತಿ ಅಲೋಕ್ ಅರಾಧ್ಯ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತ, ಪ್ರಸ್ತುತ ವಕೀಲರ ಸಂಘಕ್ಕೆ ಮತ್ತೊಂದು ಮಹಡಿ ಸೇರ್ಪಡೆಗೊಂಡಿದೆ. ಇದರಿಂದ ಇಲ್ಲಿಗೆ ಬರುವ ಕಕ್ಷಿದಾರರಿಗೆ ಅನುಕೂಲವಾಗಬೇಕು. ಆ ರೀತಿ ವಕೀಲರು ತಮ್ಮ ಕರ್ತವ್ಯ ನಿರ್ವಹಣೆಗೆ ಇದನ್ನು ಸದುಪಯೋಗಿಸಿಕೊಳ್ಳಬೇಕು ಎಂದು ಹೇಳಿದರು. 
       ನ್ಯಾಯವನ್ನು ಅರಸಿ ಬರುವ ಜನರಿಗೆ ಕ್ಷಿಪ್ರವಾಗಿ ನ್ಯಾಯ ದೊರಕುವಂತೆ ಮಾಡಲು ನಾವೆಲ್ಲರೂ ಏಕ ಮನಸ್ಸಿನಿಂದ ಕಾರ್ಯಪ್ರವೃತ್ತ ರಾಗಬೇಕು. ಅದಕ್ಕಾಗಿ ಇಂತಹ ಮೂಲಸೌಕರ್ಯಗಳು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರಾಜೇಂದ್ರ ಬಾದಾಮಿಕರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮೂಲ ಸೌಕರ್ಯ ಹೆಚ್ಚಾಗಿರುವುದರಿಂದ ವಕೀಲರ ಜವಾಬ್ದಾರಿಯೂ ಅಧಿಕಗೊಂಡಂತಾಗಿದೆ. ಕ್ಷಿಪ್ರ ನ್ಯಾಯದಾನಕ್ಕೆ ಎಲ್ಲರೂ ಶ್ರಮಿಸಬೇಕಿದೆ ಎಂದು ಹೇಳಿದರು.
      ಜಿಲ್ಲಾ ವಕೀಲರ ಸಂಘದ ಅಧ್ಯಯಕ್ಷ ಜೆ.ಕೆ. ಅನಿಲ್ ವೇದಿಕೆಯಲ್ಲಿದ್ದರು. ನಿವೇದಿತಾ ಪ್ರಾರ್ಥಿಸಿದರು. ವಕೀಲರ ಸಂಘದ ಖಜಾಂಚಿ ಆರ್.ಪಾತಣ್ಣ ಸ್ವಾಗತಿಸಿದರು. ವಕೀಲ ಜಗದೀಶ್ ವಂದಿಸಿದರು. ಅನೇಕ ಹಿರಿಯ ಮತ್ತು ಕಿರಿಯ ವಕೀಲರುಗಳು ಉಪಸ್ಥಿತರಿದ್ದರು. ಹೈಕೋರ್ಟ್ ನ್ಯಾಯಮೂರ್ತಿಗಳ ಆಗಮನದ ಹಿನ್ನೆಲೆಯಲ್ಲಿ ಅಡಿಷನಲ್ ಎಸ್ಪಿ ಡಾ. ಶೋಭರಾಣಿ, ನಗರ ಡಿವೈಎಸ್ಪಿ ತಿಪ್ಪೇಸ್ವಾಮಿ, ನಗರ ಸರ್ಕಲ್ ಇನ್ಸ್‍ಪೆಕ್ಟರ್ ಚಂದ್ರಶೇಖರ್, ನಗರ ಠಾಣೆ ಸಬ್‍ಇನ್ಸ್‍ಪೆಕ್ಟರ್‍ವಿಜಯಲಕ್ಷ್ಮೀ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. 
ತನಿಖೆಗೆ ಭರವಸೆ
      ಈ ಸಮಾರಂಭಕ್ಕೂ ಮೊದಲು ನ್ಯಾಯಮೂರ್ತಿಗಳು ವಕೀಲರ ಸಂಘದ ಬಳಿಗೆ ಆಗಮಿಸುತ್ತಿದ್ದಂತೆ ವಕೀಲರ ತಂಡವೊಂದು ಮನವಿ ಪತ್ರವನ್ನು ಸಲ್ಲಿಸುತ್ತ ಈ ಕಟ್ಟಡದ ದಕ್ಷಿಣ ಭಾಗದಲ್ಲಿ ನೋಟರಿಗಳಿಗೆ ಮಾಡಿರುವ ಸ್ಥಳಾವಕಾಶದಲ್ಲಿ ರೂï ಶೀಟ್‍ಗಳು ಕಳ್ಳತನ ಆಗಿದೆಯೆಂದು ದೂರಿತು. ಸ್ಥಳಕ್ಕೆ ತೆರಳಿ ವಕೀಲರ ಅಹವಾಲನ್ನು ತಾಳ್ಮೆಯಿಂದ ಆಲಿಸಿದ ನ್ಯಾಯಮೂರ್ತಿ ಅಲೋಕ್ ಅರಾಧ್ಯ ಅವರು ಈ ಬಗ್ಗೆ ತನಿಖೆ ನಡೆಸುವ ಹಾಗೂ ಜಿಲ್ಲಾ ನ್ಯಾಯಾಧೀಶರೊಡನೆ ಚರ್ಚಿಸುವ ಭರವಸೆಯನ್ನು ನೀಡಿದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link