ಏ.20 ನಂತರ ಈ ವಲಯಗಳಿಗೆ ಸಿಗಲಿದೆ ವಿನಾಯಿತಿ ..!

ನವದೆಹಲಿ:

    ಕೇಂದ್ರ ಸರ್ಕಾರ ಈ ಮೊದಲು ಹೇಳಿದಂತೆ ಕಠಿಣ ಲಾಕ್ ಡೌನ್ ಅವಧಿಯೂ ಇದೇ ಏಪ್ರಿಲ್ 20ಕ್ಕೆ ಕೊನೆಗೊಳ್ಳಲಿದ್ದು ನಂತರದ ಲಾಕ್ ಡೌನ್ ಅವಧಿಯಲ್ಲಿ ಕೆಲವು ವಿನಾಯಿತಿಗಳನ್ನು ಕೊಡುವ ನಿರೀಕ್ಷೆ ಇದ್ದು ಅವುಗಳಲ್ಲಿ ಪ್ರಮುಖವಾಗಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳು , ಸಹಕಾರಿ ಕ್ರೆಡಿಟ್ ಸೊಸೈಟಿಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಕನಿಷ್ಠ ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ವಿನಾಯ್ತಿ ಸಿಗಲಿದೆ ಎಂದು ಗೃಹ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

  ನೀರು ಪೂರೈಕೆ ಮತ್ತು ಶುಚಿತ್ವ, ವಿದ್ಯುತ್ ಪ್ರಸರಣ ವಾಹಕಗಳ ಕೆಲಸ, ಟೆಲಿಕಾಂ ಆಪ್ಟಿಕಲ್ ಫೈಬರ್ ಮತ್ತು ಕೇಬಲ್, ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣ ಕಾಮಗಾರಿಗಳು,ಸಣ್ಣ ಅರಣ್ಯ ಉತ್ಪನ್ನಗಳ ಸಂಗ್ರಹ, ಬೆಳೆ ಮತ್ತು ಸಂಸ್ಕರಣೆ, ಅರಣ್ಯ ಚಟುವಟಿಕೆಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಚಟುವಟಿಕೆಗಳಿಗೂ ವಿನಾಯ್ತಿ ಸಿಗಲಿದೆ ಎನ್ನಲಾಗಿದೆ.

   ಬಿದಿರು, ತೆಂಗಿನಕಾಯಿ, ಅಡಿಕೆ, ಕೊಕ್ಕೊ, ಮಸಾಲೆ ಪದಾರ್ಥ ಬೆಳೆಗಳನ್ನು ಬೆಳೆಯುವುದು, ಸಂಸ್ಕರಣೆ, ಪ್ಯಾಕೆಜಿಂಗ್, ಮಾರಾಟ ಮತ್ತು ಮಾರುಕಟ್ಟೆಗೆ ವಿನಾಯ್ತಿ ನೀಡಲಾಗುತ್ತದೆ. ಹೌಸಿಂಗ್ ಫೈನಾನ್ಸ್ ಕಂಪೆನಿಗಳು ಮತ್ತು ಸಣ್ಣ ಹಣಕಾಸು ಸಂಸ್ಥೆಗಳನ್ನು ಸಹ ಅಗತ್ಯ ಸಿಬ್ಬಂದಿಗಳ ನೆರವಿನೊಂದಿಗೆ ಕಾರ್ಯಚಟುವಟಿಕೆಗೆ ಅವಕಾಶ ನೀಡಲಾಗುತ್ತದೆ. ತಡೆರಹಿತ ವಲಯಗಳಲ್ಲಿ ಏಪ್ರಿಲ್ 20ರಿಂದ ಈ ಚಟುವಟಿಕೆಗಳಿಗೆ ಅನುವು ಮಾಡಿಕೊಡಲಾಗುತ್ತದೆ ಎಂದು ಸಚಿವಾಲಯವು ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap