ಪಾವಗಡ
ತಾಲ್ಲೂಕಿನ ಕರಿಯಮ್ಮನ ಪಾಳ್ಯ ಗ್ರಾಮದಲ್ಲಿನ ಪುರಾತನ ಕಾಲದ ಕೋಟ್ಲಪ್ಪ ದೇವಾಲಯವನ್ನು ನಿಧಿಗಳ್ಳರು ನಿಧಿಗಾಗಿ ಧ್ವಂಸ ಮಾಡಿರುವ ಘಟನೆ ಬುಧÀವಾರ ರಾತ್ರಿ ನಡೆದಿದೆ.
ಗ್ರಾಮದ ಮುಖಂಡ ಓಂಕಾರ್ ನಾಯಕ ಮಾತನಾಡಿ, ಕೋಟ್ಲಪ್ಪ ದೇವಾಲಯ ಸುಮಾರು 500 ವರ್ಷಗಳ ಪುರಾತನ ದೇವಾಲಯವಾಗಿದೆ. ಗುಡಿಯಲ್ಲಿನ ವಿಗ್ರಹ ಮತ್ತು ಚಪ್ಪಡಿ ಬಂಡೆಯನ್ನು ತೆಗೆದು, ಕೋಟ್ಲಪ್ಪ, ಕೋಟಿಲಮ್ಮ ದೇವರುಗಳ ವಿಗ್ರಹಗಳನ್ನು ನಾಶ ಮಾಡಿ, ದೇವಾಲಯದ ಇತಿಹಾಸದ ಕುರುಹುಗಳನ್ನು ನಾಶ ಮಾಡಲಾಗಿದೆ. ಪುರಾತನ ವಿಗ್ರಹಗಳನ್ನು ನಾಶ ಮಾಡಿರುವವರ ವಿರುದ್ದ ಸೂಕ್ತ ಕ್ರಮ ಕೈ ಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸೂಕ್ತ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ :
ನಿಡಗಲ್ ಹೋಬಳಿಯಲ್ಲಿ ನೂರಾರು ಪುರಾತನ ಕಾಲದ ದೇವಾಲಯಗಳನ್ನು ನಿಧಿಗಳ್ಳರು ನಿರಂತರವಾಗಿ ಹಾಳೂ ಮಾಡುತ್ತಿದ್ದಾರೆ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ನಿರಂತರವಾಗಿ ಈ ಭಾಗದಲ್ಲಿ ಪೋಲೀಸ್ ಗಸ್ತು ವ್ಯವಸ್ಥೆ ಕಲ್ಪಿಸಬೇಕು ಹಾಗೂ ಇಂತಹ ಕೃತ್ಯಗಳನ್ನು ಎಸಗುವವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರಿಯಮ್ಮನ ಪಾಳ್ಯದ ಜನತೆ ಒತ್ತಾಯ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ