ಕೃಷಿ ವಿಸ್ತಾರಣ ಕಾರ್ಯಕರ್ತರ ತರಬೇತಿ

ಸಿರುಗುಪ್ಪ :

       ಪ್ರಧಾನ ಮಂತ್ರಿಗಳು ಆಶೆಯದಂತೆ 2022ರ ಒಳಗಾಗಿ ರೈತರ ಆಧಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ರೈತರಿಗೆ ವೈಜ್ಞಾನಿಕ ಕೃಷಿ ತರಬೇತಿಯನ್ನು ನೀಡುವ ಅಂಗವಾಗಿ ಕೃಷಿ ವಿಸ್ತಾರಣದಲ್ಲಿ ರೈತರಿಗೆ ತರಭೇತಿ ನೀಡುವ ತಮಿಳು ನಾಡು, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿನ 25 ಕೃಷಿ ವಿಸ್ತಾರಣ ಅಧಿಕಾರಿಗಳಿಗೆ ತರಬೇತಿಯನ್ನು ನೀಡಲಾಗುತಿದೆ ಎಂದು ರಾ.ಕೃ.ವಿ.ವಿ.ತರಭೇತಿ ಸಹ ನಿದೇರ್ಶಕ ಡಾ.ಮೌಲಸಾಬ್ ತಿಳಿಸಿದರು

       ನಗರದ ಕೃಷಿ ಸಂಶೋಧನ ಕೇಂದ್ರದಲ್ಲಿ ರಾಯಚೂರು ಕೃಷಿ ವಿಶ್ವ ವಿದ್ಯಾಲಯ ಹಾಗೂ ಹೈದ್ರಬಾದ್‍ನ ರಾಷ್ಟ್ರೀಯ ಕೃಷಿ ವಿಸ್ತಾರಣ ಸಂಸ್ಥೆಯ ಸಹಯೋಗದಲ್ಲಿ ಕೃಷಿ ವಿಸ್ತಾರಣ ಕಾರ್ಯಕರ್ತರ ತರಬೇತಿಯ ಕ್ಷೇತ್ರ ಬೇಟಿಯಲ್ಲಿ ಮಾತನಾಡಿದ ಅವರು ರೈತರ ನೇರ ಸಂರ್ಪಕ ಇರುವ ರೈತರಿಗೆ ತರಬೇತಿಯನ್ನು ನೀಡುವ ಮೂಲಕ ಕೃಷಿಯಲ್ಲಿ ಆದಾಯ ಸೃಷ್ಠಿಸಿ ಕೊಳ್ಳುವ ವಿಧಾನಗಳನ್ನು ಹಾಗೂ ಕೃಷಿ ಚಟುವಟಿಕೆಯಲ್ಲಿ ಯುವಕರನ್ನು ತೊಡಗುವಂತೆ ಪ್ರೇರೆಪಿಸುವುದು, 2022ರ ಯೋಜನೆಯಂತೆ ರೈತರಿಗೆ ಕೃಷಿಯಲ್ಲಿ ಆದಾಯವನ್ನು ದ್ವೀಗುಣಗೊಳಿಸುವ ಮಾರ್ಗಗಳನ್ನು ತಿಳಿಸಿಕೊಡುವುದು ತರಬೇತಿಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

         ಕೃ.ಸಂ.ಕೇಂ.ಮುಖ್ಯಸ್ಥ ಡಾ.ಎಂ.ಎ.ಬಸವಣ್ಣೆಪ್ಪ ಮಾತನಾಡಿ ಸಂಶೋಧನ ಕೇಂದ್ರದಲ್ಲಿ ಪ್ರಯೋಗಿಕವಾಗಿ 2.5ಎಕರೆಯಲ್ಲಿ ರೈತ ಕುಟುಂಬ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಹೆಚ್ಚಿನ ಆದಾಯವನ್ನು ಪಡೆದುಕೊಳ್ಳುವ ಬಗ್ಗೆ ಪ್ರಯೋಗಿಕವಾಗಿ ಸಂಶೋಧನೆಯನ್ನು ಕೈಗೊಳ್ಳಲಾಗಿದ್ದು, 1ಎಕರೆಯಲ್ಲಿ ನಿರಂತರ ಆದಾಯ ನೀಡುವ ಬೆಳೆಗಳನ್ನು ಹಾಗೂ ಆರ್ಥಿಕ ಆದಾಯಕ್ಕಾಗಿ ಭತ್ತ, ಗೃಹ ಉಪಯೋಗಕ್ಕಾಗಿ ತರಕಾರಿ ಬೆಳೆ, ಕೃಷಿ ವ್ಯರ್ಥಗಳನ್ನು ಬಳಸಿಕೊಂಡು ಕಾಂಪೋಷ್ಟ ಗೊಬ್ಬರ, ಎರೆಹುಳು ಗೊಬ್ಬರ ತಯಾರಿಕೆ, ಸುಧಾರಿತ ಮೆಕೆ ತಳಿಗಳಾದ ಶಿರೋಯಿ ಮೆಕೆಗಳ ಸಾಕಾಣಿಕೆ, ದೇಸಿ ರಾಸುಗಳ ಸಾಕಣಿಕೆ, ಮೆವಿನ ಬೆಳೆ, ತೋಟಗಾರಿಕ ಬೆಳೆ ಆಳವಡಿಸಿಕೊಂಡಲ್ಲಿ ರೈತರು ನಿಶ್ಚಿತವಾಗಿ ವರ್ಷದ ಎಲ್ಲಾ ಕಾಲದಲ್ಲಿಯೂ ನಿಚ್ಚಿತ ಆದಾಯವನ್ನು ಪಡೆಯಬಹುದು ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ತರಬೇತಿ ಸಂಯೋಜಕ ಡಾ.ತುಳಸಿ ರಾಮ್ ಹಾಗೂ ವಿವಿಧ ರಾಜ್ಯಗಳ 25ಕ್ಕೂ ಹೆಚ್ಚು ಶಿಬಿರಾರ್ಥಿಗಳು ಕ್ಷೇತ್ರ ಬೇಟಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link