ಬೆಂಗಳೂರು
ರಾಜ್ಯದಲ್ಲಿ ನೈರುತ್ಯ ಮುಂಗಾರು ಚುಕುರಾಗಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನ ಅಲ್ಲಲ್ಲಿ ಮಳೆಯಾಗಿದೆ.ಶಿರಾದಲ್ಲಿ 11 ಸೆಂಟಿಮೀಟರ್, ಹಿರಿಯೂರು, ಹೆಚ್‍ಎಂಎಸ್‍ನಲ್ಲಿ 7, ಬುಕ್ಕಾಪಟ್ಟಣ-6, ಜಯಪುರ-4, ಕನಕಪುರ, ಹೊಳೆನರಸೀಪುರ, ಹೆಚ್.ಡಿ.ಕೋಟೆಯಲ್ಲಿ 3, ಆಲೂರು-2, ಧರ್ಮಸ್ಥಳ, ಬೆಳಗಾವಿ ವಿಮಾನ ನಿಲ್ದಾಣ, ಲೋಂಡಾ, ಬೈಲಹೊಂಗಲ, ತಾಳಗುಪ್ಪ, ಕಮ್ಮರಡಿ, ಮಂಡ್ಯ ಹಾಗೂ ಹುಲಿಯೂರು ದುರ್ಗದಲ್ಲಿ ತಲಾ 1 ಸೆಂಟಿಮೀಟರ್ ಮಳೆಯಾಗಿದೆ.
ಕಾರವಾರದಲ್ಲಿ ಗರಿಷ್ಠ ತಾಪಮಾನ 33.2 ಡಿಗ್ರಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 18.3 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿತ್ತು. ಮುನ್ಸೂಚನೆಯಂತೆ ದಕ್ಷಿಣ ಒಳನಾಡಿನ ಹಲವೆಡೆ ಹಾಗೂ ಕರಾವಳಿಯ ಕೆಲವೆಡೆ ಮತ್ತು ಉತ್ತರ ಒಳನಾಡಿನ ಅಲ್ಲಲ್ಲಿ ಮಳೆ ಅಥವಾ ತುಂತುರು ಮಳೆಯಾಗುವ ಸಂಭವವಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ