ಶಿವಶರಣೆ ಅಕ್ಕಮಹಾದೇವಿ ಹುಣ್ಣಿಮೆ ಕಾರ್ಯಕ್ರಮ

ಬ್ಯಾಡಗಿ

     ವಚನ ಸಾಮ್ರಾಜ್ಯದಲ್ಲಿರುವ ಸಾರ್ವಕಾಲಿಕ ಸತ್ಯವನ್ನು ಸಂವಿಧಾನದಲ್ಲಿ ಅಳವಡಿಸಿ ಸರ್ಕಾರಗಳನ್ನು ನಡೆಸಿದಲ್ಲಿ ಮಾತ್ರ ಮೇಲು ಕೀಳು ಸೇರಿದಂತೆ ಜಾತಿರಹಿತ ಸಮಾಜ ನಿರ್ಮಾಣ ಸಾಧ್ಯ ಈ ದಿಶೆಯಲ್ಲಿ ಅಕ್ಕಮಹಾದೇವಿ ಸೇರಿದಂತೆ ಬಸವಾದಿ ಶರಣರ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕಾಗಿದೆ ಎಂದು ಮುಪ್ಪಿನೇಶ್ವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಹೇಳಿದರು.

      ಶುಕ್ರವಾರ ಪಟ್ಟಣದ ಮುಪ್ಪಿನೇಶ್ವರ ಮಠದಲ್ಲಿ ಶಿವಶರಣೆ ಅಕ್ಕಮಹಾದೇವಿ ಹುಣ್ಣಿಮೆ ಕಾರ್ಯಕ್ರಮದಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಸರ್ಕಾರಗಳು ಕೋಟಿಗಟ್ಟಲೇ ಅನುದಾನ ವ್ಯಯಿಸಿ ಯಾವ ಉದ್ದೇಶವನ್ನಿಟ್ಟುಕೊಂಡು ಜಾತಿ ಸಮೀಕ್ಷೆ ನಡೆಸಿದೆ ಎಂಬುದು ಅರ್ಥವಾಗುತ್ತಿಲ್ಲ ಜಾ ತ್ಯಾತೀತ ದೇಶವೆಂಬುದನ್ನು ಕೇವಲ ಭಾಷಣಗಳಲ್ಲಿ ಹೇಳಿದರಷ್ಟೇ ಸಾಲದು ಬದಲಾಗಿ ಆಚರಣೆಗೆ ತರುವ ಮೂಲಕ ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ಮುಂದಾ ಗುವಂತೆ ಸಲಹೆ ನೀಡಿದರು.

      ಬಸವೇಶ್ವರರ ಮಾನವ ಪ್ರೇಮದ ಮಹತ್ಕಾರ್ಯಗಳಲ್ಲಿ ಅಸ್ಪøಶ್ಯತೆ ಮತ್ತು ಸ್ತ್ರೀ ಸಮಾನತೆ ಪ್ರಮುಖವಾಗಿದೆ,ಸ್ತ್ರೀಯರಿಗೆ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಜೊತೆಗೆ ಬೌದ್ಧಿಕ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ನೀಡಿದ್ದಾರೆ. ಅಕ್ಕಮಹಾದೇವಿಯವರಿಗೆ ಅನುಭವಮಂಟಪದಲ್ಲಿ ಉತ್ತಮ ಸ್ಥಾನ ಕಲ್ಪಿಸಿ ಕೊಟ್ಟು ಸ್ತ್ರೀ ಸಮಾನತೆಯನ್ನು ಸಾರಿ ದ್ದಲ್ಲದೇ ಅವರಲ್ಲಿದ್ದ ಅಗಾಧ ಜ್ಞಾನವನ್ನು ಸಮಾಜಕ್ಕೆ ಧಾರೆ ಎರೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

     ಉಪನ್ಯಾಸಕಿ ಚೆನ್ನಮ್ಮ ಕೋರಿಶೆಟ್ಟರ ಮಾತನಾಡಿ, ಶರಣೆ ಅಕ್ಕಮಹಾದೇವಿಯನ್ನು ಯಾವುದೇ ಒಂದು ವರ್ಗ ಧರ್ಮ ಅಥವಾ ಜಾತಿಗೆ ಸೀಮಿತಗೊಳಿಸಬಾರದು, ಅವ ರೊಬ್ಬ ವಿಶ್ವ ಮಾನವರಾಗಿದ್ದಾರೆ ಕಂದಾಚಾರ, ಮೂಢನಂಬಿಕೆ ಇನ್ನಿತರ ಸಾಮಾಜಿಕ ಮೌಢ್ಯಗಳನ್ನು ತೊಲಗಿಸಲು ಶ್ರಮಿಸಿದ ಅವರು, ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಪ್ರಾ ಮಾಣಿಕ ಪ್ರಯತ್ನ ನಡೆಸಿದ್ದಾರೆ ಎಂದರು.

       ಉಪನ್ಯಾಸಕ ರಾಜಕುಮಾರ ತಳವಾರ ಮಾತನಾಡಿ, ವಚನ ಸಾಹಿತ್ಯಗಳಲ್ಲಿ ಅಡಗಿರುವ ದಿವ್ಯಸಂದೇಶಗಳಿಂದ ಸಮಾಜದಲ್ಲಿ ಅಮೂಲಾಗ್ರ ಬದಲಾವಣೆ ತರುವಲ್ಲಿ ಶ್ರಮಿಸಿದ ವಚನಕಾರರಲ್ಲಿ ಅಕ್ಕಮಹಾದೇವಿ ಕೂಡ ಒಬ್ಬರಾಗಿದ್ದು ಧಾರ್ಮಿಕ ತಳಹದಿ ಮೇಲೆ ವಚನಗಳ ಮೂಲಕ ಸಮಾಜ ಪರಿವರ್ತನೆಗೆ ಮುಂದಾಗಿದ್ದ ಅವರು ಸರ್ವಕಾಲಕ್ಕೂ ಪೂಜ್ಯನೀಯ ಎಂದರು.

         ವಿಶೇಷ ಮೆರಗು:ಕಾರ್ಯಕ್ರಮದಂಗವಾಗಿ ಅಕ್ಕಮಹಾದೇವಿಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ಮದ್ಹಾಹ್ನ 12 ಘಂ ಟೆಗೆ ಮುಪ್ಪಿನೇಶ್ವರ ಮಠದ ಆವರಣ ತಲುಪಿತು. ಈ ಸಂದರ್ಭದಲ್ಲಿ ಶರಣ ಶರಣೆಯರಿಂದ ವಚನಗಾಯನ, ಉಡಿ ತುಂಬುವುದೇ ಸೇರಿದಂತೆ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು. ಇದಕ್ಕೂ ಮುನ್ನ ಮಕ್ಕಳಿಗೆ ಬಸವೇಶ್ವರ ಹಾಗೂ ಅಕ್ಕಮಹಾದೇವಿಯ ಪೋಷಾಕು ತೊಡಿಸಿದ್ದು ಮೇರವಣಿಗೆಗೆ ವಿಶೇಷ ರಂಗು ನೀಡಿತ್ತು.

       ಸಭೆಯಲ್ಲ್ಲಿ ಅಕ್ಕಮಹಾದೇವಿ ಬಳಗದ ಅಧ್ಯಕ್ಷೆ ಗುಲಾಬಮ್ಮ ಕಬ್ಬೂರ, ಸುವರ್ಣ ಉಪಾಸಿ, ಶೇಖಮ್ಮ ಮೆಲ್ಮೂರಿ, ಶೀಲಾ ಮೇಲ್ಮುರಿ, ಗೀತಾ ಕಬ್ಬೂರ, ಸಂಪದಾ ಮುಗುದುಂ, ದ್ರಾಕ್ಷಾಯಿಣಿ ಹರಮಗಟ್ಟಿ, ಶಕುಂತಲ, ಶೀಲಾ, ಸವಿತಾ, ಶಾಂತಾ, ಕಮಲವ್ವ, ಜಯವ್ವ, ಅನ್ನಪೂರ್ಣಮ್ಮ, ರತನಮ್ಮ, ಕವಿತಾ, ಜಯಾ, ಪ್ರೇಮಾ, ನಿಂಬಮ್ಮ,ಶಂಕುಂತಲಮ್ಮಾ, ಮೀನಾ, ಮಹೇಶ್ವರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

 

Recent Articles

spot_img

Related Stories

Share via
Copy link