ಹಾನಗಲ:
ತಾಲೂಕಿನ ಹಿರೇಹುಲ್ಲಾಳ, ತುಮರಿಕೊಪ್ಪ, ಅರೇಲಕ್ಮಾಪೂರ ಗ್ರಾಮಗಳಲ್ಲಿ ಒಂದು ವಾರದ ಹಿಂದೆ ಸುರಿದ ಆಲಿಕಲ್ಲು ಸಹಿತ ರಭಸದ ಮಳೆಗೆ ಕೃಷಿ ಬೆಳೆಗಳು ಹಾನಿಗೊಂಡಿವೆ.ಭತ್ತ ಮತ್ತು ನಾಟಿ ಭತ್ತದ ಬೆಳೆ, ಸಿಡ್ಸ್ ಬೆಂಡೆ ಬೆಳೆಯು ಆಲಿಕಲ್ಲು ಮಳೆಗೆ ಸಿಲುಕಿ ಹೆಚ್ಚು ಹಾನಿಗೊಂಡಿದ್ದು, ಈ ಭಾಗದಲ್ಲಿ ಸುಮಾರು 200 ಹೆಕ್ಟರ್ ಭತ್ತ, ಬೆಂಡೆ ಫಲಸು ನಷ್ಟಗೊಂಡಿದೆ ಎಂದು ರೈತರು ಹೇಳಿದ್ದಾರೆ.
ಪರಿಹಾರ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.ಈ ಭಾಗದ ರೈತರಾದ ಹೊನ್ನಗೌಡ್ರ ಮಾಳಗಿ, ಶಂಕ್ರಪ್ಪ ಕೋಟಿ, ಮಹದೇವಗೌಡ ಮಾಳಗಿ, ಬಸನಗೌಡ್ರ ಜೋತೆಗೌಡ್ರ, ಕೃಷ್ಣಪ್ಪ ದೊಡ್ಡಮನಿ ತಮ್ಮ ಬೆಳೆ ಹಾನಿಗೆ ಪ್ರಕೃತಿ ವಿಕೋಪ ಪರಿಹಾರ ಲಭ್ಯವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








