ತುರುವೇಕೆರೆ:
ಏ 18ರಂದು ನೆಡೆಯುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಲೋಪವಾಗದಂತೆ ಪಾರದರ್ಶಕವಾಗಿ ಮಾಡಲು ತಾಲೂಕು ಆಡಳಿತವತಿಯಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಕೆ.ಶಶಿಧರ್ ತಿಳಿಸಿದ್ದಾರೆ.
ಪಟ್ಟಣದ ತಾಲೂಕು ಕಚೇರಿಯಲ್ಲಿ ಪತ್ರಿಕ ಗೋಷ್ಟಿಯಲ್ಲಿ ಮಾತನಾಡಿದ ಅವರು ಈಗಾಗಲೇ ತಾಲೂಕಿನ ಗಡಿ ಬಾಗವಾದ ಬೀಮನ ಹಾರೆ ಹಾಗೂ ಮಾಯಸಚಿದ್ರ ಟಿ.ಬಿ ಕ್ರಾಸ್ ಸೇರಿ 2 ಚಕ್ ಪೋಸ್ಟ್ ನಿರ್ಮಿಸಲಾಗಿದೆ. ಈ ಚಕ್ ಪೋಸ್ಟ್‍ನಲ್ಲಿ 4 ಜನ ಸಿಬ್ಬಂದಿಗಳು 8 ಗಂಟೆಗಳಂತೆ ಮೂರು ತಂಡಗಳು 24 ಗಂಟೆ ಕಾರ್ಯ ನಿರ್ವಹಿಸಲಿದ್ದಾರೆ. ಕ್ಷೇತ್ರದಲ್ಲಿ 226 ಮತಗಟ್ಟೆಗಳಿದ್ದು ಕೆಲವು 10 ಕ್ಕೂ ಹೆಚ್ಚು ಸೂಕ್ಷ್ಮ ಮತಗಟ್ಟೆಗಳನ್ನು ಸ್ಥಾಪಿಸಿ ಸಿ.ಸಿ ಕ್ಯಾಮರ ಅಳವಡಿಸಲಾಗುತ್ತದೆ. ಕ್ಷೇತ್ರದಲ್ಲಿ 177988 ಮತದಾರರಿದ್ದು 89446 ಪುರುಷರು, 88535 ಮಹಿಳೆಯರು, 7 ಇತರೆ ಮತದಾರರು ಇದ್ದಾರೆ. ಹೊಸದಾಗಿ 1500 ಅರ್ಜಿಗಳು ಬಂದಿದ್ದು 400 ಯುವ ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದರು.
ತಹಶೀಲ್ದಾರ್ ನಯೀಂಉನ್ನಿಸಾ ಮಾತನಾಡಿ ತಾಲೂಕು ಕಚೇರಿಯಲ್ಲಿ ಸುವಿದ ಅಪ್ಲಿಕೇಷನ್ ಕೇಂದ್ರವನ್ನು ತೆರದಿದ್ದು ರಾಜಕೀಯ ಪಕ್ಷಗಳು ಕಾರ್ಯಕ್ರಮ ಸೇರಿದಂತೆ ಯಾವುದೇ ಅನುವ್ಮತಿಯನ್ನು ಒಂದೇ ಕೆಡೇ ಅರ್ಜಿ ಸಲ್ಲಿಸಿದ 24 ಗಂಟೆಯೊಳಗೆ ನೀಡಲಾಗುವುದು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಟಾಂಗ್ ರೂಮ್ ಮಾಡಲಾಗಿದೆ ಮಸ್ಟಿರಿಂಗ್, ಡಿ ಮಸ್ಟಿರಿಂಗ್ ನೆಡೆಯಲಿದೆ ಮಾ 28 ರಂದು ಚುನಾವಣೆಯ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುವುದು. ಚುನಾವಣೆಯಲ್ಲಿ ಯಾವುದೇ ಅಕ್ರಮಗಳು ಕಂಡುಬಂದರೆ ಸಾರ್ವಜನಿಕರು ಯಾವುದೇ ಭಯವಿಲ್ಲದೆ ಸಹಾಯವಾಣಿ ದೂರವಾಣಿ ನಂಬರ್ 08139287011 ದೂರು ನೀಡಬಹುದಾಗಿದೆ ಎಂದು ತಿಳಿಸಿದರು. ಈ ಸಂದರ್ಬದಲ್ಲಿ ಸಿಬ್ಬಂದಿ ಕಾಂತರಾಜು ಇದ್ದರು.