ಮಂಕಾಳ್ ವೈದ್ಯ ಹೇಳಿಕೆಗೆ ವ್ಯಾಪಕ ವಿರೋಧ : ಗೃಹ ಸಚಿವರು ಹೇಳಿದ್ದಾದರೂ ಏನು ….?

ಬೆಂಗಳೂರು: 

   ಗೋಕಳ್ಳತನ ಮಾಡುವವರ ಮೇಲೆ ಸ್ಥಳದಲ್ಲೇ ಶೂಟೌಟ್ ಮಾಡಲಾಗುವುದು ಎಂಬ ಕಾಂಗ್ರೆಸ್ ಸಚಿವ ಮಂಕಾಳ್ ವೈದ್ಯ ನೀಡಿದ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

   ಒಂದೆಡೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಮಂಕಾಳು ವೈದ್ಯ ಅವರ ಹೇಳಿಕೆಯನ್ನು ಆರ್ ಎಸ್ಎಸ್ ಮನಸ್ಥಿಗೆ ಹೋಲಿಕೆ ಮಾಡಿದರೆ, ಮತ್ತೊಂದೆಡೆ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದ್ದು ಸಚಿವರ ಹೇಳಿಕೆಯನ್ನು ಖಂಡಿಸಲೂ ಆಗದೇ, ಸಮರ್ಥಿಸಿಕೊಳ್ಳಲೂ ಆಗದೇ ಇರುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಇದೆ. ತಮ್ಮ ಸಹೋದ್ಯೋಗಿ ಸಚಿವ ಮಂಕಾಳ್ ವೈದ್ಯ ಅವರ ಹೇಳಿಕೆಗಳ ಪ್ರತಿಕ್ರಿಯೆ ಕೇಳಿದ ಮಾಧ್ಯಮಗಳಿಗೆ ಉತ್ತರಿಸಿರುವ ಗೃಹ ಸಚಿವ ಡಾ.ಜಿ ಪರಮೆಶ್ವರ್, ಮಂಕಾಳು ವೈದ್ಯ ಅವರದ್ದು ವೈಯಕ್ತಿಕ ಹೇಳಿಕೆ. ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

   ಮಂಕಾಳು ವೈದ್ಯ ಅವರ ಹೇಳಿಕೆಗೆ ಹಲವರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಮಂಕಾಳ್ ವೈದ್ಯ ಸಮಾಜವಾದಿ ಸಿದ್ದರಾಮಯ್ಯ ಅವರ ಸರ್ಕಾರದ ಸಚಿವರಾ? ಮಂಕಾಳು ವೈದ್ಯ ಅವರು ಸಿದ್ದರಾಮಯ್ಯ ಸರ್ಕಾರವನ್ನು ಬಿಜೆಪಿ ಸರ್ಕಾರ ಎಂದು ಭಾವಿಸಿದ್ದಾರಾ? ದನಕಳ್ಳತನ ಮಾಡಿದರೆ ಅವರಿಗೆ ಶಿಕ್ಷೆ ಕೊಡಿಸುವ ವ್ಯವಸ್ಥೆ ಇದೆ ಎಂಬುದನ್ನೂ ಮರೆತು ಮಾತನಾಡುತ್ತಿರುವ ಸಚಿವರ ಹೇಳಿಕೆ ಸರ್ವಾಧಿಕಾರಿತನವನ್ನು ತೋರುತ್ತಿದೆ. ಇಂತಹ ಮಂತ್ರಿಯನ್ನು ತಕ್ಷಣವೇ ಸಿದ್ದರಾಮಯ್ಯ ವಜಾಗೊಳಿಸಬೇಕೆಂಬ ಆಗ್ರಹವೂ ಕೇಳಿಬಂದಿದೆ.

Recent Articles

spot_img

Related Stories

Share via
Copy link