ಕೌಟುಂಬಿಕ ಕಲಹ : ಮನ ನೊಂದು ಪತಿ ಪತ್ನಿ ಮತ್ತು ಮಗು ಆತ್ಮಹತ್ಯೆ.!

ಬೆಂಗಳೂರು

    ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಒಂದೂವರೆ ವರ್ಷದ ಮಗುವಿಗೆ ನೇಣು ಬಿಗಿದು ಕೊಲೆ ಮಾಡಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ, ಮಗುವಿನ ಮೃತ ದೇಹ ಕಂಡು ಹೆದರಿದ ಪತಿ ಕೂಡ ನೇಣಿಗೆ ಶರಣಾಗಿರುವ ದಾರುಣ ಘಟನೆ ಕನಕಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾಋ ನಡೆದಿದೆ.

    ಕನಕಪುರದ ಅಜೀಜ್ ನಗರದ ಹರ್ಷಬಾನು (19) ಹಾಗೂ ಒಂದೂವರೆ ವರ್ಷದ ಮಗು ಇಸ್ಮಾಯಿಲ್‍ಗೆ ನೇಣುಬಿಗಿದ್ದು ಕೊಲೆಗೈದು ತಾನೂ ನೇಣಿಗೆ ಶರಣಾಗಿದ್ದಾರೆ,ಮನೆಯಲ್ಲಿ ಬಿದ್ದಿದ್ದ ಇವರಿಬ್ಬರ ಮೃತದೇಹ ಕಂಡು ಹೆದರಿದ ಪತಿ ಫೈರೋಜ್ (23)ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮೃತ ದಂಪತಿಯ ಮಧ್ಯೆ ಆಗಿಂದಾಗ್ಗೆ ಜಗಳ ನಡೆಯುತ್ತಿತ್ತು. ಕಳೆದ ಮೂರು ದಿನಗಳಿಂದ ಜಗಳ ಅತಿರೇಕಕ್ಕೆ ಹೋಗಿದ್ದು ಪೆÇಲೀಸ್ ಠಾಣೆಯ ಮೆಟ್ಟಿಲೇರಿದ್ದರು ಎಂದು ತಿಳಿದು ಬಂದಿದೆ.

    ಫೈರೋಜ್ ಹಾಗೂ ಹರ್ಷಬಾನು ಮಧ್ಯೆ ಉಂಟಾಗಿದ್ದ ಕಲಹವನ್ನು ಸ್ಥಳೀಯ ಮುಖಂಡರು ಹಾಗೂ ಪೆÇಲೀಸರು ರಾಜಿ ಸಂಧಾನ ಮೂಲಕ ಬಗೆಹರಿಸಿ, ದಂಪತಿಯನ್ನು ಒಂದು ಮಾಡಿದ್ದು ಮತ್ತೆ ಸೋಮವಾರ ಮಧ್ಯಾಹ್ನ ಕೂಡ ಜಗಳ ನಡೆದಿದ್ದು ಪತಿ ಮನೆಯಿಂದ ಹೊರ ಹೋದ ಬಳಿಕ ಹರ್ಷಭಾನು ತನ್ನ ಮಗು ಇಸ್ಮಾಯಿಲ್‍ಗೆ ನೇಣು ಬಿಗಿದು ಕೊಲೆ ಮಾಡಿದ್ದಾಳೆ. ಬಳಿಕ ತಾನೂ ಕೂಡ ನೇಣಿಗೆ ಶರಣಾಗಿದ್ದಾಳೆ.

    ಮನೆಯಿಂದ ಹೊರಗೆ ಹೋಗಿದ್ದ ಫೈರೋಜ್ ಮರಳಿ ಮನೆಗೆ ಬಂದ ವೇಳೆ ಪತ್ನಿ ಹಾಗೂ ಮಗುವಿನ ಸಾವು ಕಂಡು ಭಯಭೀತನಾಗಿ ಆತನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಕನಕಪುರ ಠಾಣೆ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link