ಕಾಲುವೆಯಲ್ಲಿ ಮೊಸಳೆ : ಭಯಭೀತರಾದ ಗ್ರಾಮಸ್ಥರು

ಬಳ್ಳಾರಿ: 

      ಜಿಲ್ಲೆಯ ಸೋಮಲಾಪುರ ಗ್ರಾಮದ  ಕಾಲುವೆಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿ ಗ್ರಾಮಸ್ಥರನ್ನು ಮತ್ತು ಅಲ್ಲಿನ ಜಾನುವಾರುಗಳನ್ನು ತೀವ್ರ ಭೀತಿಗೆ ಗುರಿ ಮಾಡಿದೆ ಎಂದು ನೊಂದ ಗ್ರಾಮಸ್ಥರು ತಿಳಿಸಿದ್ದಾರೆ .

      ಬಿಸಿಲಿನ ಬೇಗೆ ತಾಳಲಾರದೆ ನೀರು ಕುಡಿಯಲು ಹೋದ ಕುರಿ, ಜಾನುವಾರಗಳು ಹಾಗೂ ಯುವಕನ ಮೇಲೆ ಮೊಸಳೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ, ಈ ಘಟನೆಯಿಂದ ಭಯಯಭೀತರಾದ ಗ್ರಾಮಸ್ಥರು ಮೊಸಳೆಯನ್ನು ಹಗ್ಗದಿಂದ ಕಟ್ಟಿ ಹಾಕಿ, ಕುರುಗೋಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ತುಂಗಭದ್ರಾ ಜಲಾಶಯದಿಂದ ಮೊಸಳೆ ಬಂದಿರಬಹುದು ಎಂದು ಸಂಶಯ ವ್ಯಕ್ತವಾಗಿದೆ ಎಂದು ತಿಳೀಸಿದ್ದಾರೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link