ಅಲ್ಪ ಸಂಖ್ಯಾತರ ಜಾಗೃತಿ ಸಮಾವೇಶ

ಹರಪನಹಳ್ಳಿ

       ತಾಲ್ಲೂಕು ಅಲ್ಪ ಸಂಖ್ಯಾತರ ಜಾಗೃತಿ ಸಮಾವೇಶ ಹಾಗೂ ಅಲ್ಪಸಂಖ್ಯಾತರ ಅಸೋಸಿಯೇಷನ್ ಉದ್ಘಾಟನೆ ಮತ್ತು ಪದಗ್ರಹಣ ಕಾರ್ಯಕ್ರಮ ಮೇ 5ರಂದು ಅಯೋಜಿಸಲಾಗಿದೆ ಎಂದು ಅಲ್ಪ ಸಂಖ್ಯಾತರ ಅಸೋಸಿಯೇಷನ್ ಅಧ್ಯಕ್ಷ ಎ.ಮೂಸಾಸಾಹೇಬ್ ತಿಳಿಸಿದ್ದಾರೆ.

        ಪಟ್ಟಣದ ಪ್ರೆಸ್ ಕ್ಲಬ್‍ನಲ್ಲಿ ಶುಕ್ರವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪ ಸಂಖ್ಯಾತರಾದ ಮುಸ್ಲಿಂ ಜೈನ್ ಹಾಗೂ ಕ್ರಿಶ್ಚಿಯನ್ ಸಮಾಜದ ಬಾಂಧವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಅನುದಾನ ಅಥವಾ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಪಕ್ಷಾತೀತವಾಗಿ ಎಲ್ಲಾ ಅಲ್ಪ ಸಂಖ್ಯಾತರು ಒಟ್ಟಾಗಿ ಸರ್ಕಾರದ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಲು ಸಮಾವೇಶ ಸಹಕಾರಿಯಾಗಲಿದೆ.

         ಸಚಿವರಾದ ಜಮೀರ್ ಅಹ್ಮದ್, ಯು.ಟಿ.ಖಾದರ್, ಪಿ.ಟಿ.ಪರಮೇಶ್ವರನಾಯ್ಕ್, ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್‍ಸಾಬ್, ಶಾಸಕ ಜಿ.ಕರುಣಾಕರರೆಡ್ಡಿ ಅಲ್ಲದೇ ಗಣ್ಯರು ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪ ಸಂಖ್ಯಾತರು ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

           ಕಾರ್ಯದರ್ಶಿ ಬಿ.ಮೆಹಬೂಬ್‍ಸಾಬ್, ಸದಸ್ಯರಾದ ಬಡಿಗಿ ರೆಹಮತ್‍ಸಾಬ್, ಹೆಚ್.ಎಸ್.ಸೈಯದ್ ಅಹ್ಮದ್ ಸಾಬ್, ಎಸ್,ಮೆಹಬೂಬ್ ಸಾಬ್, ಅಯೂಬ್‍ಖಾನ್, ಎಂ.ದಾದಾಪೀರ್ ಹಾಗೂ ಇತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link