ಅಂಬೇಡ್ಕರ್ ಹಾಗು ಡಾ.ಬಾಬು ರಾಜೇಂದ್ರ ಪ್ರಸಾದ್ ಜನ್ಮದಿನಾಚರಣೆ

ದೊಡ್ಡೇರಿ:

        ಕ್ರಿಸ್ತಪೂರ್ವ 1800 ವರ್ಷಗಳ ಹಿಂದೆ ವಿದೇಶಿ ಆರ್ಯರು ಸಿಂಧೂ ಕಣಿವೆಯ ಮೂಲಕ ಈ ಭರತಖಂಡದ ಭೂಮಿಗೆ ಆಗಮಿಸುತ್ತಾರೆ ಆರ್ಯರು ಭಾರತಕ್ಕೆ ಬರುವುದಕ್ಕು ಮೊದಲುಅವರಿಗಿಂತಲೂ ಮುಂದುವರೆದಜನಾಂಗವು ಈ ನೆಲದಲ್ಲಿತ್ತು. ಅದುವೆ ನಾಗ
ಜನಾಂಗವು ಬದುಕುತಿದ್ದರೀತಿಯನ್ನು ನಾಗರಿಕತೆಯಂದು ವಾಸಿಸುತ್ತಿದ್ದ ಸ್ಥಳವನ್ನು ನಗರಗಳೆಂದು ಕರೆದರು ಈ ಜನಾಂಗವೇ ಸಿಂದೂ ನಾಗರಿಕತೆಯ ಮತ್ತು ಹರಪ್ಪ ಮಹೆಂಜೋದರೋ ವಾರಸುದಾರರುಎಂದುತುಮಕೂರುಜಿಲ್ಲಾ ನ್ಯಾಯಾಧೀಶರಾದ ಬಾಬಾ ಸಾಹೇಬ್ ಜಿನಾಳ್ಕರ್ ತಿಳಿಸಿದರು.

       ಮಧುಗಿರಿ ತಾಲ್ಲೂಕು ದೊಡ್ಡೇರಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಡಾ//ಬಿಆರ್‍ಅಂಬೇಡ್ಕರ್‍ಯುವಕ ಸಂಘ ಮತ್ತುಆದಿಜಾಂಬವ ಕ್ಷೇಮಾಭಿವೃದ್ದಿ ಸಂಘಗಳ ಸಂಯುಕ್ತಾಆಶ್ರಯದಲ್ಲಿಡಾ ಬಿಆರ್‍ಅಂಬೇಡ್ಕರ್‍ರವರ 128 ನೇ ಹಾಗೂ ಡಾ ಬಾಬು ಜಗಜೀವರಾಮ್112ನೇ ಜನ್ಮದಿನಾಚರಣೆಯಕಾರ್ಯಕ್ರಮವನ್ನುಉದ್ಘಾಟನೆ ನೆರವೇರಿಸಿ ಮಾತನಾಡಿದತುಮಕೂರುಜಿಲ್ಲಾ ನ್ಯಾಯಾಧೀಶರಾದ ಬಾಬಾ ಸಾಹೇಬ್ ಜಿನಾಳ್ಕರ್ ಮಾತನಾಡುತ್ತಅಂಬೇಡ್ಕರ್ರವರು ಈ ದೇಶದಲ್ಲಿನಅಸ್ಪಶ ಜಾತಿಗಳ ಅಸಮಾನತೆಯನ್ನು ಹೋಗಲಾಡಿಸಲು ಅನೇಕ ಕ್ರಾಂತಿಕಾರಿ ಹೆಜ್ಜೆಯನ್ನಯಿಟ್ಟ ಮಹಾತ್ಮರು

       ಈ ದೇಶದಲ್ಲಿ ಮನು ಸಂಸ್ಕತಿಯ ಸಂವಿಧಾನವನ್ನು ಹರಿದು ಸುಟ್ಟುಹಾಕಿದ ಮಹಾನ್ ನಾಯಕಜಗತ್ತಿನಲ್ಲಿಯೇಕಂಡರಿಯದಂತಹ ಸಂವಿಧಾನವನ್ನು ನಮ್ಮದೇಶಕ್ಕೆ ರಚಿಸಿಕೊಟ್ಟಿರುತ್ತಾರೆ.ಅಲ್ಲದೆ ಈ ದೇಶದಲ್ಲಿ ಮತದಾನದ ಹಕ್ಕು ಕೇವಲ ಜಮೀನ್ದಾರರಿಗೆ ಪಧವೀದಾರರಿಗೆ ಸರ್ಕಾರಿಉದ್ಯೋಗಿಗಳಿಗೆ ಮಾತ್ರಓಟಿನ ಮಹತ್ವಇತ್ತುಇದನ್ನುಅರಿತ ಬಾಬಾ ಸಾಹೇಬರುಎಲ್ಲಾ ಸಮುದಾಯದವರಿಗೂ ಮತದಾನದ ಮಹತ್ವವನ್ನು ಕೊಡಿಸಿಕೊಟ್ಟವರು ಅಂಬೇಡ್ಕರ್‍ರವರುಎಂದು ಹೇಳಿದರು.

      ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದಡಿ.ಟಿ ವೆಂಕಟೇಶ್‍ಅಂಬೇಡ್ಕರ್ ಮತ್ತು ಬಾಬು ಜಗಜೀವನೆರಾಮ್ ಈ ಮಹಾನ್ ನಾಯಕರು ಗಳು ಒಂದೇ ನಾಣ್ಯದಎರಡು ಮುಖಗಳಿದಂತೆ ಅಂಬೇಡ್ಕರ್‍ರವರು ಶೋಷಣೆಯ ವಿರುದ್ದ ಕ್ರಾಂತಿಕಾರಿಗಳಾದರೆ ಬಾಬು ಜಗಜೀವನರಾಮ್‍ರವರು ಶಾಂತಿ ಪುರುಷರಂತೆ ಈ ದೇಶದಲ್ಲಿ ನೆಹರು ಮಂತ್ರಿ ಮಂಡಲದಲ್ಲಿ ಉಪ ಪ್ರಧಾನಿಯಾಗಿ ಮತ್ತು ಕೃಷಿ ಮಂತ್ರಿಗಳಾಗಿ ಈ ದೇಶಕ್ಕೆಅನ್ನದಆಹಾರದಕೊರತೆಇದ್ದಾಗ ವಿದೇಶದಿಂದ ಕೆಂಪು ಜೋಳ ಕೊಡುವುದರ ಮೂಲಕ ಹಸಿವಿನ ದಾಹವನ್ನು ತೀರಿಸಿ ಹಸಿರು ಕ್ರಾಂತಿಯ ಹರಿಕಾರರಾಗಿಜನ ಮನ್ನಣೆಗೆ ಪಾತ್ರರಾಗಿದ್ದರುಎಂದು ತಿಳಿಸಿದರು.

      ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನುದೊಡೇರಿಕಣಿಮಯ್ಯ ನುಡಿಗಳನ್ನಾಡಿದರು ಕಾರ್ಯಕ್ರಮದಲ್ಲಿ ಸಾಹಿತಿಡಾ ಶಿವಲಿಂಗಯ್ಯ ಉಪನ್ಯಾಸಕ ಲಕ್ಷ್ಮಿರಂಗಯ್ಯತಾ.ಪಂ.ಸದಸ್ಯ ಪ್ರಸನ್ನಕುಮಾರ್, ಗ್ರಾಂ.ಪಂ ಅಧ್ಯಕ್ಷರಾದ ಲಕ್ಷ್ಮಿದೇವಮ್ಮರಾಜಣ್ಣ, ಕೃಷ್ಣನಾಯಕ, ಇವರುಗಳು ಸಂದರ್ಭದಲ್ಲಿ ಮಾತನಾಡಿದರು ಡಿ.ಟಿ ರಮೇಶ್, ಮಂಜುನಾಥ, ಡಿಎಲ್ ನರಸಿಂಹಮೂರ್ತಿ ಭರತ್.ಡಿ.ಎಲ್, ಸತೀಶ್,ರಾಮಚಂದ್ರ, ನಂದೀಶ್,ನಾಗರಾಜು, ಮಾರಣ್ಣ, ಕೆ.ಶಿವಣ್ಣ, ಮಹಾಲಿಂಗಯ್ಯ,ಆಶಾ, ರಘುನಂದನ್, ಬಸವರಾಜು,ರಾಜುಡಿಎನ್, ಗುರುಲಿಂಗಯ್ಯ, ಲಕ್ಷ್ಮೀಕಾಂತ್, ರಾಜುಯಲದಬಾಗಿ,ಹಾಗೂ ಸಂಘದ ಪದಾದಿಕಾರಿಗಳು ಊರಿನಗ್ರಾಮಸ್ಥರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link