ಅಂಬೇಡ್ಕರ್ ತಂತ್ರಗಾರಿಕೆ ಪ್ರಸ್ತುತ ದಲಿತರ ರಾಜನೀತಿಯಾಗಬೇಕು;ಮಾಲಗತ್ತಿ

ಚಿತ್ರದುರ್ಗ

       ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ದಲಿತರ ಮತ್ತು ದೇಶದ ಎರಡು ಕಣ್ಣುಗಳು. ಪಕ್ಷದೊಳಗೆ ಇದ್ದುಕೊಂಡು ಮತ್ತು ಹೊರಗಿದ್ದುಕೊಂಡು ಮಾಡುವ ಇರ್ವರ ರಾಜಕೀಯ ತಂತ್ರಗಾರಿಕೆ ದಲಿತರ ರಾಜನೀತಿಯಾಗಬೇಕಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದಮಾಲಗತ್ತಿ ಸೂಚ್ಯವಾಗಿ ಹೇಳಿದರು.

        ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ, ಎ.ಕೆ.ಮಾರಪ್ಪ ಶಾಂತಮ್ಮ ಸ್ಮಾರಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಡಾ.ಬಾಬೂ ಜಗಜೀವನರಾಮ್ ಚಿಂತನಾ ಮಾರ್ಗ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

         ಅಂಬೇಡ್ಕರ್ ಕಾಂಗ್ರೆಸ್ ಪಕ್ಷ ಉರಿಯುವ ಮನೆ ಎಂದು ಪಕ್ಷದಾಚೆಗೆ ಇದ್ದುಕೊಂಡು ರಾಜಕೀಯ ಮೂಲಕ ಶೋಷಿತರು ನೊಂದವರ ಬಾಳಿಗೆ ಬೆಳಕು ನೀಡಿದರೆ ಬಾಬೂ ಜಗಜೀವನರಾಮ್ ಪಕ್ಷದ ಒಳಗೆ ಇದ್ದುಕೊಂಡೆ ಆ ಕೆಲಸ ಮಾಡಿದರು. ಇವರಿಬ್ಬರ ರಾಜತಂತ್ರಗಾರಿಕೆಯನ್ನು ಇಂದು ದಲಿತರು ಅನುಸರಿಸಬೇಕಾಗಿದೆ. ಬಾಬೂ ಜಗಜೀವನರಾಂ ಬನರಾಸ್‍ನಲ್ಲಿ ಪುತ್ಥಳಿ ಅನಾವರಣಗೊಳಿಸಿ ಬಂದ ಮೇಲೆ ಇಡೀ ಆವರಣವನ್ನು ಗೋ ಮೂತ್ರ ಮೂಲಕ ಸ್ವಚ್ಚಗೊಳಿಸಲಾಯಿತು. ಇಂದಿನ ರಾಷ್ಟ್ರಪತಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದುಹೋದ ಮೇಲೆ ದೇವಸ್ಥಾನವನ್ನೇ ಸ್ವಚ್ಛಗೊಳಿಸಲಾಯಿತು. ಜಾತಿ ವ್ಯವಸ್ಥೆ ಹೆಮ್ಮರವಾಗಿದೆ. ಉನ್ನತ ಸ್ಥಾನದಲ್ಲಿದ್ದರು ಜಾತಿಯಿಂದ ಕೆಳಗಿಳಿಸುವುದಿಲ್ಲ. ಜಾತಿಯಿಂದಲೇ ನೋಡುವಂತಾಗಿದೆ. ಗಾಂಧೀಜಿ ಅಸ್ಪಶ್ಯ್ರತೆ ದೇಶಕ್ಕೆ ಅಂಟಿರುವ ಕಳಂಕ ಎಂದಿದ್ದರು. ಅದನ್ನು ಮನಸ್ಸಿನಿಂದ ತೊಳೆಯಬಹುದಲ್ಲವೆ ಎಂದರು.

         ಕೃಷಿ ಖಾತೆ ವಹಿಸಿಕೊಂಡರೆ ಭವಿಷ್ಯವೇ ಇಲ್ಲ ಎನ್ನುವ ಕಾಲದಲ್ಲಿ ಕೃಷಿ ಸಚಿವರಾಗಿ ಕೃಷಿ ಕ್ಷೇತ್ರದಲ್ಲಿ ಹಸಿರು ಕ್ರಾಂತಿ ಮಾಡಿದ ಬಾಬೂ ಜಗಜೀವನರಾಮ್ ಕಪ್ಪು ವಜ್ರ. ಅದನ್ನು ಎಷ್ಟೇ ಕತ್ತರಿಸಿದರೂ ಅದರ ಪ್ರಭೇಧ ಕಡಿಮೆಯಾಗುವುದಿಲ್ಲ. ಅಂಬೇಡ್ಕರ್ ಮತ್ತು ಬಾಬೂ ನಡುವೆ ವೈಯಕ್ತಿಕ ಸಂಬಂಧ ಗಟ್ಟಿಯಾಗಿತ್ತು. ಆದರೆ ರಾಜಕೀಯದಲ್ಲಿ ಭಿನ್ನಾಭಿಪ್ರಾಯವಿತ್ತು. ಆದರೂ ಇಬ್ಬರು ಶೋಷಿತರ ಕಲ್ಯಾಣಕ್ಕಾಗಿ ದುಡಿದವರು. ಭೀಮ ಮತ್ತು ರಾಮ್ ಇವೆರೆಡರ ಶಕ್ತಿ ಅತ್ಯಂತ ದೊಡ್ಡ ಶಕ್ತಿ. ಇವರಿಬ್ಬರ ರಾಜನೀತಿಯನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

       ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರಿನ ಪ್ರೊ.ಸಿ.ನಾಗಣ್ಣ, ಪ್ರಧಾನಿಪಟ್ಟ ಬಾಬೂ ಅವರಿಗೆ ಸಿಗಲಿಲ್ಲ ಅಂದರೆ ತಪ್ಪಿಸಲಾಯಿತು. ಈಗಲಾದರೂ ಆ ವರ್ಗಕ್ಕೆ ಸೇರಿದ ನಾಯಕರು ದೇಶದ ಅತ್ಯುನ್ನತ ಪಟ್ಟವನ್ನು ಅಲಂಕರಿಸುವ ಸಂಕಲ್ಪ ಮಾಡಬೇಕಾಗಿದೆ. ಬಾಬೂ ಅಂತಹ ಶ್ರೇಷ್ಟ ಸಂಸದಪಟು ಶತಮಾನವಾದರೂ ಕಾಣಲು ಸಾಧ್ಯವಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಈಗ ದೆಹಲಿಯಲ್ಲಿ ಆರ್ಥಿಕ ಪ್ರಗತಿ ಸಾಧಿಸಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಬಾಬೂ ಜಗಜೀವನರಾಮ್ ಅವರ ಪ್ರಕಾರ ಕಡುಬಡವರ ಉದ್ದಾರವಾಗದೆ ದೇಶ ಉದ್ದಾರವಾಗುದಿಲ್ಲ. ಇಂದು ಸಂಸತ್‍ನಲ್ಲಿ ಅನಗತ್ಯ ಚರ್ಚೆ ನಡೆಯುತ್ತಿದೆ. ಬಾಬೂ ಅವರು ಸಂಸದರಾಗಿದ್ದಾಗ ಹಾಗೂ ಸಚಿವರಾಗಿದ್ದಾಗ ನಿಜವಾದ ಅಭಿವೃದ್ದಿ ಬಗ್ಗೆ ಚರ್ಚೆಯಾಗುತ್ತಿತ್ತು. ವಿರೋಧ ಪಕ್ಷಗಳು ಎಷ್ಟೇ ಮೊನಾಚಾರ ಪ್ರಶ್ನೆ ಮಾಡಿದೂ ಸಮಯಚಿತ್ತದಿಂದ ಉತ್ತರ ನೀಡುತ್ತಿದ್ದರು. ಇದು ಮಾದರಿಯಾಗಬೇಕಾಗಿದೆ ಎಂದರು.

         ಬಾಬೂ ಅಪ್ಪಟ ರಾಷ್ಟ್ರವಾದಿ. ಪ್ರಧಾನಿ ಕೈ ತಪ್ಪುತ್ತದೆ ಎಂದು ಗೊತ್ತಿದ್ದರು ಅಡ್ಡದಾರಿ ಹಿಡಿಯಲಿಲ್ಲ. ಮುಖ್ಯವಾಗಿ ಸ್ವಾಭಿಮಾನಿ. ಬಾಲ್ಯದಲ್ಲಿಯೇ ತಪ್ಪನ್ನು ಧೈರ್ಯದಿಂದ ಹೇಳುವ ಎದೆಗಾರಿಕೆ ಇತ್ತು. ಕೃಷಿ ಸಚಿವರಾಗಿದ್ದ ವೇಳೆಯಲ್ಲಿ ಉತ್ತಮ ಮಳೆಯಾಗಿ ನಾಡು ಸುಭಿಕ್ಷೆಯಾಗಿತ್ತು. ಇದರಿಂದಲೇ ಅವರನ್ನು ಅದೃಷ್ಟಶಾಲಿ ಸಚಿವ ಎಂದೇ ಕರೆಯಲಾಗುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಬಾಬೂ ಅವರು ಆಧುನಿಕ ಭಾರತದ ಶಿಲ್ಪಿ ಎಂದು ಬಣ್ಣಿಸಿದರು.

         ಡಾ.ಬಾಬೂ ಜಗಜೀವನರಾಮ್ ಅಧ್ಯಯನ ಕೇಂದ್ರದ ವಿಶ್ರಾಂತ ನಿರ್ದೇಶಕ ಡಾ.ಮೈನಹಳ್ಳಿ ರೇವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಎ.ಕೆ.ಹಂಪಣ್ಣ ಕಾರ್ಯಕ್ರಮ ನಿರೂಪಿಸಿದರು. ಡಾ.ಸಂಗಮೇಶ್ ಸ್ವಾಗತಿಸಿದರು. ಇದಾದ ಬಳಿಕ ಎರಡು ಗೋಷ್ಠಿಗಳಲ್ಲಿ ಲೇಖಕರು ವಿಷಯ ಮಂಡಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link