ಆಂಬಿಡೆಂಟ್ ಕಂಪನಿಯ ಆಸ್ತಿ ಜಪ್ತಿ ಮಾಡಿದ ಪೊಲೀಸರು

ಬೆಂಗಳೂರು

      ನೂರಾರು ಕೋಟಿರೂಗಳ ವಂಚನೆ ನಡೆಸಿರುವ ಆಂಬಿಡೆಂಟ್ ಕಂಪನಿಯ ಆಸ್ತಿ ಜಪ್ತಿ ಮಾಡಿ ವಂಚಿಸಿರುವ ಹೂಡಿಕೆದಾರರ ಹಣ ಹಿಂದಿರುಗಿಸಲು ರಾಜ್ಯ ಸರ್ಕಾರ ಮುಂದಾಗಿದೆ.

       ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಕಾರಣದಿಂದ ಹೂಡಿಕೆದಾರರ ಹಿತ ಕಾಪಾಡಬೇಕಾಗಿದೆ. ಹೀಗಾಗಿ, ಹಣಕಾಸು ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಿದ ಹೂಡಿಕೆದಾರರ ಹಿತರಕ್ಷಣೆ ಕಾಯ್ದೆ ಸೆಕ್ಷನ್- 5ರ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸಿ ಜಪ್ತಿ ಮಾಡಲು ಉತ್ತರ ಉಪ ವಿಭಾಗದ ಉಪ ವಿಭಾಗಾಧಿಕಾರಿಯನ್ನು ಹೂಡಿಕೆದಾರರ ಹಿತರಕ್ಷಣೆ ಕಾಯ್ದೆಯ ಸಮರ್ಪಕ ಜಾರಿಗೆ ನಿಯೋಜಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದ ಸರ್ಕಾರ ತಿಳಿಸಿದೆ.

       ಆಂಬಿಡೆಂಟ್ ಕಂಪನಿ ಪಾಲುದಾರರು, ನಿರ್ದೇಶಕರು, ವ್ಯವಸ್ಥಾಪಕರು, ಪ್ರಚಾರಕರು ಮತ್ತು ವ್ಯಸ್ಥಾಪಕರು ಸೇರಿದಂತೆ ಈ ಕಾಯ್ದೆಯ ಸೆಕ್ಷನ್ 3(2) ರ ಅಡಿಯಲ್ಲಿ ಕಂಪನಿಯ ಜೊತೆಗೆ ವ್ಯವಹರಿಸಿರುವ ಇತರರ ಚರ ಮತ್ತು ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಿಕೊಂಡು ಸಾರ್ವಜನಿಕರ ಹಣ ಹಿಂದಿರುಗಿಸುವ ಹೊಣೆ ಉತ್ತರ ಉಪ ವಿಭಾಗಾಧಿಕಾರಿಯ ಮೇಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

      ಆಂಬಿಡೆಂಟ್ ಕಂಪನಿಯ ಜೊತೆಗ ವ್ಯವಹಾರ ಇರಿಸಿಕೊಂಡು ಆಸ್ತಿಪಾಸ್ತಿ ಮಾಡಿರುವವರ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದ ನೆಪದಲ್ಲಿ ಕಂಪನಿಯಿಂದ ಹಣ ಪಡೆದಿರುವವರ ಬಗ್ಗೆ 080-22210076 ಹಾಗೂ 9916505331, 9480331096 ದೂರವಾಣಿ ಸಂಖ್ಯೆಗೆ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap