ಬಿಜೆಪಿ ಸರ್ಕಾರ ಬಿದ್ದೋಗುತ್ತದೆ: ದಿನೇಶ್

ಬೆಂಗಳೂರು

  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸರ್ಕಾರಕ್ಕೆ ಈಗಲೂ ಬಹುಮತವಿಲ್ಲ, ಉಪ ಚುನಾವಣೆಯ ಬಳಿಕವು ಬಹುಮತ ಸಿಗಲು ಸಾಧ್ಯವಿಲ್ಲ. ಹೀಗಾಗಿ ಖಂಡಿತವಾಗಿ ಈಗಿರುವ ಬಿಜೆಪಿ ಸರ್ಕಾರ ಬಿದ್ದೋಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭವಿಷ್ಯ ನುಡಿದಿದ್ದಾರೆ.

   ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಚುನಾವಣೆಯಲ್ಲಿ ಹಣ, ಅಧಿಕಾರ, ಜಾತಿ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಜನರು ಸ್ವಚ್ಛ ರಾಜಕಾರಣ ಬಯಸುತ್ತಿದ್ದಾರೆ. ಹೀಗಾಗಿ ಬಿಜೆಪಿ ಹಾಗೂ ಅನರ್ಹ ಶಾಸಕರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಹೀಗಾಗಿ ಉಪ ಚುನಾವಣೆಯ ಬಳಿಕವೂ ಬಿಜೆಪಿಗೆ ಬಹುಮತ ಬರುವುದಿಲ್ಲ ಎಂಬ ಕಾರಣಕ್ಕೆ ಬಿಜೆಪಿಯವರು 2ನೇ ಹಂತದ ಆಪರೇಷನ್ ಕಮಲ ನಡೆಸಲು ಓಡಾಡುತ್ತಿದ್ದಾರೆ. ಇದಕ್ಕೆ ಶ್ರೀನಿವಾಸ್ ಗೌಡರವರ ಮನೆಗೆ ಹೋಗಿ ಆಮಿಷ ತೋರಿಸಿರುವುದು ಸಾಕ್ಷಿ ಎಂದು ಆರೋಪಿಸಿದರು.

  ಬಿಜೆಪಿಯವರ ಆಡಿಯೋ, ವಿಡಿಯೋ ಎರಡನ್ನು ನೋಡಿದ್ದೇವೆ. ಆದರೂ ಇಡೀ ದೇಶದಲ್ಲಿ ಇವರಂತಹ ಸತ್ಯವಂತರು ಯಾರು ಇಲ್ಲ ಎನ್ನುವಂತೆ ಓಡಾಡುತ್ತಿದ್ದಾರೆ. ಬಿಜೆಪಿಗೆ ಅಧಿಕಾರ ಮುಖ್ಯವೇ ಹೊರತು ರಾಜ್ಯದ ಅಭಿವೃದ್ಧಿ ಅಲ್ಲ. ಯಡಿಯೂರಪ್ಪನವರು ಜಾತಿ ಹೆಸರಲ್ಲಿ ಮತ ಕೇಳುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

    ವಾಮಮಾರ್ಗದಿಂದಾದರೂ ಅಧಿಕಾರ ಹಿಡಿಯಬೇಕು ಎನ್ನುವುದು ಬಿಜೆಪಿಯ ಆಶಯವೇ ಆಗಿದೆ. ಹೀಗಾಗಿ ಈಗ ಮತ್ತೇ 2ನೇ ಹಂತದ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂದು ಆರೋಪಿಸಿದ ಅವರು, ಬಿಜೆಪಿಯವರು ಸಿದ್ದರಾಮಯ್ಯನವರನ್ನು ಏಕಾಂಗಿ ಎಂದು ಜರೆದರು. ನನ್ನನ್ನು ಬಫೂನ್ ಎಂದು ಕರೆದರು. ಈಗ ಅವರಿಗೆ ಇಷ್ಟ ಬಂದಂತೆ ಮಾತನಾಡುತ್ತಿದ್ದು, ಅದರ ಕುರಿತು ನಾವು ಮಾತನಾಡಿದರೆ ಚರ್ಚೆ ತಾರಕಕ್ಕೆ ಏರುತ್ತದೆ. ಹೀಗಾಗಿ ಆ ಬಗ್ಗೆ ನಾವು ಹೆಚ್ಚು ಮಾತನಾಡದಿರುವುದೇ ಒಳ್ಳೆಯದು ಎಂದರು.

    ಮುಖ್ಯಮಂತ್ರಿ ಯಡಿಯೂರಪ್ಪನವರು ಚುನಾವಣಾ ಪ್ರಚಾರದಲ್ಲಿ ಅನರ್ಹ ಶಾಸಕರನ್ನು ಮಂತ್ರಿ, ಡಿಸಿಎಂ ಮಾಡ್ತಿವಿ ಎಂಬುದಾಗಿ ಪ್ರಚಾರ ಮಾಡುವುದಲ್ಲದೇ, ಜಾತಿ ಹೆಸರಲ್ಲಿ ಮತಗಳನ್ನು ಕೇಳುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಈ ರೀತಿ ಹೇಳುವಂತಿಲ್ಲ. ಹೀಗಾಗಿ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದರು.

    ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ದೇಶ ನಡೆಸಲು ಬರುವುದಿಲ್ಲ. ಜಿಡಿಪಿ ಕುಸಿದು, ರೂಪಾಯಿ ಮೌಲ್ಯ ಕುಸಿದಿದೆ. ಮೂರ್ಖತನದ ಆರ್ಥಿಕ ನೀತಿಯಿಂದ ಜಿಡಿಪಿ ಕುಸಿದಿದೆ ಎಂದು ಟೀಕಿಸಿದರು.ನಾವು ಜೆಡಿಎಸ್ ಅನ್ನು ಕೂಡ ನಂಬುವುದಿಲ್ಲ. ಮೊದಲು ಒಂದು ರೀತಿಯಾಗಿ ಮಾತನಾಡಿದರು. ತದನಂತರ ಬೇರೆ ರೀತಿ ಮಾತನಾಡಿದರು. ನಮ್ಮವರೇ ನಮ್ಮನ್ನು ಮೋಸಗೊಳಿಸಿದರು. ನಾವು ಯಾರನ್ನು, ಯಾವ ರೀತಿಯಾಗಿ ನಂಬಬೇಕು ಎಂದು ಸುದ್ದಿಗಾರರ ಪ್ರಶ್ನೆಗೆ ಮರು ಪ್ರಶ್ನೆ ಹಾಕಿದರು.

    ಬಿಜೆಪಿಯವರು ಏನೂ ತಪ್ಪು ಮಾಡಿಲ್ಲ ಎನ್ನುವಂತೆ ಮಾತನಾಡುತ್ತಾರೆ. ಇಡೀ ದೇಶದಲ್ಲಿ ಇವರಂಥ ಸತ್ಯವಂತರೇ ಇಲ್ಲ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಬಿಜೆಪಿಗೆ ಅಧಿಕಾರ ಮುಖ್ಯವೇ ಹೊರತು ರಾಜ್ಯದ ಅಭಿವೃದ್ಧಿ ಅಲ್ಲ ಎಂಬುದು ಜನರಿಗೆ ಗೊತ್ತಿದೆ ಎಂದು ಟೀಕಿಸಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link