ಕೊಟ್ಟೂರು
ಸಾಲದ ಬಾಧೆಗೆ ಒಳಗಾಗಿ ಮಧ್ಯವ್ಯಸನಿಯಾಗಿದ್ದ ಚಾಲಕ ಜೀವನದಲ್ಲಿ ಜಿಗುಪ್ಸೆಗೊಂಡು ವಾಸದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಟ್ಟೂರಿನಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಟಿ. ಮಂಜುನಾಥ (28) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಖಾಸಗಿ ಓಮ್ನಿ ಅಂಬ್ಯುಲೆನ್ಸ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಮಂಜುನಾಥ ಇತ್ತೀಚಿಗೆ ಓಮ್ನಿ ವಾಹನಕ್ಕೆ ಬಾಡಿಗೆಗಳು ಕಡಿಮೆಯಾಗಿ ಸಾಲದ ಹಣದಿಂದ ತಂದ ಓಮ್ನಿ ಹಣದ ಕಂತನ್ನು ಕಟ್ಟಲು ತೊಂದರೆಯಾಗುತ್ತಿದೆ ಎಂದು ಬೇಸರವನ್ನು ಸ್ನೇಹಿತರ ಬಳಿ ವ್ಯಕ್ತಪಡಿಸಿದ್ದ ಜೊತೆಗೆ ಮಧ್ಯೆವ್ಯಸನಿಯಾಗಿ ವಿಪರೀತ ಕುಡಿತಕ್ಕೆ ದಾಸನಾಗಿದ್ದ ಎಂದು ಗೊತ್ತಾಗಿದೆ.
ಪತ್ನಿ ಮತ್ತು ತಾಯಿಯನ್ನು ಸಹೋದರನ ಮನೆಗೆ ಕಳುಹಿಸಿ ಭಾನುವಾರ ತನ್ನ ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಂಜುನಾಥ ಈ ಕಾರಣಕ್ಕಾಗಿ ಮನೆಯಲ್ಲಿನ ಪ್ಯಾನ್‍ಗೆ ಪ್ಲಾಸ್ಟಿಕ್ ಹಗ್ಗ ಬಿಗಿದುಕೊಂಡು ನೇಣು ಬಿಗಿದುಕೊಂಡಿದ್ದಾರೆ. ಬೆಳಗ್ಗೆ 10ರಿಂದ 01 ಗಂಟೆಯೊಳಗೆ ಈ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ.
ಪತ್ನಿ ಊಟವನ್ನು ತಂದು ಬಾಗಿಲು ಬಡಿದರೂ ಬಾಗಿಲು ತೆರೆಯದ ಕಾರಣಕ್ಕಾಗಿ ಸಹೋದರ ಕೊಟ್ರೇಶ ಬಂದು ಬಾಗಿಲನ್ನು ಮುರಿದು ಪ್ರವೇಶಿಸಿದಾಗ ಮಂಜುನಾಥ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಸಂಬಂಧ ಸಹೋದರ ಕೊಟ್ರೇಶ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.