ರಟ್ಟೀಹಳ್ಳಿ :
ಸಮೀಪದ ಮಾಯತಮ್ಮನ ಮುಚುಡಿ ಗ್ರಾಮದ ಕವಿತಾ ವಿರೇಶ್ ಭಜಂತ್ರಿ ಎಂಬ ಮಹಿಳೆಯನ್ನ ತುರ್ತು ಚಿಕಿತ್ಸೆಗಾಗಿ ಹಿರೇಕೆರೂರು ಸಾರ್ವಜನಿಕ ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ಶಿವಮೊಗ್ಗಕ್ಕೆ ಏಪ್ರಿಲ್ 8 ರಂದು ಕರೆದೊಯ್ಯಲಾಯಿತು. ರೋಗಿಯ 2 ಗ್ರಾಂ ಚಿನ್ನದ ಕಿವಿ ಓಲೇ ಆಂಬುಲೆನ್ಸನಲ್ಲಿಯೇ ಬಿದ್ದಿತ್ತು, ಇಂದು ವಾಹನ ಸ್ವಚ್ಛ ಗೊಳಿಸುವ ವೇಳೆ ಓಲೆ ಕಂಡು ಕುಟುಂಬಸ್ಥರಿಗೆ ವಿಷಯ ತಿಳಿಸಿ, ಆ ಮಹಿಳೆಯ ಓಲೆಯನ್ನು ಅವರ ಕುಟುಂಬದವರಿಗೆ ಮುಟ್ಟಿಸಿ ಚಾಲಕ ಉಮೇಶ ಅಣ್ಣಿಗೇರಿ ಮಠದ ಮಾನವೀಯತೆ ಮೆರೆದಿದ್ದಾರೆ.ಇವರ ಮಾನವೀಯತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ